ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
255 : 2

اَللّٰهُ لَاۤ اِلٰهَ اِلَّا هُوَ ۚ— اَلْحَیُّ الْقَیُّوْمُ ۚ۬— لَا تَاْخُذُهٗ سِنَةٌ وَّلَا نَوْمٌ ؕ— لَهٗ مَا فِی السَّمٰوٰتِ وَمَا فِی الْاَرْضِ ؕ— مَنْ ذَا الَّذِیْ یَشْفَعُ عِنْدَهٗۤ اِلَّا بِاِذْنِهٖ ؕ— یَعْلَمُ مَا بَیْنَ اَیْدِیْهِمْ وَمَا خَلْفَهُمْ ۚ— وَلَا یُحِیْطُوْنَ بِشَیْءٍ مِّنْ عِلْمِهٖۤ اِلَّا بِمَا شَآءَ ۚ— وَسِعَ كُرْسِیُّهُ السَّمٰوٰتِ وَالْاَرْضَ ۚ— وَلَا یَـُٔوْدُهٗ حِفْظُهُمَا ۚ— وَهُوَ الْعَلِیُّ الْعَظِیْمُ ۟

ಅಲ್ಲಾಹ್ ಅವನ ಹೊರತು ಅನ್ಯ ನೈಜ ಆರಾಧ್ಯನಿಲ್ಲ. ಅವನು ಚಿರಂತನನು, ಸರ್ವ ನಿಯಂತ್ರಕನು. ಅವನಿಗೆ ತೂಕಡಿಕೆಯಾಗಲೀ, ನಿದ್ರೆಯಾಗಲೀ ಬಾಧಿಸದು. ಭೂಮಿ ಆಕಾಶಗಳಲ್ಲಿರುವುದೆಲ್ಲವೂ ಅವನ ಒಡೆತನದಲ್ಲ್ಲಿವೆ. ಅವನ ಅಪ್ಪಣೆಯಿಲ್ಲದೆ ಅವನ ಸನ್ನಿಧಿಯಲ್ಲಿ ಶಿಫಾರಸ್ಸು ಮಾಡುವವನಾರಿದ್ದಾನೆ? ಅವರ (ಮನುಷ್ಯರ) ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನು ಇಚ್ಛಿಸಿರುವುದರ ಹೊರತು ಅವನ ಜ್ಞಾನದಿಂದ ಯಾವುದನ್ನೂ ಅವರು ಪಡೆಯಲಾರರು; ಅವನ 'ಕುರ್ಸಿ'ಯು ಭೂಮಿ ಆಕಾಶಗಳನ್ನು ಆವರಿಸಿದೆ ಅವೆರಡರ ಸಂರಕ್ಷಣೆಯಿAದ ಅವನು ದಣಿಯುವುದಿಲ್ಲ, ಮತ್ತು ಅವನು ಅತ್ಯುನ್ನತನೂ, ಮಹಾನನೂ ಆಗಿರುತ್ತಾನೆ. info
التفاسير: