ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
177 : 2

لَیْسَ الْبِرَّ اَنْ تُوَلُّوْا وُجُوْهَكُمْ قِبَلَ الْمَشْرِقِ وَالْمَغْرِبِ وَلٰكِنَّ الْبِرَّ مَنْ اٰمَنَ بِاللّٰهِ وَالْیَوْمِ الْاٰخِرِ وَالْمَلٰٓىِٕكَةِ وَالْكِتٰبِ وَالنَّبِیّٖنَ ۚ— وَاٰتَی الْمَالَ عَلٰی حُبِّهٖ ذَوِی الْقُرْبٰی وَالْیَتٰمٰی وَالْمَسٰكِیْنَ وَابْنَ السَّبِیْلِ ۙ— وَالسَّآىِٕلِیْنَ وَفِی الرِّقَابِ ۚ— وَاَقَامَ الصَّلٰوةَ وَاٰتَی الزَّكٰوةَ ۚ— وَالْمُوْفُوْنَ بِعَهْدِهِمْ اِذَا عٰهَدُوْا ۚ— وَالصّٰبِرِیْنَ فِی الْبَاْسَآءِ وَالضَّرَّآءِ وَحِیْنَ الْبَاْسِ ؕ— اُولٰٓىِٕكَ الَّذِیْنَ صَدَقُوْا ؕ— وَاُولٰٓىِٕكَ هُمُ الْمُتَّقُوْنَ ۟

ಪುಣ್ಯವು ನೀವು ನಿಮ್ಮ ಮುಖಗಳನ್ನು ಪೂರ್ವ ಹಾಗೂ ಪಶ್ಚಿಮಗಳ ದಿಕ್ಕುಗಳಿಗೆ ತಿರುಗಿಸುವುದರಲಿಲ್ಲ. ಆದರೆ ವಾಸ್ತವದಲ್ಲಿ ಪುಣ್ಯವು ಒಬ್ಬ ವ್ಯಕ್ತಿಯು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ, ದೇವದೂತರಲ್ಲೂ, ಗ್ರಂಥಗಳಲ್ಲೂ ವಿಶ್ವಾಸವಿರಿಸಿ ತನಗೆ ಪ್ರಿಯವಾದ ಸಂಪತ್ತನ್ನು ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ, ಪ್ರಯಾಣಿಕರಿಗೂ, ಬೇಡಿ ಬರುವವರಿಗೂ ನೀಡುವವನು, ಹಾಗೂ ಗುಲಾಮರನ್ನು ವಿಮೋಚಿಸಲಿಕ್ಕಾಗಿ ನೀಡುವವನು ಮತ್ತು ನಮಾಝ್ ಸಂಸ್ಥಾಪಿಸುವವನು, ಝಕಾತ್ ಪಾವತಿಸುವವನು, ವಚನ ಪಾಲಕನು ಮತ್ತು ದಟ್ಟದಾರಿದ್ರö್ಯದಲ್ಲೂ ರೋಗರುಜಿನಗಳಲ್ಲೂ, ಯುದ್ಧ ಸಂದರ್ಭದಲ್ಲೂ ಸಹನೆಯನ್ನು ಪಾಲಿಸುವವನು ಅವರೇ ಸತ್ಯಸಂಧರು ಹಾಗೂ ಅವರೇ ಭಯಭಕ್ತಿ ಹೊಂದಿದವರಾಗಿದ್ದಾರೆ. info
التفاسير: