ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
20 : 57

اِعْلَمُوْۤا اَنَّمَا الْحَیٰوةُ الدُّنْیَا لَعِبٌ وَّلَهْوٌ وَّزِیْنَةٌ وَّتَفَاخُرٌ بَیْنَكُمْ وَتَكَاثُرٌ فِی الْاَمْوَالِ وَالْاَوْلَادِ ؕ— كَمَثَلِ غَیْثٍ اَعْجَبَ الْكُفَّارَ نَبَاتُهٗ ثُمَّ یَهِیْجُ فَتَرٰىهُ مُصْفَرًّا ثُمَّ یَكُوْنُ حُطَامًا ؕ— وَفِی الْاٰخِرَةِ عَذَابٌ شَدِیْدٌ ۙ— وَّمَغْفِرَةٌ مِّنَ اللّٰهِ وَرِضْوَانٌ ؕ— وَمَا الْحَیٰوةُ الدُّنْیَاۤ اِلَّا مَتَاعُ الْغُرُوْرِ ۟

ತಿಳಿಯಿರಿ; ಇಹಲೋಕದ ಜೀವನವು ಆಟ, ವಿನೋದ, ಶೃಂಗಾರ ಮತ್ತು ಪರಸ್ಪರರ ನಡುವೆ ಜಂಭ ಕೊಚ್ಚಿಕೊಳ್ಳುವುದು, ಸಂಪತ್ತು ಸಂತಾನಗಳಲ್ಲಿ ಪೈಪೋಟಿ ನಡೆಸುವುದು ಮಾತ್ರವಾಗಿದೆ. ಅದರ ಉಪಮೆಯು ಒಂದು ಮಳೆಯಂತಿದೆ. ಅದ್ದರಿಂದ ಬೆಳೆದಿರುವ ಕೃಷಿಯು ಕೃಷಿಕರನ್ನು ಆಕರ್ಷಿಸುತ್ತದೆ, ಅನಂತರ ಅದು ಬಲಿತು ಹಳದಿ ವರ್ಣಕ್ಕೆ ತಿರುಗಿರುವುದಾಗಿ ನೀವು ಕಾಣುವಿರಿ, ಬಳಿಕ ಅದು ಒಣಗಿ ಹೊಟ್ಟಾಗಿಬಿಡುತ್ತದೆ. ಪರಲೋಕದಲ್ಲಿ (ದುರ್ಜನರಿಗೆ) ಅತ್ಯುಗ್ರ ಶಿಕ್ಷೆಯಿದೆ. ಹಾಗು (ಸಜ್ಜನರಿಗೆ) ಅಲ್ಲಾಹನ ಕಡೆಯ ಕ್ಷಮೆ ಹಾಗು ಸಂಪ್ರೀತಿ ಇದೆ. ಮತ್ತು ಈ ಇಹಲೋಕದ ಜೀವನವು ವಂಚನಾತ್ಮಕ ಸರಕಲ್ಲದೇ ಬೇರೇನು ಅಲ್ಲ. info
التفاسير: