ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
74 : 43

اِنَّ الْمُجْرِمِیْنَ فِیْ عَذَابِ جَهَنَّمَ خٰلِدُوْنَ ۟ۚ

ಖಂಡಿತವಾಗಿಯು ಅಪರಾಧಿಗಳು ನರಕದ ಯಾತನೆಯಲ್ಲಿ ಶಾಶ್ವತವಾಗಿರುವರು. info
التفاسير:

external-link copy
75 : 43

لَا یُفَتَّرُ عَنْهُمْ وَهُمْ فِیْهِ مُبْلِسُوْنَ ۟ۚ

ಅದನ್ನು ಅವರಿಂದ ಕಡಿತಗೊಳಿಸಲಾಗದು ಮತ್ತು ಅವರು ಅದರಲ್ಲೇ ನಿರಾಶರಾಗಿರುವರು. info
التفاسير:

external-link copy
76 : 43

وَمَا ظَلَمْنٰهُمْ وَلٰكِنْ كَانُوْا هُمُ الظّٰلِمِیْنَ ۟

ನಾವು ಅವರ ಮೇಲೆ ಅಕ್ರಮವೆಸಗಲಿಲ್ಲ. ಆದರೆ ಸ್ವತಃ ಅವರೇ ಅಕ್ರಮಿಗಳಾಗಿದ್ದರು. info
التفاسير:

external-link copy
77 : 43

وَنَادَوْا یٰمٰلِكُ لِیَقْضِ عَلَیْنَا رَبُّكَ ؕ— قَالَ اِنَّكُمْ مّٰكِثُوْنَ ۟

ಅವರು ಕೂಗಿ ಹೇಳುವರು. ಓ ಮಾಲಿಕ್, ನಿನ್ನ ಪ್ರಭುವು ನಮ್ಮ ವಿಷಯವನ್ನೇ ಮುಗಿಸಿ ಬಿಡಲಿ. ಆಗ ಮಾಲಿಕ್ ಹೇಳುವನು: ನೀವಂತು ಇಲ್ಲಿ (ಶಾಶ್ವತವಾಗಿ) ತಂಗಲಿರುವಿರಿ. info
التفاسير:

external-link copy
78 : 43

لَقَدْ جِئْنٰكُمْ بِالْحَقِّ وَلٰكِنَّ اَكْثَرَكُمْ لِلْحَقِّ كٰرِهُوْنَ ۟

ನಾವು ನಿಮ್ಮ ಬಳಿ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿನ ಅಧಿಕ ಮಂದಿಗೆ ಸತ್ಯವು ಅಪ್ರಿಯವಾಗಿತ್ತು. ಅಧಿಕ ಮಂದಿ ಸತ್ಯವನ್ನು ತಿರಸ್ಕರಿಸುವವರಾಗಿದ್ದರು. info
التفاسير:

external-link copy
79 : 43

اَمْ اَبْرَمُوْۤا اَمْرًا فَاِنَّا مُبْرِمُوْنَ ۟ۚ

ಅಥವಾ ಅವರು ಯಾವುದಾದರೂ ಕಾರ್ಯಚರಣೆಯ ತೀರ್ಮಾನವನ್ನು ಕೈಗೊಂಡಿದ್ದಾರೆಯೇ? ಹಾಗಿದ್ದರೆ ಖಂಡಿತವಾಗಿಯು ನಾವೂ ದೃಢ ತೀರ್ಮಾನ ಕೈಗೊಂಡಿದ್ದೇವೆ. info
التفاسير:

external-link copy
80 : 43

اَمْ یَحْسَبُوْنَ اَنَّا لَا نَسْمَعُ سِرَّهُمْ وَنَجْوٰىهُمْ ؕ— بَلٰی وَرُسُلُنَا لَدَیْهِمْ یَكْتُبُوْنَ ۟

ಅಥವಾ ಅವರ ರಹಸ್ಯ ಮಾತುಗಳನ್ನು, ಅವರ ಗೂಢಾಲೋಚನೆಯನ್ನು ನಾವು ಆಲಿಸುವುದಿಲ್ಲವೆಂದು ಅವರು ಭಾವಿಸಿಕೊಂಡಿದ್ದಾರೆಯೇ? ವಾಸ್ತವದಲ್ಲಿ ನಮ್ಮ ಮಲಕ್‌ಗಳು ಅವರ ಬಳಿಯಲ್ಲೇ ಕರ್ಮಗಳನ್ನು ದಾಖಲಿಸುತ್ತಿದ್ದಾರೆ. info
التفاسير:

external-link copy
81 : 43

قُلْ اِنْ كَانَ لِلرَّحْمٰنِ وَلَدٌ ۖۗ— فَاَنَا اَوَّلُ الْعٰبِدِیْنَ ۟

ಓ ಸಂದೇಶವಾಹಕರೇ, ಒಂದು ವೇಳೆ ಪರಮದಯಾಮಯನಿಗೆ ಪುತ್ರನಿರುತ್ತಿದ್ದರೆ ನಾನು ಮೊದಲ ಆರಾಧಕನಾಗುತ್ತಿದ್ದೆನು ಎಂದು ಹೇಳಿರಿ. info
التفاسير:

external-link copy
82 : 43

سُبْحٰنَ رَبِّ السَّمٰوٰتِ وَالْاَرْضِ رَبِّ الْعَرْشِ عَمَّا یَصِفُوْنَ ۟

ಆಕಾಶಗಳ ಹಾಗೂ ಭೂಮಿಯ ಪ್ರಭುವು ಮತ್ತು ಸಿಂಹಾಸನದ ಒಡೆಯನು ಅವರು ಆರೋಪಿಸುತ್ತಿರುವ ಸಕಲ ಲೋಪಗಳಿಂದ ಪವಿತ್ರನಾಗಿರುವನು. info
التفاسير:

external-link copy
83 : 43

فَذَرْهُمْ یَخُوْضُوْا وَیَلْعَبُوْا حَتّٰی یُلٰقُوْا یَوْمَهُمُ الَّذِیْ یُوْعَدُوْنَ ۟

ಆದ್ದರಿಂದ ಅವರಿಗೆ ವಾಗ್ದಾನ ನೀಡಲಾಗುತ್ತಿರುವ ಆ ದಿನವನ್ನು ಭೇಟಿಯಾಗುವವರೆಗೆ ನೀವು ಅವರನ್ನು ನಿರರ್ಥಕ ಮಾತುಗಳಲ್ಲಿ, ಆಟ ವಿನೋದಗಳಲ್ಲಿ ಬಿಟ್ಟುಬಿಡಿರಿ. info
التفاسير:

external-link copy
84 : 43

وَهُوَ الَّذِیْ فِی السَّمَآءِ اِلٰهٌ وَّفِی الْاَرْضِ اِلٰهٌ ؕ— وَهُوَ الْحَكِیْمُ الْعَلِیْمُ ۟

ಅವನೇ ಆಕಾಶದಲ್ಲೂ ಆರಾಧ್ಯನು. ಮತ್ತು ಭೂಮಿಯಲ್ಲೂ ಆರಾಧ್ಯನು. ಮತ್ತು ಅವನು ಯುಕ್ತಿಪೂರ್ಣ, ಸರ್ವಜ್ಞನೂ ಆಗಿದ್ದಾನೆ. info
التفاسير:

external-link copy
85 : 43

وَتَبٰرَكَ الَّذِیْ لَهٗ مُلْكُ السَّمٰوٰتِ وَالْاَرْضِ وَمَا بَیْنَهُمَا ۚ— وَعِنْدَهٗ عِلْمُ السَّاعَةِ ۚ— وَاِلَیْهِ تُرْجَعُوْنَ ۟

ಆಕಾಶಗಳ ಮತ್ತು ಭೂಮಿಯ ಹಾಗೂ ಅವುಗಳ ನಡುವಿನ ಅಧಿಪತ್ಯ ಯಾರಿಗಿದೆಯೋ ಅವನು ಮಹಾ ಮಂಗಳಮಯನಾಗಿರುವನು ಪುನರುತ್ಥಾನದ ಜ್ಞಾನವು ಅವನ ಬಳಿಯೇ ಇದೆ ಮತ್ತು ಅವನೆಡೆಗೇ ನೀವು ಮರಳಿಸಲ್ಪಡುವಿರಿ. info
التفاسير:

external-link copy
86 : 43

وَلَا یَمْلِكُ الَّذِیْنَ یَدْعُوْنَ مِنْ دُوْنِهِ الشَّفَاعَةَ اِلَّا مَنْ شَهِدَ بِالْحَقِّ وَهُمْ یَعْلَمُوْنَ ۟

ಅವರು ಅಲ್ಲಾಹನ ಹೊರತು ಯಾರನ್ನು ಕರೆದುಬೇಡುತ್ತಿರುವರೋ ಅವರು ಶಿಫಾರಸ್ಸು ಮಾಡುವ ಆಧಿಕಾರವನ್ನು ಹೊಂದಿಲ್ಲ. ಆದರೆ ಜ್ಞಾನದ ಆಧಾರದಲ್ಲಿ ಸತ್ಯದ ಸಾಕ್ಷಿವಹಿಸುವವರ ಹೊರತು. info
التفاسير:

external-link copy
87 : 43

وَلَىِٕنْ سَاَلْتَهُمْ مَّنْ خَلَقَهُمْ لَیَقُوْلُنَّ اللّٰهُ فَاَنّٰی یُؤْفَكُوْنَ ۟ۙ

ಅವರನ್ನು ಸೃಷ್ಟಿಸಿದವನಾರೆಂದು ನೀವು ಅವರೊಡನೆ ಕೇಳಿದರೆ ಖಂಡಿತ ಅವರು 'ಅಲ್ಲಾಹ'ನೆಂದು ಉತ್ತರಿಸುತ್ತಾರೆ. ಹೀಗಿದ್ದೂ ಅವರೆತ್ತ ದಾರಿ ತಪ್ಪಿಸಲಾಗುತ್ತಿದ್ದಾರೆ. info
التفاسير:

external-link copy
88 : 43

وَقِیْلِهٖ یٰرَبِّ اِنَّ هٰۤؤُلَآءِ قَوْمٌ لَّا یُؤْمِنُوْنَ ۟ۘ

ಓ ನನ್ನ ಪ್ರಭು, ಖಂಡಿತವಾಗಿ ಇವರು ವಿಶ್ವಾಸವಿಡುವವರಲ್ಲ. ಎಂಬ ಸಂದೇಶವಾಹಕರ ಮಾತಿನಾಣೆ ಖಂಡಿತವಾಗಿಯು ಇವರು ವಿಶ್ವಾಸವಿರಿಸುವವರಲ್ಲ. info
التفاسير:

external-link copy
89 : 43

فَاصْفَحْ عَنْهُمْ وَقُلْ سَلٰمٌ ؕ— فَسَوْفَ یَعْلَمُوْنَ ۟۠

ಇನ್ನು ನೀವು ಅವರನ್ನು ಮನ್ನಿಸಿರಿ ಮತ್ತು ಸಲಾಮ್ ಎಂದು ಹೇಳಿರಿ. ಶೀಘ್ರದಲ್ಲೇ ಅವರಿಗೆ ತಿಳಿದು ಬರಲಿದೆ. info
التفاسير: