Terjemahan makna Alquran Alkarim - Terjemahan Berbahasa Kannada - Hamzah Batur

Nomor Halaman:close

external-link copy
6 : 46

وَاِذَا حُشِرَ النَّاسُ كَانُوْا لَهُمْ اَعْدَآءً وَّكَانُوْا بِعِبَادَتِهِمْ كٰفِرِیْنَ ۟

ಜನರನ್ನು ಒಟ್ಟುಗೂಡಿಸಲಾಗುವಾಗ ಅವರು ಇವರಿಗೆ ವೈರಿಗಳಾಗುವರು ಮತ್ತು ಇವರು ಮಾಡಿದ ಆರಾಧನೆಗಳನ್ನು ನಿಷೇಧಿಸುವರು. info
التفاسير:

external-link copy
7 : 46

وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلْحَقِّ لَمَّا جَآءَهُمْ ۙ— هٰذَا سِحْرٌ مُّبِیْنٌ ۟ؕ

ಅವರಿಗೆ ನಮ್ಮ ಸ್ಪಷ್ಟ ವಚನಗಳನ್ನು ಓದಿಕೊಡಲಾದರೆ, ಆ ಸತ್ಯನಿಷೇಧಿಗಳು ಸತ್ಯವು ಅವರ ಬಳಿಗೆ ಬಂದಾಗ ಅದರ ಬಗ್ಗೆ ಹೇಳುವರು: “ಇದೊಂದು ಸ್ಪಷ್ಟ ಮಾಟಗಾರಿಕೆಯಾಗಿದೆ.” info
التفاسير:

external-link copy
8 : 46

اَمْ یَقُوْلُوْنَ افْتَرٰىهُ ؕ— قُلْ اِنِ افْتَرَیْتُهٗ فَلَا تَمْلِكُوْنَ لِیْ مِنَ اللّٰهِ شَیْـًٔا ؕ— هُوَ اَعْلَمُ بِمَا تُفِیْضُوْنَ فِیْهِ ؕ— كَفٰی بِهٖ شَهِیْدًا بَیْنِیْ وَبَیْنَكُمْ ؕ— وَهُوَ الْغَفُوْرُ الرَّحِیْمُ ۟

ಅದನ್ನು ಅವರು (ಪ್ರವಾದಿ) ಸ್ವಯಂ ರಚಿಸಿದರು ಎಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ಅದನ್ನು ನಾನೇ ಸ್ವಯಂ ರಚಿಸಿದ್ದರೆ ಅಲ್ಲಾಹನ ಶಿಕ್ಷೆಯಿಂದ ನನ್ನನ್ನು ರಕ್ಷಿಸಲು ನಿಮಗೆ ಸಾಧ್ಯವಿಲ್ಲ. ನೀವು ಅದರ (ಕುರ್‌ಆನಿನ) ಬಗ್ಗೆ ಏನು ಮಾತನಾಡುತ್ತಿದ್ದೀರೋ ಅದನ್ನು ಅವನು ಬಹಳ ಚೆನ್ನಾಗಿ ತಿಳಿದಿದ್ದಾನೆ. ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅವನೇ ಸಾಕು. ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.” info
التفاسير:

external-link copy
9 : 46

قُلْ مَا كُنْتُ بِدْعًا مِّنَ الرُّسُلِ وَمَاۤ اَدْرِیْ مَا یُفْعَلُ بِیْ وَلَا بِكُمْ ؕ— اِنْ اَتَّبِعُ اِلَّا مَا یُوْحٰۤی اِلَیَّ وَمَاۤ اَنَا اِلَّا نَذِیْرٌ مُّبِیْنٌ ۟

ಹೇಳಿರಿ: “ನಾನು ಹೊಸದಾಗಿ ಬಂದ ಸಂದೇಶವಾಹಕನಲ್ಲ. ನನ್ನನ್ನು ಮತ್ತು ನಿಮ್ಮನ್ನು ಏನು ಮಾಡಲಾಗುವುದೆಂದು ನನಗೆ ತಿಳಿದಿಲ್ಲ. ನನಗೆ ದೇವವಾಣಿಯಾಗಿ ನೀಡಲಾಗುತ್ತಿರುವುದನ್ನಷ್ಟೇ ನಾನು ಅನುಸರಿಸುತ್ತಿದ್ದೇನೆ. ನಾನೊಬ್ಬ ಸ್ಪಷ್ಟ ಮುನ್ನೆಚ್ಚರಿಕೆಗಾರನಲ್ಲದೆ ಇನ್ನೇನೂ ಅಲ್ಲ.” info
التفاسير:

external-link copy
10 : 46

قُلْ اَرَءَیْتُمْ اِنْ كَانَ مِنْ عِنْدِ اللّٰهِ وَكَفَرْتُمْ بِهٖ وَشَهِدَ شَاهِدٌ مِّنْ بَنِیْۤ اِسْرَآءِیْلَ عَلٰی مِثْلِهٖ فَاٰمَنَ وَاسْتَكْبَرْتُمْ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟۠

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹನ ಕಡೆಯಿಂದಾಗಿದ್ದು, ನೀವು ಇದನ್ನು ನಿಷೇಧಿಸುವುದಾದರೆ, ಮತ್ತು ಇದರಂತಿರುವ ಒಂದಕ್ಕೆ ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬರು ಸಾಕ್ಷ್ಯವಹಿಸಿ, ಅದರಲ್ಲಿ ವಿಶ್ವಾಸವಿಟ್ಟು, ನೀವು ಅಹಂಕಾರ ತೋರುವುದಾದರೆ (ನಿಮ್ಮ ಸ್ಥಿತಿಯು ಎಷ್ಟು ಶೋಚನೀಯವಾಗಿದೆ!) ನಿಶ್ಚಯವಾಗಿಯೂ ಅಕ್ರಮಿಗಳಾದ ಜನರನ್ನು ಅಲ್ಲಾಹು ಸನ್ಮಾರ್ಗಕ್ಕೆ ಸೇರಿಸುವುದಿಲ್ಲ.” info
التفاسير:

external-link copy
11 : 46

وَقَالَ الَّذِیْنَ كَفَرُوْا لِلَّذِیْنَ اٰمَنُوْا لَوْ كَانَ خَیْرًا مَّا سَبَقُوْنَاۤ اِلَیْهِ ؕ— وَاِذْ لَمْ یَهْتَدُوْا بِهٖ فَسَیَقُوْلُوْنَ هٰذَاۤ اِفْكٌ قَدِیْمٌ ۟

ಸತ್ಯವಿಶ್ವಾಸಿಗಳ ಬಗ್ಗೆ ಸತ್ಯನಿಷೇಧಿಗಳು ಹೇಳಿದರು: “ಇದು (ಇಸ್ಲಾಂ ಧರ್ಮ) ಒಳಿತಾಗಿದ್ದರೆ ಈ ಜನರು ನಮಗಿಂತ ಮೊದಲು ಅದನ್ನು ತಲುಪುತ್ತಿರಲಿಲ್ಲ.” ಅವರು ಅದರಿಂದ (ಕುರ್‌ಆನಿನಿಂದ) ಸನ್ಮಾರ್ಗವನ್ನು ಪಡೆಯದ ಕಾರಣ, “ಇದು ಪುರಾತನ ಕಾಲದ ಕಟ್ಟುಕಥೆಯಾಗಿದೆ” ಎಂದು ಅವರು ಹೇಳುತ್ತಾರೆ. info
التفاسير:

external-link copy
12 : 46

وَمِنْ قَبْلِهٖ كِتٰبُ مُوْسٰۤی اِمَامًا وَّرَحْمَةً ؕ— وَهٰذَا كِتٰبٌ مُّصَدِّقٌ لِّسَانًا عَرَبِیًّا لِّیُنْذِرَ الَّذِیْنَ ظَلَمُوْا ۖۗ— وَبُشْرٰی لِلْمُحْسِنِیْنَ ۟

ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕ ಮತ್ತು ದಯೆಯಾಗಿ ಬಂದಿತ್ತು. ಇದು (ಅದನ್ನು) ದೃಢೀಕರಿಸುವ ಅರಬ್ಬಿ ಭಾಷೆಯಲ್ಲಿರುವ ಗ್ರಂಥವಾಗಿದೆ. ಅಕ್ರಮಿಗಳಿಗೆ ಎಚ್ಚರಿಕೆ ನೀಡಲು ಮತ್ತು ಸತ್ಕರ್ಮವೆಸಗುವವರಿಗೆ ಸುವಾರ್ತೆ ನೀಡಲು (ಇದು ಅವತೀರ್ಣವಾಗಿದೆ). info
التفاسير:

external-link copy
13 : 46

اِنَّ الَّذِیْنَ قَالُوْا رَبُّنَا اللّٰهُ ثُمَّ اسْتَقَامُوْا فَلَا خَوْفٌ عَلَیْهِمْ وَلَا هُمْ یَحْزَنُوْنَ ۟ۚ

“ನಮ್ಮ ರಬ್ಬ್ (ಪರಿಪಾಲಕ) ಅಲ್ಲಾಹು” ಎಂದು ಹೇಳಿ ನಂತರ ಅದರಲ್ಲಿ ಸ್ಥಿರವಾಗಿ ನಿಂತವರು ಯಾರೋ ಅವರಿಗೆ ಯಾವುದೇ ಭಯವಿಲ್ಲ. ಅವರು ದುಃಖಿಸಬೇಕಾಗಿಯೂ ಬರುವುದಿಲ್ಲ. info
التفاسير:

external-link copy
14 : 46

اُولٰٓىِٕكَ اَصْحٰبُ الْجَنَّةِ خٰلِدِیْنَ فِیْهَا ۚ— جَزَآءً بِمَا كَانُوْا یَعْمَلُوْنَ ۟

ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅವರು ಮಾಡಿದ ಕರ್ಮಗಳ ಪ್ರತಿಫಲವಾಗಿದೆ. info
التفاسير: