ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
264 : 2

یٰۤاَیُّهَا الَّذِیْنَ اٰمَنُوْا لَا تُبْطِلُوْا صَدَقٰتِكُمْ بِالْمَنِّ وَالْاَذٰی ۙ— كَالَّذِیْ یُنْفِقُ مَالَهٗ رِئَآءَ النَّاسِ وَلَا یُؤْمِنُ بِاللّٰهِ وَالْیَوْمِ الْاٰخِرِ ؕ— فَمَثَلُهٗ كَمَثَلِ صَفْوَانٍ عَلَیْهِ تُرَابٌ فَاَصَابَهٗ وَابِلٌ فَتَرَكَهٗ صَلْدًا ؕ— لَا یَقْدِرُوْنَ عَلٰی شَیْءٍ مِّمَّا كَسَبُوْا ؕ— وَاللّٰهُ لَا یَهْدِی الْقَوْمَ الْكٰفِرِیْنَ ۟

ಓ ಸತ್ಯವಿಶ್ವಾಸಿಗಳೇ, ಔದಾರ್ಯವಾಗಿ ಹೇಳಿಕೊಂಡಾಗಲಿ ಮನ ನೋಯಿಸಿಯಾಗಲಿ ನೀವು ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿಡದೆÀ ಜನರಿಗೆ ತೋರಿಸಲು ಖರ್ಚು ಮಾಡುವ ಒಬ್ಬನ ಹಾಗೆ ನಿಮ್ಮ ದಾನ ಧರ್ಮಗಳನ್ನು ನಿಷ್ಫಲಗೊಳಿಸಬೇಡಿರಿ. ಅವನ ಉಪಮೆಯು ಒಂದು ನುಣುಪಾದ ಬಂಡೆಯ ಮೇಲಿನ ಮಣ್ಣಿನಂತಿದೆ ಅವನು ಆ ಮಣ್ಣಿನಲ್ಲಿ ಬಿತ್ತಿ ಫಸಲನ್ನು ನಿರೀಕ್ಷಿಸುತ್ತಾನೆ. ಆದರೆ ಅದರ ಮೇಲೆ ಧಾರಾಕಾರವಾದ ಮಳೆ ಸುರಿದರೆ ಮಣ್ಣು ಕೊಚ್ಚಿ ಹೋಗಿ ಬಂಡೆ ಬರಿದಾಗಿ ಬಿಡುತ್ತದೆ. ಈ ರೀತಿ (ತೋರಿಕೆಗೆ) ಖರ್ಚು ಮಾಡುವರು ತಮ್ಮ ಪುಣ್ಯ ಕಾರ್ಯಗಳ ಸ್ವಲ್ಪ ಪ್ರತಿಫಲವನ್ನು ಪಡೆಯಲಾರರು. ಮತ್ತು ಅಲ್ಲಾಹನು ಸತ್ಯನಿಷೇಧಿ ಜನರಿಗೆ ಸನ್ಮಾರ್ಗವನ್ನು ನೀಡುವುದಿಲ್ಲ. info
التفاسير: