ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
19 : 35

وَمَا یَسْتَوِی الْاَعْمٰی وَالْبَصِیْرُ ۟ۙ

ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಲ್ಲ. info
التفاسير:

external-link copy
20 : 35

وَلَا الظُّلُمٰتُ وَلَا النُّوْرُ ۟ۙ

ಅಂಧಕಾರಗಳು ಮತ್ತು ಪ್ರಕಾಶವೂ ಸಮಾನವಲ್ಲ. info
التفاسير:

external-link copy
21 : 35

وَلَا الظِّلُّ وَلَا الْحَرُوْرُ ۟ۚ

ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ. info
التفاسير:

external-link copy
22 : 35

وَمَا یَسْتَوِی الْاَحْیَآءُ وَلَا الْاَمْوَاتُ ؕ— اِنَّ اللّٰهَ یُسْمِعُ مَنْ یَّشَآءُ ۚ— وَمَاۤ اَنْتَ بِمُسْمِعٍ مَّنْ فِی الْقُبُوْرِ ۟

ಸಜೀವರೂ, ಮೃತರೂ ಸಮಾನರಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ ಮತ್ತು ನೀವು ಗೋರಿಗಳಲ್ಲಿರುವವರಿಗೆ ಕೇಳಿಸಲಾರಿರಿ. info
التفاسير:

external-link copy
23 : 35

اِنْ اَنْتَ اِلَّا نَذِیْرٌ ۟

ನೀವು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ. info
التفاسير:

external-link copy
24 : 35

اِنَّاۤ اَرْسَلْنٰكَ بِالْحَقِّ بَشِیْرًا وَّنَذِیْرًا ؕ— وَاِنْ مِّنْ اُمَّةٍ اِلَّا خَلَا فِیْهَا نَذِیْرٌ ۟

ನಿಶ್ಚಯವಾಗಿಯೂ ನಾವು ನಿಮ್ಮನ್ನು ಸತ್ಯದೊಂದಿಗೆ ಸುವಾರ್ತೆ ಕೊಡುವವರಾಗಿಯೂ, ಮುನ್ನೆಚ್ಚರಿಕೆ ನೀಡುವವರಾಗಿಯೂ ಕಳುಹಿಸಿರುತ್ತೇವೆ ಮತ್ತು ಯಾವೊಬ್ಬ ಮುನ್ನೆಚ್ಚರಿಕೆಗಾರನು ಬಂದಿರದ ಯಾವ ಸಮುದಾಯವೂ ಗತಿಸಿಲ್ಲ. info
التفاسير:

external-link copy
25 : 35

وَاِنْ یُّكَذِّبُوْكَ فَقَدْ كَذَّبَ الَّذِیْنَ مِنْ قَبْلِهِمْ ۚ— جَآءَتْهُمْ رُسُلُهُمْ بِالْبَیِّنٰتِ وَبِالزُّبُرِ وَبِالْكِتٰبِ الْمُنِیْرِ ۟

ಇನ್ನು ಇವರು ನಿಮ್ಮನ್ನು ಸುಳ್ಳಾಗಿಸುವುದಾದರೆ ನಿಶ್ಚಯವಾಗಿಯೂ ಇವರಿಗಿಂತ ಮುಂಚಿನವರೂ ಸಹ ಸುಳ್ಳಾಗಿಸಿದ್ದಾರೆ. ಅವರೆಡೆಗೆ ಅವರ ಸಂದೇಶವಾಹಕರು ಸುಸ್ಪಷ್ಟ ಪುರಾವೆಗಳನ್ನು ಕಿರುಹೊತ್ತಿಗೆಗಳನ್ನು ಪ್ರಕಾಶ ಬೀರುವ ಗ್ರಂಥಗಳನ್ನು ತಂದಿದ್ದರು. info
التفاسير:

external-link copy
26 : 35

ثُمَّ اَخَذْتُ الَّذِیْنَ كَفَرُوْا فَكَیْفَ كَانَ نَكِیْرِ ۟۠

ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ? info
التفاسير:

external-link copy
27 : 35

اَلَمْ تَرَ اَنَّ اللّٰهَ اَنْزَلَ مِنَ السَّمَآءِ مَآءً ۚ— فَاَخْرَجْنَا بِهٖ ثَمَرٰتٍ مُّخْتَلِفًا اَلْوَانُهَا ؕ— وَمِنَ الْجِبَالِ جُدَدٌ بِیْضٌ وَّحُمْرٌ مُّخْتَلِفٌ اَلْوَانُهَا وَغَرَابِیْبُ سُوْدٌ ۟

ಅನಂತರ ನಾವು ಆ ಸತ್ಯನಿಷೇಧಿಗಳನ್ನು ಹಿಡಿದೆವು. ಆಗ ನನ್ನ ಶಿಕ್ಷೆಯು ಹೇಗಿತ್ತು ? info
التفاسير:

external-link copy
28 : 35

وَمِنَ النَّاسِ وَالدَّوَآبِّ وَالْاَنْعَامِ مُخْتَلِفٌ اَلْوَانُهٗ كَذٰلِكَ ؕ— اِنَّمَا یَخْشَی اللّٰهَ مِنْ عِبَادِهِ الْعُلَمٰٓؤُا ؕ— اِنَّ اللّٰهَ عَزِیْزٌ غَفُوْرٌ ۟

ಇದೇರೀತಿ ಮನುಷ್ಯರಲ್ಲೂ ಪ್ರಾಣಿಗಳಲ್ಲೂ ಹಾಗೂ ಜಾನುವಾರುಗಳಲ್ಲೂ ವಿವಿಧ ಬಣ್ಣಗಳಿವೆ. ಖಂಡಿತವಾಗಿಯು ಜ್ಞಾನವುಳ್ಳ ದಾಸರು ಮಾತ್ರ ಅಲ್ಲಾಹನನ್ನು ಭಯಪಡುತ್ತಾರೆ. ನಿಶ್ಚಯವಾಗಿಯು ಅಲ್ಲಾಹನು ಪ್ರಚಂಡನೂ, ಕ್ಷಮಾಶೀಲನೂ ಆಗಿದ್ದಾನೆ. info
التفاسير:

external-link copy
29 : 35

اِنَّ الَّذِیْنَ یَتْلُوْنَ كِتٰبَ اللّٰهِ وَاَقَامُوا الصَّلٰوةَ وَاَنْفَقُوْا مِمَّا رَزَقْنٰهُمْ سِرًّا وَّعَلَانِیَةً یَّرْجُوْنَ تِجَارَةً لَّنْ تَبُوْرَ ۟ۙ

ನಿಶ್ಚಯವಾಗಿಯು ಯಾರು ಅಲ್ಲಾಹನ ಗ್ರಂಥವನ್ನು ಪಠಿಸುತ್ತಾರೋ, ನಮಾಝ್ ಸಂಸ್ಥಾಪಿಸುತ್ತಾರೋ ಮತ್ತು ನಾವು ಅವರಿಗೆ ದಯಪಾಲಿಸಿದ ಜೀವನಾಧಾರದಿಂದ ರಹಸ್ಯವಾಗಿಯೂ, ಬಹಿರಂಗವಾಗಿಯೂ ಖರ್ಚು ಮಾಡುತ್ತಾರೋ ಅವರು ಎಂದಿಗೂ ನಷ್ಟವಾಗದ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. info
التفاسير:

external-link copy
30 : 35

لِیُوَفِّیَهُمْ اُجُوْرَهُمْ وَیَزِیْدَهُمْ مِّنْ فَضْلِهٖ ؕ— اِنَّهٗ غَفُوْرٌ شَكُوْرٌ ۟

ಇದೇಕೆಂದರೆ ಅಲ್ಲಾಹನು ಅವರ ಪ್ರತಿಫಲಗಳನ್ನು ಪರಿಪೂರ್ಣವಾಗಿ ನೀಡಲೆಂದೂ, ಅವನು ತನ್ನ ಅನುಗ್ರಹದಿಂದ ಅಧಿಕವಾಗಿ ಕೊಡಲೆಂದೂ ಆಗಿರುತ್ತದೆ. ನಿಸ್ಸಂಶಯವಾಗಿಯೂ ಅವನು ಕ್ಷಮಾಶೀಲನೂ, ಮೆಚ್ಚುವವನೂ ಆಗಿದ್ದಾನೆ. info
التفاسير: