ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
30 : 2

وَاِذْ قَالَ رَبُّكَ لِلْمَلٰٓىِٕكَةِ اِنِّیْ جَاعِلٌ فِی الْاَرْضِ خَلِیْفَةً ؕ— قَالُوْۤا اَتَجْعَلُ فِیْهَا مَنْ یُّفْسِدُ فِیْهَا وَیَسْفِكُ الدِّمَآءَ ۚ— وَنَحْنُ نُسَبِّحُ بِحَمْدِكَ وَنُقَدِّسُ لَكَ ؕ— قَالَ اِنِّیْۤ اَعْلَمُ مَا لَا تَعْلَمُوْنَ ۟

“ನಾನು ಭೂಮಿಯಲ್ಲಿ ಒಬ್ಬ ಪ್ರತಿನಿಧಿಯನ್ನು ನಿಶ್ಚಯಿಸುವವನಿದ್ದೇನೆ”. ಎಂದು ನಿಮ್ಮ ಪ್ರಭು (ಮಲಕ್) ರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ಅವರು “ನೀನು ಭೂಮಿಯಲ್ಲಿ ಕ್ಷೋಭೆ ಹರಡುವವರನ್ನು, ರಕ್ತ ಹರಿಸುವವರನ್ನು ಸೃಷ್ಟಿಸುವೆಯಾ?” ಎಂದರು. ವಸ್ತುತಃ ನಾವು ನಿನ್ನ ಸ್ತುತಿ, ಕೀರ್ತನೆಯನ್ನು ಮಾಡುತ್ತೇವೆ ಮತ್ತು ನಿನ್ನ ಪಾವಿತ್ರತೆಯವನ್ನು ಕೊಂಡಾಡುತ್ತೇವೆ. ಅಲ್ಲಾಹನು ಹೇಳಿದನು “ನೀವು ಅರಿಯದೇ ಇರುವುದನ್ನು ನಾನು ಚೆನ್ನಾಗಿ ಬಲ್ಲೆನು”. info
التفاسير:

external-link copy
31 : 2

وَعَلَّمَ اٰدَمَ الْاَسْمَآءَ كُلَّهَا ثُمَّ عَرَضَهُمْ عَلَی الْمَلٰٓىِٕكَةِ فَقَالَ اَنْۢبِـُٔوْنِیْ بِاَسْمَآءِ هٰۤؤُلَآءِ اِنْ كُنْتُمْ صٰدِقِیْنَ ۟

ಅಲ್ಲಾಹನು ಆದಮರಿಗೆ ಸಕಲ ವಸ್ತುಗಳ ನಾಮಗಳನ್ನು ಕಲಿಸಿದನು. ಆ ವಸ್ತುಗಳನ್ನು ಮಲಕ್‌ಗಳ(ದೇವದೂತರ)ಮುಂದೆ ಪ್ರದರ್ಶಿಸಿದನು ತರುವಾಯ ಹೇಳಿದನು; ನೀವು ಸತ್ಯವಾದಿಗಳಾಗಿದ್ದರೆ ಇವುಗಳ ನಾಮಗಳನ್ನು ನನಗೆ ತಿಳಿಸಿರಿ. info
التفاسير:

external-link copy
32 : 2

قَالُوْا سُبْحٰنَكَ لَا عِلْمَ لَنَاۤ اِلَّا مَا عَلَّمْتَنَا ؕ— اِنَّكَ اَنْتَ الْعَلِیْمُ الْحَكِیْمُ ۟

ಅವರು ಹೇಳಿದರು ನೀನು ಪರಮ ಪಾವನನು! ನೀನು ನಮಗೆ ಕಲಿಸಿರುವುದರ ಹೊರತು ಇನ್ನಾವುದೇ ಜ್ಞಾನ ನಮಗಿಲ್ಲ. ಖಂಡಿತವಾಗಿಯೂ ನೀನು ಪರಿಪೂರ್ಣ ಜ್ಞಾನವುಳ್ಳವನು ಯುಕ್ತಿಪೂರ್ಣನು ಆಗಿರುವೆ. info
التفاسير:

external-link copy
33 : 2

قَالَ یٰۤاٰدَمُ اَنْۢبِئْهُمْ بِاَسْمَآىِٕهِمْ ۚ— فَلَمَّاۤ اَنْۢبَاَهُمْ بِاَسْمَآىِٕهِمْ ۙ— قَالَ اَلَمْ اَقُلْ لَّكُمْ اِنِّیْۤ اَعْلَمُ غَیْبَ السَّمٰوٰتِ وَالْاَرْضِ ۙ— وَاَعْلَمُ مَا تُبْدُوْنَ وَمَا كُنْتُمْ تَكْتُمُوْنَ ۟

ಅಲ್ಲಾಹನು ಆದಮರಿಗೆ ಹೇಳಿದನು “ನೀವು ಇವರಿಗೆ ಅವುಗಳ ನಾಮಗಳನ್ನು ತಿಳಿಸಿರಿ” ಅವರು ದೂತರಿಗೆ ಅವುಗಳ ನಾಮಗಳನ್ನು ತಿಳಿಸಿದಾಗ ಅಲ್ಲಾಹನು ಹೇಳಿದನು “ನಾನು ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವನ್ನು ಬಲ್ಲವನಾಗಿದ್ದೇನೆ ಹಾಗೂ ನೀವು ಬಹಿರಂಗಗೊಳಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅರಿಯುವವನಾಗಿದ್ದೇನೆ ಎಂದು ನಿಮಗೆ ಮೊದಲೇ ಹೇಳಿರಲಿಲ್ಲವೆ?” info
التفاسير:

external-link copy
34 : 2

وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی وَاسْتَكْبَرَ وَكَانَ مِنَ الْكٰفِرِیْنَ ۟

ನಾವು ಮಲಕ್‌ಗಳಿಗೆ (ದೇವದೂತರಿಗೆ) ನೀವು ಆದಮರಿಗೆ ಸಾಷ್ಟಾಂಗವೆರಗಿರೆAದು ಹೇಳಿದ ಸಂಧರ್ಭ; ಆಗ ಇಬ್ಲೀಸನ ಹೊರತು ಎಲ್ಲರೂ ಸಾಷ್ಟಾಂಗವೆರಗಿದರು. ಅವನು (ಇಬ್ಲೀಸ್) ತಿರಸ್ಕರಿಸಿದನು ಹಾಗು ದರ್ಪ ತೋರಿದನು ಮತ್ತು ಇದರ ಪರಿಣಾಮವಾಗಿ ಅವನು ಸತ್ಯನಿಷೇಧಿಗಳಲ್ಲಿ ಸೇರಿಬಿಟ್ಟನು. info
التفاسير:

external-link copy
35 : 2

وَقُلْنَا یٰۤاٰدَمُ اسْكُنْ اَنْتَ وَزَوْجُكَ الْجَنَّةَ وَكُلَا مِنْهَا رَغَدًا حَیْثُ شِئْتُمَا ۪— وَلَا تَقْرَبَا هٰذِهِ الشَّجَرَةَ فَتَكُوْنَا مِنَ الظّٰلِمِیْنَ ۟

ನಾವು ಹೇಳಿದೆವು ಓ ಆದಮ್! ನೀವು ಮತ್ತು ನಿಮ್ಮ ಪತ್ನಿಯು ಸ್ವರ್ಗದಲ್ಲಿ ವಾಸಿಸಿರಿ. ಮತ್ತು ನೀವಿಬ್ಬರು ಇಚ್ಛಿಸಿದ್ದಲ್ಲಿಂದ ಯಥೇಚ್ಛವಾಗಿ ತಿನ್ನಿರಿ, ಆದರೆ ಆ ವೃಕ್ಷದ ಸಮೀಪಕ್ಕೂ ಸುಳಿಯಬೇಡಿರಿ. ಅನ್ಯಥ ನೀವು ಅಕ್ರಮಿ (ಪಾಪಿ)ಗಳಲ್ಲಾಗುವಿರಿ. info
التفاسير:

external-link copy
36 : 2

فَاَزَلَّهُمَا الشَّیْطٰنُ عَنْهَا فَاَخْرَجَهُمَا مِمَّا كَانَا فِیْهِ ۪— وَقُلْنَا اهْبِطُوْا بَعْضُكُمْ لِبَعْضٍ عَدُوٌّ ۚ— وَلَكُمْ فِی الْاَرْضِ مُسْتَقَرٌّ وَّمَتَاعٌ اِلٰی حِیْنٍ ۟

ಆದರೆ ಶೈತಾನನು ಅವರನ್ನು ಮರುಳಾಗಿಸಿ(ಅಲ್ಲಿದ್ದ ಸುಖ ಭೋಗಗಳಿಂದ) ಹೊರ ಹಾಕಿಸಿದನು. ನಾವು ಹೇಳಿದೆವು; ನೀವು (ಆದಮ್-ಹವ್ವಾ, ಶೈತಾನ್) ಇಲ್ಲಿಂದ ಇಳಿದು ಹೋಗಿರಿ, ನೀವು ಪರಸ್ಪರ ಶತ್ರುಗಳಾಗಿರುವಿರಿ ಮತ್ತು ನಿಮಗೆ ಭೂಮಿಯಲ್ಲಿ ಒಂದು ನಿಶ್ಚಿತ ಕಾಲದವರೆಗೆ ನೆಲೆಯು ಮತ್ತು ಸುಖ ಭೋಗವು ಇರುವುದು. info
التفاسير:

external-link copy
37 : 2

فَتَلَقّٰۤی اٰدَمُ مِنْ رَّبِّهٖ كَلِمٰتٍ فَتَابَ عَلَیْهِ ؕ— اِنَّهٗ هُوَ التَّوَّابُ الرَّحِیْمُ ۟

ಆದಮ್ ತಮ್ಮ ಪ್ರಭುವಿನಿಂದ ಕೆಲವು (ಪಶ್ಚಾತ್ತಾಪದ) ವಾಕ್ಯಗಳನ್ನು ಪಡೆದುಕೊಂಡರು. ಅಲ್ಲಾಹನು ಅವುಗಳ ಮೂಲಕ ಅವರ ಪಶ್ಚಾತ್ತಾಪ ಸ್ವೀಕರಿಸಿದನು. ನಿಸ್ಸಂದೇಹವಾಗಿಯೂ ಅವನು ಪಶ್ಚಾತ್ತಾಪ ಸ್ವೀಕರಿಸುವವÀನು ಕರುಣಾನಿಧಿಯು ಆಗಿದ್ದಾನೆ. info
التفاسير: