[1] ಕೆಳಗಿಳಿಸುವುದು ಮತ್ತು ಮೇಲೇರಿಸುವುದು ಎಂದರೆ ಗೌರವಿಸುವುದು ಮತ್ತು ಅವಮಾನಿಸುವುದು. ಪರಲೋಕದಲ್ಲಿ ಅಲ್ಲಾಹನ ನೀತಿವಂತ ದಾಸರನ್ನು ಉನ್ನತ ಸ್ಥಾನಮಾನಗಳಿಗೆ ಏರಿಸಲಾಗುತ್ತದೆ. ಅವರು ಇಹಲೋಕದಲ್ಲಿ ಎಷ್ಟು ಅವಮಾನಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಸಹ. ಅದೇ ರೀತಿ ಪರಲೋಕದಲ್ಲಿ ದುಷ್ಕರ್ಮಿಗಳನ್ನು ಅತ್ಯಂತ ಅವಮಾನಕರ ಸ್ಥಾನಗಳಿಗೆ ಇಳಿಸಲಾಗುವುದು. ಅವರು ಇಹಲೋಕದಲ್ಲಿ ಎಷ್ಟೇ ಗೌರವಾರ್ಹರಾಗಿದ್ದರೂ ಸಹ.
[1] ಹಿಂದಿನ ಕಾಲದಲ್ಲಿ ಜನರು ಮರುಭೂಮಿ ಮತ್ತು ಅಡವಿಗಳ ಮೂಲಕ ಪ್ರಯಾಣ ಮಾಡುತ್ತಿದ್ದರು. ರಾತ್ರಿ ವೇಳೆಯಲ್ಲಿ ಅವರು ಮರಗಳನ್ನು ಕಡಿದು ಬೆಂಕಿಯುರಿಸುತ್ತಿದ್ದರು. ಅವರು ಅದರಿಂದ ದೊಂದಿಗಳನ್ನು ತಯಾರಿಸುತ್ತಿದ್ದರು ಮತ್ತು ಚಳಿ ಕಾಯಿಸುತ್ತಿದ್ದರು. ವನ್ಯಮೃಗಗಳನ್ನು ದೂರವಿಡಲು ಕೂಡ ಅದು ಬಳಕೆಯಾಗುತ್ತಿತ್ತು.
[1] ಅಂದರೆ ಲೌಹುಲ್ ಮಹ್ಫೂಝ್ (ಸುರಕ್ಷಿತ ಫಲಕ) ನಲ್ಲಿರುವ ಪವಿತ್ರ ಕುರ್‌ಆನನ್ನು ದೇವದೂತರುಗಳು ಮಾತ್ರ ಸ್ಪರ್ಶಿಸುತ್ತಾರೆ. ಕುರ್‌ಆನನ್ನು ಆಕಾಶಲೋಕದಿಂದ ಶೈತಾನರು ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಿಗೆ ತಂದು ಕೊಡುತ್ತಿದ್ದಾರೆಂದು ಸತ್ಯನಿಷೇಧಿಗಳು ಅಪಪ್ರಚಾರ ಮಾಡುತ್ತಿದ್ದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಶೈತಾನರಿಗೆ ಕುರ್‌ಆನನ್ನು ತರಲು ಸಾಧ್ಯವಿಲ್ಲ. ಏಕೆಂದರೆ ಅದು ಅತ್ಯಂತ ಭದ್ರತೆಯಲ್ಲಿದೆ. ದೇವದೂತರುಗಳ ಹೊರತು ಬೇರೆ ಯಾರಿಗೂ ಅದನ್ನು ಸ್ಪರ್ಶಿಸುವ ಅಧಿಕಾರವಿಲ್ಲ.