ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
164 : 7

وَاِذْ قَالَتْ اُمَّةٌ مِّنْهُمْ لِمَ تَعِظُوْنَ قَوْمَا ۙ— ١للّٰهُ مُهْلِكُهُمْ اَوْ مُعَذِّبُهُمْ عَذَابًا شَدِیْدًا ؕ— قَالُوْا مَعْذِرَةً اِلٰی رَبِّكُمْ وَلَعَلَّهُمْ یَتَّقُوْنَ ۟

ಅಲ್ಲಾಹನು ನಾಶಗೊಳಿಸಿಲಿರುವ ಅಥವಾ ಕಠಿಣವಾಗಿ ಶಿಕ್ಷಿಸಲಿರುವ ಒಂದು ಜನತೆಗೆ ನೀವೇಕೆ ಉಪದೇಶಿಸುತ್ತಿರುವಿರಿ? ಎಂದು ಅವರ ಪೈಕಿ ಗುಂಪೊAದು ಹೇಳಿದ ಸಂದರ್ಭ ಅವರು ಹೇಳಿದರು: ಇದು ನಿಮ್ಮ ಪ್ರಭುವಿನ ಬಳಿ ಹೊಣೆ ಮುಕ್ತರಾಗಲೆಂದಾಗಿದೆ ಮತ್ತು ಪ್ರಾಯಶಃ ಅವರು ಭಯ ಭಕ್ತಿ ಪಾಲಿಸಬಹುದು. info
التفاسير:

external-link copy
165 : 7

فَلَمَّا نَسُوْا مَا ذُكِّرُوْا بِهٖۤ اَنْجَیْنَا الَّذِیْنَ یَنْهَوْنَ عَنِ السُّوْٓءِ وَاَخَذْنَا الَّذِیْنَ ظَلَمُوْا بِعَذَابٍۭ بَىِٕیْسٍ بِمَا كَانُوْا یَفْسُقُوْنَ ۟

ಹಾಗೆಯೇ ಅವರಿಗೆ ಉಪದೇಶ ನೀಡಲಾಗುತ್ತಿದ್ದುದನ್ನು ಮರೆತು ಬಿಟ್ಟಾಗ ನಾವು ಕೆಡುಕಿನಿಂದ ತಡೆಯುತ್ತಿದ್ದವರನ್ನು ರಕ್ಷಿಸಿದೆವು ಮತ್ತು ಅಕ್ರಮಿಗಳನ್ನು ಅವರು ಧಿಕ್ಕಾರ ತೋರಿದುದರ ನಿಮಿತ್ತ ಕಠಿಣವಾದ ಶಿಕ್ಷೆಗೆ ಗುರಿಪಡಿಸಿದೆವು. info
التفاسير:

external-link copy
166 : 7

فَلَمَّا عَتَوْا عَنْ مَّا نُهُوْا عَنْهُ قُلْنَا لَهُمْ كُوْنُوْا قِرَدَةً خٰسِىِٕیْنَ ۟

ಅವರನ್ನು ತಡೆಯಲಾಗುತ್ತಿದ್ದ ಕೃತ್ಯವನ್ನು ಅವರು ಧಿಕ್ಕರಿಸಿದಾಗ ನಾವು ಅವರೊಂದಿಗೆ ನೀವು ನಿಂದ್ಯರಾದ ಕಪಿಗಳಾಗಿರಿ ಎಂದು ಹೇಳಿದೆವು. info
التفاسير:

external-link copy
167 : 7

وَاِذْ تَاَذَّنَ رَبُّكَ لَیَبْعَثَنَّ عَلَیْهِمْ اِلٰی یَوْمِ الْقِیٰمَةِ مَنْ یَّسُوْمُهُمْ سُوْٓءَ الْعَذَابِ ؕ— اِنَّ رَبَّكَ لَسَرِیْعُ الْعِقَابِ ۖۚ— وَاِنَّهٗ لَغَفُوْرٌ رَّحِیْمٌ ۟

ಪುನರುತ್ಥಾನದ ದಿನದವರೆಗೆ ಯಹೂದಿಗಳಿಗೆ ಕಠಿಣವಾಗಿ ಶಿಕ್ಷಿಸುವವರನ್ನು ಹೇರುತ್ತಲೇ ಇರುವೆನೆಂದು ನಿಮ್ಮ ಪ್ರಭು ಹೇಳಿರುವುದನ್ನು ಸ್ಮರಿಸಿರಿ. ನಿಸ್ಸಂದೇಹವಾಗಿಯು ನಿಮ್ಮ ಪ್ರಭುವು ಶೀಘ್ರವಾಗಿ ಶಿಕ್ಷೆ ನೀಡುತ್ತಾನೆ. ಮತ್ತು ಖಂಡಿತವಾಗಿಯು ಅವನು ಮಹಾಕ್ಷಮಾಳುವೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
168 : 7

وَقَطَّعْنٰهُمْ فِی الْاَرْضِ اُمَمًا ۚ— مِنْهُمُ الصّٰلِحُوْنَ وَمِنْهُمْ دُوْنَ ذٰلِكَ ؗ— وَبَلَوْنٰهُمْ بِالْحَسَنٰتِ وَالسَّیِّاٰتِ لَعَلَّهُمْ یَرْجِعُوْنَ ۟

ಮತ್ತು ನಾವು ಭೂಮಿಯಲ್ಲಿ ಅವರನ್ನು ಹಲವು ಪಂಗಡಗಳನ್ನಾಗಿ ವಿಂಗಡಿಸಿದ್ದೇವೆ. ಅವರಲ್ಲಿ ಸಜ್ಜನರೂ ಇರುವರು ಮತ್ತು ಅವರ ಹೊರತು ಬೇರೆಯವರೂ ಇರುವರು ಮತ್ತು ನಾವು ಅವರನ್ನು ಸುಸ್ಥಿತಿಗಳಲ್ಲೂ, ದುಸ್ಥಿತಿಗಳಲ್ಲೂ ಪರೀಕ್ಷಿಸಿದೆವು. ಪ್ರಾಯಶಃ ಅವರು ಮರಳಬಹುದೆಂದು. info
التفاسير:

external-link copy
169 : 7

فَخَلَفَ مِنْ بَعْدِهِمْ خَلْفٌ وَّرِثُوا الْكِتٰبَ یَاْخُذُوْنَ عَرَضَ هٰذَا الْاَدْنٰی وَیَقُوْلُوْنَ سَیُغْفَرُ لَنَا ۚ— وَاِنْ یَّاْتِهِمْ عَرَضٌ مِّثْلُهٗ یَاْخُذُوْهُ ؕ— اَلَمْ یُؤْخَذْ عَلَیْهِمْ مِّیْثَاقُ الْكِتٰبِ اَنْ لَّا یَقُوْلُوْا عَلَی اللّٰهِ اِلَّا الْحَقَّ وَدَرَسُوْا مَا فِیْهِ ؕ— وَالدَّارُ الْاٰخِرَةُ خَیْرٌ لِّلَّذِیْنَ یَتَّقُوْنَ ؕ— اَفَلَا تَعْقِلُوْنَ ۟

ಅನಂತರ ಅವರ ಬಳಿಕ ಅವರ ಉತ್ತರಾಧಿಕಾರಿಗಳಾದ ಒಂದು ಪೀಳಿಗೆ ಬಂದಿತು. ಅವರು ಗ್ರಂಥದ ವಾರೀಸುದಾರರಾದರು. ಅವರು ಈ ನಶ್ವರ ಲೋಕದ ಸಂಪತ್ತು ಸವಲತ್ತುಗಳನ್ನು ಪಡೆದುಕೊಳ್ಳುವರು ಮತ್ತು ಹೇಳುವರು: ನಮಗೆ ಕ್ಷಮೆ ನೀಡಲಾಗುವುದು. ವಸ್ತುತಃ ಅವರ ಬಳಿ ಅಂತಹದೇ ಬೇರೆ ಸವಲತ್ತುಗಳು ಬಂದರೂ ಅವರದನ್ನು ಪಡೆದುಕೊಳ್ಳುವರು. ಅಲ್ಲಾಹನ ಮೇಲೆ ಸತ್ಯದ ಹೊರತು ಬೇರೇನನ್ನೂ ಹೇಳಬಾರದೆಂದು ಗ್ರಂಥದ ಮೂಲಕ ಅವರಿಂದ ಕರಾರನ್ನು ಪಡೆಯಲಾಗಿಲ್ಲವೇ ಅದರಲ್ಲಿರುವುದನ್ನು ಅವರು ಅಧ್ಯಯನ ಮಾಡಲಿಲ್ಲವೇ? ಮತ್ತು ಭಯಭಕ್ತಿ ಪಾಲಿಸುವವರಿಗೆ ಪರಲೋಕ ಭವನವು ಉತ್ತಮವಾಗಿದೆ. ಅದಾಗ್ಯೂ ನೀವು ಗ್ರಹಿಸಿಕೊಳ್ಳುವುದಿಲ್ಲವೇ? info
التفاسير:

external-link copy
170 : 7

وَالَّذِیْنَ یُمَسِّكُوْنَ بِالْكِتٰبِ وَاَقَامُوا الصَّلٰوةَ ؕ— اِنَّا لَا نُضِیْعُ اَجْرَ الْمُصْلِحِیْنَ ۟

ಮತ್ತು ಯಾರು ಗ್ರಂಥವನ್ನು ಸದೃಢವಾಗಿ ಹಿಡಿದುಕೊಂಡರೋ ಮತ್ತು ನಮಾಝನ್ನು ಸಂಸ್ಥಾಪಿಸಿದರೋ ಖಂಡಿತವಾಗಿಯು ನಾವು ಅಂತಹ ಸದಾಚಾರಿಗಳ ಪ್ರತಿಫಲವನ್ನು ವ್ಯರ್ಥಗೊಳಿಸಲಾರೆವು. info
التفاسير: