ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

external-link copy
61 : 10

وَمَا تَكُوْنُ فِیْ شَاْنٍ وَّمَا تَتْلُوْا مِنْهُ مِنْ قُرْاٰنٍ وَّلَا تَعْمَلُوْنَ مِنْ عَمَلٍ اِلَّا كُنَّا عَلَیْكُمْ شُهُوْدًا اِذْ تُفِیْضُوْنَ فِیْهِ ؕ— وَمَا یَعْزُبُ عَنْ رَّبِّكَ مِنْ مِّثْقَالِ ذَرَّةٍ فِی الْاَرْضِ وَلَا فِی السَّمَآءِ وَلَاۤ اَصْغَرَ مِنْ ذٰلِكَ وَلَاۤ اَكْبَرَ اِلَّا فِیْ كِتٰبٍ مُّبِیْنٍ ۟

ಓ ಪೈಗಂಬರರೇ ನೀವು ಯಾವ ಸ್ಥಿತಿಯಲ್ಲಿದ್ದರೂ, ಅಲ್ಲಾಹನು ಅವತೀರ್ಣಗೊಳಿಸಿರುವ ಕುರ್‌ಆನಿನಿಂದ ನೀವು ಓದಿ ಕೇಳಿಸುತ್ತಿದ್ದರೂ ಮತ್ತು ಓ ಜನರೇ ನೀವು ಯಾವುದೇ ಕೆಲಸ ಮಾಡುತ್ತಿದ್ದು ಅದರಲ್ಲಿ ಮಗ್ನರಾಗಿದ್ದರೂ ನಿಮ್ಮನ್ನು ನಾವು ನೋಡುತ್ತಿರುತ್ತೇವೆ, ಮತ್ತು ನಿಮ್ಮ ಪ್ರಭುವಿನಿಂದ ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅಣು ತೂಕದಷ್ಟು ವಸ್ತುವೂ ಅಡಗಿರುವುದಿಲ್ಲ, ಅಥವಾ ಅದಕ್ಕಿಂತ ಚಿಕ್ಕದಿರಲಿ, ದೊಡ್ಡದಿರಲಿ ಎಲ್ಲವೂ ಒಂದು ಸುಸ್ಪಷ್ಟ ದಾಖಲೆಯಲ್ಲಿರುತ್ತದೆ. info
التفاسير: