ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
61 : 24

لَیْسَ عَلَی الْاَعْمٰی حَرَجٌ وَّلَا عَلَی الْاَعْرَجِ حَرَجٌ وَّلَا عَلَی الْمَرِیْضِ حَرَجٌ وَّلَا عَلٰۤی اَنْفُسِكُمْ اَنْ تَاْكُلُوْا مِنْ بُیُوْتِكُمْ اَوْ بُیُوْتِ اٰبَآىِٕكُمْ اَوْ بُیُوْتِ اُمَّهٰتِكُمْ اَوْ بُیُوْتِ اِخْوَانِكُمْ اَوْ بُیُوْتِ اَخَوٰتِكُمْ اَوْ بُیُوْتِ اَعْمَامِكُمْ اَوْ بُیُوْتِ عَمّٰتِكُمْ اَوْ بُیُوْتِ اَخْوَالِكُمْ اَوْ بُیُوْتِ خٰلٰتِكُمْ اَوْ مَا مَلَكْتُمْ مَّفَاتِحَهٗۤ اَوْ صَدِیْقِكُمْ ؕ— لَیْسَ عَلَیْكُمْ جُنَاحٌ اَنْ تَاْكُلُوْا جَمِیْعًا اَوْ اَشْتَاتًا ؕ— فَاِذَا دَخَلْتُمْ بُیُوْتًا فَسَلِّمُوْا عَلٰۤی اَنْفُسِكُمْ تَحِیَّةً مِّنْ عِنْدِ اللّٰهِ مُبٰرَكَةً طَیِّبَةً ؕ— كَذٰلِكَ یُبَیِّنُ اللّٰهُ لَكُمُ الْاٰیٰتِ لَعَلَّكُمْ تَعْقِلُوْنَ ۟۠

ಅಂಧನ ಮೇಲೆ, ಕುಂಟನ ಮೇಲೆ, ರೋಗಿಯ ಮೇಲೆ, ಸ್ವತಃ ನಿಮ್ಮ ಮೇಲೆ (ಯಾವ) ದೋಷವಿರುವುದಿಲ್ಲ; ನೀವು ನಿಮ್ಮ ತಂದೆ ತಾತಂದಿರ ಮನೆಗಳಲ್ಲಿ ಅಥವಾ ನಿಮ್ಮ ತಾಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಪ್ಪಂದಿರ (ಪಿತೃ ಸಹೋದರ) ಮನೆಗಳಲ್ಲಿ ಅಥವಾ ನಿಮ್ಮ ಸೋದರತ್ತೆಯರ (ಪಿತೃ ಸಹೋದರಿಯರ) ಮನೆಗಳಲ್ಲಿ ಅಥವಾ ನಿಮ್ಮ ಮಾಮಂದಿರ (ಮಾತೃ ಸಹೋದರರ) ಮನೆಗಳಲ್ಲಿ ಅಥವಾ ನಿಮ್ಮ ಚಿಕ್ಕಮ್ಮರ (ಮಾತೃ ಸಹೋದರಿಯರ) ಮನೆಗಳಲ್ಲಿ ಅಥವಾ ಬೀಗದ ಕೈಗಳು ನಿಮ್ಮ ಸ್ವಾಧೀನದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ತಿನ್ನುವುದರಿಂದ ದೋಷವಿಲ್ಲ. ನೀವು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಅಥವಾ ಪತ್ಯೇಕವಾಗಿ ತಿನ್ನುವುದರಿಂದಲೂ ನಿಮ್ಮ ಮೇಲೆ ತಪ್ಪೇನೂ ಇಲ್ಲ. ಹಾಗೆಯೇ ನೀವು ಮನೆಗಳನ್ನು ಪ್ರವೇಶಿಸುವಾಗ ಅಲ್ಲಾಹನ ಕಡೆಯಿಂದಿರುವ ಸಮೃದ್ಧಪೂರ್ಣವೂ ಪವಿತ್ರವೂ ಆದ ಶುಭ ಕೋರಿಕೆ ಎಂಬAತೆ ನಿಮ್ಮ ಮನೆಯವರ ಮೇಲೆ ಸಲಾಮ್ ಹೇಳರಿ. ಇದೇ ಪ್ರಕಾರ ಅಲ್ಲಾಹನು ನಿಮಗೆ ತನ್ನ ನಿಯಮಗಳನ್ನು ವಿವರಿಸಿ ಕೊಡುತ್ತಾನೆ. ಇದು ನೀವು ವಿವೇಚಿಸಿಕೊಳ್ಳಲೆಂದಾಗಿರುತ್ತದೆ. info
التفاسير: