ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
178 : 2

یٰۤاَیُّهَا الَّذِیْنَ اٰمَنُوْا كُتِبَ عَلَیْكُمُ الْقِصَاصُ فِی الْقَتْلٰی ؕ— اَلْحُرُّ بِالْحُرِّ وَالْعَبْدُ بِالْعَبْدِ وَالْاُ بِالْاُ ؕ— فَمَنْ عُفِیَ لَهٗ مِنْ اَخِیْهِ شَیْءٌ فَاتِّبَاعٌ بِالْمَعْرُوْفِ وَاَدَآءٌ اِلَیْهِ بِاِحْسَانٍ ؕ— ذٰلِكَ تَخْفِیْفٌ مِّنْ رَّبِّكُمْ وَرَحْمَةٌ ؕ— فَمَنِ اعْتَدٰی بَعْدَ ذٰلِكَ فَلَهٗ عَذَابٌ اَلِیْمٌ ۟ۚ

ಓ ಸತ್ಯವಿಶ್ವಾಸಿಗಳೇ, (ಕೊಲೆ ಮುಕದ್ದಮೆಗಳಲ್ಲಿ ಅನ್ಯಾಯವಾಗಿ) ಕೊಲೆಗೀಡಾದವರ ಪ್ರತಿಕಾರ ಪಡೆಯುವುದನ್ನು ನಿಮ್ಮ ಮೇಲೆ ಕಡ್ಡಾಯಗೊಳಿಸಲಾಗಿದೆ ಕೊಲೆಗಾರನು ಸ್ವತಂತ್ರ ವ್ಯಕ್ತಿಯಾಗಿದ್ದರೆ, ಆ ಸ್ವತಂತ್ರ ವ್ಯಕ್ತಿಯನ್ನೇ ಕೊಲೆಗಾರನು ಗುಲಾಮನಾಗಿದ್ದರೆ ಆ ಗುಲಾಮನನ್ನೇ ಕೊಲೆಗಾರ, ಸ್ತಿçà ಆಗಿದ್ದರೆ ಆ ಸ್ತಿçÃಯನ್ನೇ, ಕೊಲ್ಲಲಾಗುವುದು. ಕೊಲೆಗೀಡಾದವರ ಸಹೋದರ (ವಾರಿಸುದಾರ) ನಿಂದ ಎನಾದರೂ ಕ್ಷಮೆ ನೀಡಲಾದರೆ ಅವನು ಸದಾಚಾರದೊಂದಿಗೆ ಅನುಸರಿಸಬೇಕು. ಮತ್ತು ಅವನಿಗೆ ರಕ್ತ ಪರಿಹಾರಧನವನ್ನು ನೀಡಬೇಕು. ಇದು ನಿಮ್ಮ ಪ್ರಭುವಿನ ಕಡೆಯ ಒಂದು ವಿನಾಯಿತಿ ಮತ್ತು ಕಾರುಣ್ಯವಾಗಿದೆ. ಇದಾದ ನಂತರವೂ ಯಾರು ಅತಿಕ್ರಮ ತೋರುತ್ತಾನೋ ಅವನಿಗೆ ವೇದನಾಜನಕ ಯಾತನೆಯಿರುವುದು. info
التفاسير: