ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
27 : 38

وَمَا خَلَقْنَا السَّمَآءَ وَالْاَرْضَ وَمَا بَیْنَهُمَا بَاطِلًا ؕ— ذٰلِكَ ظَنُّ الَّذِیْنَ كَفَرُوْا ۚ— فَوَیْلٌ لِّلَّذِیْنَ كَفَرُوْا مِنَ النَّارِ ۟ؕ

ಮತ್ತು ನಾವು ಆಕಾಶವನ್ನು, ಭೂಮಿಯನ್ನು ಮತ್ತು ಅವುಗಳ ನಡುವೆಯಿರುವುದನ್ನು ವ್ಯರ್ಥವಾಗಿ ಸೃಷ್ಟಿಸಿರುವುದಿಲ್ಲ. ಇದಂತು ಸತ್ಯ ನಿಷೇಧಿಗಳ ಭ್ರಮೆಯಾಗಿದೆ. ಆದ್ದರಿಂದ ಸತ್ಯನಿಷೇಧಿಗಳಿಗೆ ನರಕಾಗ್ನಿಯ ವಿನಾಶವಿದೆ. info
التفاسير:

external-link copy
28 : 38

اَمْ نَجْعَلُ الَّذِیْنَ اٰمَنُوْا وَعَمِلُوا الصّٰلِحٰتِ كَالْمُفْسِدِیْنَ فِی الْاَرْضِ ؗ— اَمْ نَجْعَلُ الْمُتَّقِیْنَ كَالْفُجَّارِ ۟

ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕÉÊಗೊಂಡವರನ್ನು ಭೂಮಿಯಲ್ಲಿ (ಸದಾ) ಕ್ಷೆÆÃಭೆ ಹರಡುತ್ತಿರುವವರ ಹಾಗೆ ನಾವು ಮಾಡುವೆವೇ? ಅಥವಾ ಭಯಭಕ್ತಿಯು ಳ್ಳವರನ್ನು ದುರಾಚಾರಿಗಳಂತೆ ಮಾಡುವೆವೇ ? info
التفاسير:

external-link copy
29 : 38

كِتٰبٌ اَنْزَلْنٰهُ اِلَیْكَ مُبٰرَكٌ لِّیَدَّبَّرُوْۤا اٰیٰتِهٖ وَلِیَتَذَكَّرَ اُولُوا الْاَلْبَابِ ۟

ಇದು ಒಂದು ಸಮೃದ್ಧಿಯುಳ್ಳ ಗ್ರಂಥ, ಜನರು ಇದರ ಸೂಕ್ತಿಗಳ ಕುರಿತು ಚಿಂತಿಸಲೆAದೂ, ಬುದ್ಧಿಜೀವಿಗಳು ಉಪದೇಶ ಪಡೆದುಕೊಳ್ಳಲೆಂದೂ ನಾವಿದನ್ನು ನಿಮ್ಮಡೆಗೆ ಅವತೀರ್ಣಗೊಳಿಸಿರುತ್ತೇವೆ. info
التفاسير:

external-link copy
30 : 38

وَوَهَبْنَا لِدَاوٗدَ سُلَیْمٰنَ ؕ— نِعْمَ الْعَبْدُ ؕ— اِنَّهٗۤ اَوَّابٌ ۟ؕ

ಮತ್ತು ನಾವು ದಾವೂದರಿಗೆ ಸುಲೈಮಾನರನ್ನು ಕರುಣಿಸಿದೆವು. ಅವರು ಅತ್ಯುತ್ತಮ ದಾಸರಾಗಿದ್ದರು ಮತ್ತು ಅತ್ಯಧಿಕವಾಗಿ ಪಶ್ಚಾತ್ತಾಪ ಪಟ್ಟು ಮರಳುವವರಾಗಿದ್ದರು. info
التفاسير:

external-link copy
31 : 38

اِذْ عُرِضَ عَلَیْهِ بِالْعَشِیِّ الصّٰفِنٰتُ الْجِیَادُ ۟ۙ

ಅತಿವೇಗವಾಗಿ ಓಡುವ ಉತ್ತಮ ಕುದುರೆಗಳನ್ನು ಒಮ್ಮೆ ಅವರ ಮುಂದೆ ಸಾಯಂಕಾಲದ ಹೊತ್ತಲ್ಲಿ ಪ್ರದರ್ಶಿಸಲಾದ ಸಂದರ್ಭ. info
التفاسير:

external-link copy
32 : 38

فَقَالَ اِنِّیْۤ اَحْبَبْتُ حُبَّ الْخَیْرِ عَنْ ذِكْرِ رَبِّیْ ۚ— حَتّٰی تَوَارَتْ بِالْحِجَابِ ۟۫

ಆಗ ಅವರು ಹೇಳತೊಡಗಿದರು: ನಾನು ನನ್ನ ಪ್ರಭುವಿನ ಸ್ಮರಣೆಗಿಂತ ಈ ಸಂಪತ್ತನ್ನು ಹೆಚ್ಚು ಪ್ರೀತಿಸಿದೆನು. ಕೊನೆಗೆ (ಸೂರ್ಯ) ಮರೆಯಾಯಿತು. info
التفاسير:

external-link copy
33 : 38

رُدُّوْهَا عَلَیَّ ؕ— فَطَفِقَ مَسْحًا بِالسُّوْقِ وَالْاَعْنَاقِ ۟

ನೀವು ಅವು(ಆ ಕುದುರೆ)ಗಳನ್ನು ಪುನಃ ನನ್ನ ಮುಂದೆ ತನ್ನಿರಿ. ಬಳಿಕ ಅವರು ಅವುಗಳ ಮೀನಖಂಡಗಳನ್ನು ಮತ್ತು ಕೊರಳುಗಳನ್ನು ಸವರಲುತೊಡಗಿದರು. info
التفاسير:

external-link copy
34 : 38

وَلَقَدْ فَتَنَّا سُلَیْمٰنَ وَاَلْقَیْنَا عَلٰی كُرْسِیِّهٖ جَسَدًا ثُمَّ اَنَابَ ۟

ಮತ್ತು ನಾವು ಸುಲೈಮಾನರನ್ನು ಪರೀಕ್ಷಿಸಿದೆವು ಹಾಗೂ ಅವರ ಸಿಂಹಾಸನದ ಮೇಲೆ ಒಂದು ದೇಹವನ್ನು ಹಾಕಿದೆವು. ತರುವಾಯ ಅವರು ಪಶ್ಚಾತ್ತಾಪ ಪಟ್ಟು ಮರಳಿದರು. info
التفاسير:

external-link copy
35 : 38

قَالَ رَبِّ اغْفِرْ لِیْ وَهَبْ لِیْ مُلْكًا لَّا یَنْۢبَغِیْ لِاَحَدٍ مِّنْ بَعْدِیْ ۚ— اِنَّكَ اَنْتَ الْوَهَّابُ ۟

ಅವರು ಪ್ರಾರ್ಥಿಸಿದರು: ನನ್ನ ಪ್ರಭು, ನನ್ನನ್ನು ಕ್ಷಮಿಸು ಮತ್ತು ನನ್ನ ನಂತರ ಯಾರಿಗೂ ನೀಡಿರದಂತಹ ಅಧಿಪತ್ಯವನ್ನು ನನಗೆ ಕರುಣಿಸು. ನಿಶ್ಚಯವಾಗಿಯು ನೀನು ಮಹಾ ಉದಾರಿಯಾಗಿರುವೆ. info
التفاسير:

external-link copy
36 : 38

فَسَخَّرْنَا لَهُ الرِّیْحَ تَجْرِیْ بِاَمْرِهٖ رُخَآءً حَیْثُ اَصَابَ ۟ۙ

ಆಗ ನಾವು ಅವರಿಗೆ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದು ಅವರ ಆದೇಶದಂತೆ ಅವರು ಇಚ್ಛಿಸಿದೆಡೆಗೆ ಮೃದುವಾಗಿ ಬೀಸುತ್ತಿತ್ತು. info
التفاسير:

external-link copy
37 : 38

وَالشَّیٰطِیْنَ كُلَّ بَنَّآءٍ وَّغَوَّاصٍ ۟ۙ

ಮತ್ತು ಸರ್ವ ವಿಧದ ಕಟ್ಟಡ ನಿರ್ಮಾಣಗಾರರನ್ನು ಮುಳುಗುಗಾರ ಜಿನ್ನ್ಗಳನ್ನು (ಅವರ ಅಧೀನಕ್ಕೆ ಕೊಟ್ಟೆವು) info
التفاسير:

external-link copy
38 : 38

وَّاٰخَرِیْنَ مُقَرَّنِیْنَ فِی الْاَصْفَادِ ۟

ಮತ್ತು ಸಂಕೋಲೆಗಳಲ್ಲಿ ಬಂಧಿತರಾಗಿರುವ ಇತರ ಜಿನ್ನ್ಗಳನ್ನೂ ಸಹ. info
التفاسير:

external-link copy
39 : 38

هٰذَا عَطَآؤُنَا فَامْنُنْ اَوْ اَمْسِكْ بِغَیْرِ حِسَابٍ ۟

ಇದು ನಮ್ಮ ಉಡುಗೊರೆಯಾಗಿದೆ. ಆದುದರಿಂದ ನೀವು ಇಚ್ಛಿಸಿದವರಿಗೆ ಉಪಕಾರ ಮಾಡಿ ಇಲ್ಲವೇ ತಡೆದಿರಿಸಿಕೊಳ್ಳಿ. ಯಾವುದೇ ಲೆಕ್ಕವಿಚಾರಣೆಯಿರಲಾರದು. info
التفاسير:

external-link copy
40 : 38

وَاِنَّ لَهٗ عِنْدَنَا لَزُلْفٰی وَحُسْنَ مَاٰبٍ ۟۠

ಮತ್ತು ಖಂಡಿತವಾಗಿಯು ಅವರಿಗೆ ನಮ್ಮ ಬಳಿ ಸಾಮಿಪ್ಯವು ಮತ್ತು ಅತ್ಯುತ್ತಮ ತಾಣವಿದೆ. info
التفاسير:

external-link copy
41 : 38

وَاذْكُرْ عَبْدَنَاۤ اَیُّوْبَ ۘ— اِذْ نَادٰی رَبَّهٗۤ اَنِّیْ مَسَّنِیَ الشَّیْطٰنُ بِنُصْبٍ وَّعَذَابٍ ۟ؕ

ಮತ್ತು ನಮ್ಮ ದಾಸ ಅಯ್ಯೂಬರ ಪ್ರಸ್ತಾಪವನ್ನು ಮಾಡಿರಿ. ಶÉÊತಾನನು ನನಗೆ ಕಷ್ಟ ಹಾಗೂ ಹಿಂಸೆಯಲ್ಲಿ ಸಿಲುಕಿಸಿರುವನು ಎಂದು ಅವರು ತಮ್ಮ ಪ್ರಭುವನ್ನು ಕರೆದು ಬೇಡಿದ ಸಂದರ್ಭ. info
التفاسير:

external-link copy
42 : 38

اُرْكُضْ بِرِجْلِكَ ۚ— هٰذَا مُغْتَسَلٌۢ بَارِدٌ وَّشَرَابٌ ۟

ನೀವು ತಮ್ಮ ಕಾಲನ್ನು ನೆಲಕ್ಕೆ ಬಡಿಯಿರಿ. ಇದು ಸ್ನಾನ ಮಾಡುವಂತಹ ತಂಪು ಹಾಗೂ ಕುಡಿಯುವ ನೀರಾಗಿದೆ. info
التفاسير: