ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
12 : 57

یَوْمَ تَرَی الْمُؤْمِنِیْنَ وَالْمُؤْمِنٰتِ یَسْعٰی نُوْرُهُمْ بَیْنَ اَیْدِیْهِمْ وَبِاَیْمَانِهِمْ بُشْرٰىكُمُ الْیَوْمَ جَنّٰتٌ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا ؕ— ذٰلِكَ هُوَ الْفَوْزُ الْعَظِیْمُ ۟ۚ

ಅಂದು ನೀವು ಸತ್ಯವಿಶ್ವಾಸಿಗಳನ್ನೂ, ಸತ್ಯವಿಶ್ವಾಸಿನಿಯರನ್ನೂ ಅವರ ಪ್ರಕಾಶವು ಮುಂದಿನಿAದಲೂ, ಬಲಗಡೆಯಿಂದಲೂ, ಸಾಗುತ್ತಿರುವುದನ್ನು ಕಾಣುವಿರಿ, ಇಂದು ನಿಮಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳ ಶುಭವಾರ್ತೆಯಿದೆ. ಅವುಗಳಲ್ಲಿ ಅವರು ಶಾಶ್ವತರಾಗಿರುವರು, ಇದುವೇ ಮಹಾ ಯಶಸ್ಸು. info
التفاسير:

external-link copy
13 : 57

یَوْمَ یَقُوْلُ الْمُنٰفِقُوْنَ وَالْمُنٰفِقٰتُ لِلَّذِیْنَ اٰمَنُوا انْظُرُوْنَا نَقْتَبِسْ مِنْ نُّوْرِكُمْ ۚ— قِیْلَ ارْجِعُوْا وَرَآءَكُمْ فَالْتَمِسُوْا نُوْرًا ؕ— فَضُرِبَ بَیْنَهُمْ بِسُوْرٍ لَّهٗ بَابٌ ؕ— بَاطِنُهٗ فِیْهِ الرَّحْمَةُ وَظَاهِرُهٗ مِنْ قِبَلِهِ الْعَذَابُ ۟ؕ

ಅಂದು ಕಪಟವಿಶ್ವಾಸಿ ಪುರುಷರು ಮತ್ತು ಸ್ತಿçÃಯರು ಸತ್ಯವಿಶ್ವಾಸಿಗಳೊಂದಿಗೆ ಹೇಳುವರು; ನೀವು ನಮ್ಮನ್ನು ತುಸು ಕಾಯಿರಿ, ನಾವು ಸಹ ನಿಮ್ಮ ಪ್ರಕಾಶದಿಂದ ಸ್ವಲ್ಪ ಪ್ರಕಾಶವನ್ನು ಪಡೆದುಕೊಳ್ಳುತ್ತೇವೆ. ಹೇಳಲಾಗುವುದು, ನೀವು ನಿಮ್ಮ ಹಿಂದಕ್ಕೆ ಮರಳಿ ಪ್ರಕಾಶವನ್ನು ಅರಸಿರಿ. ಬಳಿಕ ಅವರ ನಡುವೆ ಒಂದು ಬಾಗಿಲು ಇರುವಂತಹ ಅಡ್ಡ ಗೋಡೆಯನ್ನು ನಿರ್ಮಿಸಲಾಗುವುದು, ಅದರ ಒಳಭಾಗದಲ್ಲಿ ಕಾರುಣ್ಯ ಮತ್ತು ಅದರ ಹೊರಭಾಗದಲ್ಲಿ ಶಿಕ್ಷೆಯಿರುವುದು. info
التفاسير:

external-link copy
14 : 57

یُنَادُوْنَهُمْ اَلَمْ نَكُنْ مَّعَكُمْ ؕ— قَالُوْا بَلٰی وَلٰكِنَّكُمْ فَتَنْتُمْ اَنْفُسَكُمْ وَتَرَبَّصْتُمْ وَارْتَبْتُمْ وَغَرَّتْكُمُ الْاَمَانِیُّ حَتّٰی جَآءَ اَمْرُ اللّٰهِ وَغَرَّكُمْ بِاللّٰهِ الْغَرُوْرُ ۟

ಕಪಟ ವಿಶ್ವಾಸಿಗಳು ಗೋಗರೆಯುತ್ತಾ ಹೇಳುವರು; ನಾವು ನಿಮ್ಮ ಜೊತೆಯಲ್ಲಿ ಇದ್ದಿರಲಿಲ್ಲವೇ? ಹೌದು ! ಆದರೆ ನೀವು ಸ್ವತಃ ನಿಮ್ಮನ್ನೇ ಆಪತ್ತಿನಲ್ಲಿ ಸಿಲುಕಿಸಿದ್ದಿರಿ ಮತ್ತು (ಮುಸ್ಲಿಮರಿಗೆ ಕೇಡನ್ನು) ನಿರೀಕ್ಷಿಸುತ್ತಿದ್ದಿರಿ ಹಾಗು ಅನುಮಾನ, ಸಂದೇಹಗಳನ್ನು ತೋರಿಸುತ್ತಿದ್ದಿರಿ ಮಿಥ್ಯ ಆಸೆ ಆಕಾಂಕ್ಷೆಗಳು ನಿಮ್ಮನ್ನು ಮೋಸಗೊಳಿಸಿದವು, ಕೊನೆಗೆ ಅಲ್ಲಾಹನ ಆಜ್ಞೆಯು (ಮರಣವು) ಬಂದು ಬಿಟ್ಟಿತು, ಹಾಗು ಅಲ್ಲಾಹನ ವಿಚಾರದಲ್ಲಿ ನಿಮ್ಮನ್ನು ಆ ಮಹಾ ವಂಚಕ ಪಿಶಾಚಿಯು ವಂಚನೆಯಲ್ಲೇ ಇರಿಸಿಬಿಟ್ಟನು. info
التفاسير:

external-link copy
15 : 57

فَالْیَوْمَ لَا یُؤْخَذُ مِنْكُمْ فِدْیَةٌ وَّلَا مِنَ الَّذِیْنَ كَفَرُوْا ؕ— مَاْوٰىكُمُ النَّارُ ؕ— هِیَ مَوْلٰىكُمْ ؕ— وَبِئْسَ الْمَصِیْرُ ۟

ಆದ್ದರಿಂದ ಇಂದು ನಿಮ್ಮಿಂದಾಗಲಿ (ಕಪಟಿಗಳಿಂದ) ಸತ್ಯ ನಿಷೇಧಿಸಿದವರಿಂದಾಗಲಿ ಯಾವ ಪ್ರಾಯಶ್ಚಿತವನ್ನೂ ಸ್ವೀಕರಿಸಲಾಗದು. ನಿಮ್ಮ ನೆಲೆಯು ನರಕಾಗ್ನಿಯಾಗಿದೆ. ಅದುವೇ ನಿಮ್ಮ ಆಶ್ರಯತಾಣ, ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿದೆ. info
التفاسير:

external-link copy
16 : 57

اَلَمْ یَاْنِ لِلَّذِیْنَ اٰمَنُوْۤا اَنْ تَخْشَعَ قُلُوْبُهُمْ لِذِكْرِ اللّٰهِ وَمَا نَزَلَ مِنَ الْحَقِّ ۙ— وَلَا یَكُوْنُوْا كَالَّذِیْنَ اُوْتُوا الْكِتٰبَ مِنْ قَبْلُ فَطَالَ عَلَیْهِمُ الْاَمَدُ فَقَسَتْ قُلُوْبُهُمْ ؕ— وَكَثِیْرٌ مِّنْهُمْ فٰسِقُوْنَ ۟

ಏನು; ಸತ್ಯವಿಶ್ವಾಸವಿರಿಸಿದವರಿಗೆ ಅವರ ಹೃದಯಗಳು ಅಲ್ಲಾಹನ ಸ್ಮರಣೆಯಿಂದ ಮತ್ತು ಅವರ ಮೇಲೆ ಅವತೀರ್ಣಗೊಂಡಿರುವ ಸತ್ಯದಿಂದ ಕರಗುವ ಕಾಲ ಇನ್ನೂ ಬಂದಿಲ್ಲವೇ? ಅವರು ಇದಕ್ಕಿಂತ ಮೊದಲು ಗ್ರಂಥ ನೀಡಲ್ಪಟ್ಟವರಂತೆ ಆಗದಿರಲಿ, ಕೊನೆಗೆ ಅವರ ಮೇಲೆ ದೀರ್ಘ ಕಾಲ ಕಳೆದಾಗ ಅವರ ಹೃದಯಗಳು ಕಠೋರವಾದವು ಮತ್ತು ಅವರಲ್ಲಿ ಅನೇಕ ಮಂದಿ ಧಿಕ್ಕಾರಿಗಳಾದರು. info
التفاسير:

external-link copy
17 : 57

اِعْلَمُوْۤا اَنَّ اللّٰهَ یُحْیِ الْاَرْضَ بَعْدَ مَوْتِهَا ؕ— قَدْ بَیَّنَّا لَكُمُ الْاٰیٰتِ لَعَلَّكُمْ تَعْقِلُوْنَ ۟

ತಿಳಿದುಕೊಳ್ಳಿರಿ, ಭೂಮಿಯನ್ನು ಅದರ ನಿರ್ಜೀವದ ಬಳಿಕ ಜೀವಂತಗೊಳಿಸುವವನು ಅಲ್ಲಾಹನೇ ನೀವು ಅರಿತುಕೊಳ್ಳಲೆಂದು ನಾವು ನಿದರ್ಶನಗಳನ್ನು ನಿಮಗೆ ವಿವರಿಸಿಕೊಟ್ಟಿದ್ದೇವೆ. info
التفاسير:

external-link copy
18 : 57

اِنَّ الْمُصَّدِّقِیْنَ وَالْمُصَّدِّقٰتِ وَاَقْرَضُوا اللّٰهَ قَرْضًا حَسَنًا یُّضٰعَفُ لَهُمْ وَلَهُمْ اَجْرٌ كَرِیْمٌ ۟

ನಿಸ್ಸಂದೇಹವಾಗಿಯು ದಾನಧರ್ಮ ನೀಡುವ ಪುರುಷರು ಮತ್ತು ಸ್ತಿçÃಯರು ಹಾಗು ಅಲ್ಲಾಹನಿಗೆ ಉತ್ತಮ ಸಾಲವನ್ನು ನೀಡಿದವರಿಗೆ ಅದನ್ನು ಇಮ್ಮಡಿಗೊಳಿಸಲಾಗುವುದು ಮತ್ತು ಅವರಿಗೆ ಗೌರವಾನ್ವಿತ ಪ್ರತಿಫಲವಿದೆ. info
التفاسير: