ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
94 : 16

وَلَا تَتَّخِذُوْۤا اَیْمَانَكُمْ دَخَلًا بَیْنَكُمْ فَتَزِلَّ قَدَمٌ بَعْدَ ثُبُوْتِهَا وَتَذُوْقُوا السُّوْٓءَ بِمَا صَدَدْتُّمْ عَنْ سَبِیْلِ اللّٰهِ ۚ— وَلَكُمْ عَذَابٌ عَظِیْمٌ ۟

ನೀವು ನಿಮ್ಮ ಪ್ರತಿಜ್ಞೆಗಳನ್ನು ಪರಸ್ಪರ ವಂಚನೆಯ ಮಾರ್ಗವನ್ನಾಗಿ ಮಾಡಿಕೊಳ್ಳಬೇಡಿರಿ. ನಿಮ್ಮ ಪಾದಗಳು (ಇಸ್ಲಾಮಿನಲ್ಲಿ) ಸ್ಥಿರಗೊಂಡ ಬಳಿಕ ಜಾರಿಹೋಗಬಹುದು ನೀವು ಅಲ್ಲಾಹನ ಮಾರ್ಗದಿಂದ ತಡೆದ ಕಾರಣಕ್ಕಾಗಿ ಕೇಡನ್ನು ಸವಿಯಿರಿ. ಹಾಗೂ ನಿಮಗೆ ಮಹಾ ಯಾತನೆಯಿರುವುದು. info
التفاسير:

external-link copy
95 : 16

وَلَا تَشْتَرُوْا بِعَهْدِ اللّٰهِ ثَمَنًا قَلِیْلًا ؕ— اِنَّمَا عِنْدَ اللّٰهِ هُوَ خَیْرٌ لَّكُمْ اِنْ كُنْتُمْ تَعْلَمُوْنَ ۟

ಅಲ್ಲಾಹನ ಒಪ್ಪಂದವನ್ನು ಅತ್ಯಲ್ಪ ಲಾಭಕ್ಕಾಗಿ ನೀವು ಮಾರಬೇಡಿರಿ. ನೀವು ತಿಳಿದಿದ್ದರೆ ಅಲ್ಲಾಹನ ಬಳಿ ಇರುವುದೇ (ಪುಣ್ಯವೇ) ನಿಮಗೆ ಅತ್ಯುತ್ತಮವಾಗಿದೆ. info
التفاسير:

external-link copy
96 : 16

مَا عِنْدَكُمْ یَنْفَدُ وَمَا عِنْدَ اللّٰهِ بَاقٍ ؕ— وَلَنَجْزِیَنَّ الَّذِیْنَ صَبَرُوْۤا اَجْرَهُمْ بِاَحْسَنِ مَا كَانُوْا یَعْمَلُوْنَ ۟

ನಿಮ್ಮ ಬಳಿಯಲ್ಲಿರುವುದೆಲ್ಲವೂ ಅಳಿದುಹೋಗಲಿದೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಬಾಕಿ ಉಳಿಯುವುದು. ಖಂಡಿತ ನಾವು ಸಹನೆ ವಹಿಸಿದವರಿಗೆ ಅವರ ಸತ್ಕರ್ಮಗಳ ಫಲವಾಗಿ ಅತ್ಯುತ್ತಮ ಪ್ರತಿಫಲವನ್ನು ನೀಡಲಿರುವೆವು. info
التفاسير:

external-link copy
97 : 16

مَنْ عَمِلَ صَالِحًا مِّنْ ذَكَرٍ اَوْ اُ وَهُوَ مُؤْمِنٌ فَلَنُحْیِیَنَّهٗ حَیٰوةً طَیِّبَةً ۚ— وَلَنَجْزِیَنَّهُمْ اَجْرَهُمْ بِاَحْسَنِ مَا كَانُوْا یَعْمَلُوْنَ ۟

ಪುರುಷನಾಗಿರಲಿ, ಸ್ತಿçÃಯಾಗಿರಲಿ ಯಾರು ಸತ್ಯ ವಿಶ್ವಾಸವನ್ನಿರಿಸಿಕೊಂಡು ಸತ್ಕರ್ಮವನ್ನು ಕೈಗೊಳ್ಳುವರೋ ನಾವು ಅವನಿಗೆ ಪರಿಶುದ್ದ ಜೀವನವನ್ನು ದಯಪಾಲಿಸುವೆವು ಮತ್ತು ಅವರಿಗೆ ತಮ್ಮ ಸತ್ಕರ್ಮಗಳಿಗನುಸಾರ ಉತ್ತಮ ಪ್ರತಿಫಲವನ್ನು ಕರುಣಿಸುವೆವು. info
التفاسير:

external-link copy
98 : 16

فَاِذَا قَرَاْتَ الْقُرْاٰنَ فَاسْتَعِذْ بِاللّٰهِ مِنَ الشَّیْطٰنِ الرَّجِیْمِ ۟

ನೀವು ಕುರ್‌ಆನ್ ಪಠಿಸುವುದಾದರೆ ಶಪಿಸಲ್ಪಟ್ಟ ಶÉÊತಾನನಿಂದ ಅಲ್ಲಾಹನ ಅಭಯ ಯಾಚಿಸಿರಿ. info
التفاسير:

external-link copy
99 : 16

اِنَّهٗ لَیْسَ لَهٗ سُلْطٰنٌ عَلَی الَّذِیْنَ اٰمَنُوْا وَعَلٰی رَبِّهِمْ یَتَوَكَّلُوْنَ ۟

ಸತ್ಯವಿಶ್ವಾಸವನ್ನಿಟ್ಟು ತಮ್ಮ ಪ್ರಭುವಿನ ಮೇಲೆ ಭರವಸೆಯನ್ನಿರಿಸಿದವರ ಮೇಲೆ ಅವನ ಯಾವುದೇ ಪ್ರಾಬಲ್ಯವು ನಡೆಯದು. info
التفاسير:

external-link copy
100 : 16

اِنَّمَا سُلْطٰنُهٗ عَلَی الَّذِیْنَ یَتَوَلَّوْنَهٗ وَالَّذِیْنَ هُمْ بِهٖ مُشْرِكُوْنَ ۟۠

ಆದರೆ ಅವನ (ಶೈತಾನನ) ಪ್ರಾಬಲ್ಯವಂತು ಕೇವಲ ಅವನನ್ನು ಆಪ್ತಮಿತ್ರನನ್ನಾಗಿ ಸ್ವೀಕರಿಸಿಕೊಂಡವರ ಹಾಗೂ ಅವನ ದುಷ್ಪೆçÃರಣೆಗಳಿಂದ ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸಿಕೊಂಡವರ ಮೇಲೆ ಮಾತ್ರ ನಡೆಯುತ್ತದೆ. info
التفاسير:

external-link copy
101 : 16

وَاِذَا بَدَّلْنَاۤ اٰیَةً مَّكَانَ اٰیَةٍ ۙ— وَّاللّٰهُ اَعْلَمُ بِمَا یُنَزِّلُ قَالُوْۤا اِنَّمَاۤ اَنْتَ مُفْتَرٍ ؕ— بَلْ اَكْثَرُهُمْ لَا یَعْلَمُوْنَ ۟

ನಾವು ಒಂದು ಸೂಕ್ತಿಯ ಸ್ಥಾನದಲ್ಲಿ ಇನ್ನೊಂದು ಸೂಕ್ತಿಯನ್ನು ಬದಲಿಸಿದಾಗ ಏನನ್ನು ಅವತೀರ್ಣಗೊಳಸಿಬೇಕೆಂದು ಅಲ್ಲಾಹನೇ ಚೆನ್ನಾಗಿ ಬಲ್ಲನು ನೀವೇ ಸ್ವಯಂ ಸೃಷ್ಟಿಸಿರುವಿರಿ ಎಂದು ಅವರು(ಸತ್ಯನಿಷೇಧಿಗಳು) ಹೇಳುತ್ತಾರೆ. ವಾಸ್ತವದಲ್ಲಿ ಅವರ ಪೈಕಿ ಹೆಚ್ಚಿನವರು ಅರಿಯುವುದೇ ಇಲ್ಲ. info
التفاسير:

external-link copy
102 : 16

قُلْ نَزَّلَهٗ رُوْحُ الْقُدُسِ مِنْ رَّبِّكَ بِالْحَقِّ لِیُثَبِّتَ الَّذِیْنَ اٰمَنُوْا وَهُدًی وَّبُشْرٰی لِلْمُسْلِمِیْنَ ۟

ಹೇಳಿರಿ: ಸತ್ಯವಿಶ್ವಾಸಿಗಳನ್ನು ಸದೃಢಗೊಳಿಸಲಿಕ್ಕಾಗಿ, ಮತ್ತು ವಿಧೇಯರಾಗುವವರಿಗೆ ಮಾರ್ಗದರ್ಶನ ಹಾಗೂ ಶುಭವಾರ್ತೆಯಾಗಲಿಕ್ಕಾಗಿ ಇದನ್ನು ಪವಿತ್ರಾತ್ಮನು ನಿಮ್ಮ ಪ್ರಭುವಿನ ಕಡೆಯಿಂದ ಸತ್ಯದೊಂದಿಗೆ ಅವತೀರ್ಣಗೊಳಿಸಿದನು. info
التفاسير: