Terjemahan makna Alquran Alkarim - Terjemahan Berbahasa Kannada - Basir Maisuri

external-link copy
10 : 60

یٰۤاَیُّهَا الَّذِیْنَ اٰمَنُوْۤا اِذَا جَآءَكُمُ الْمُؤْمِنٰتُ مُهٰجِرٰتٍ فَامْتَحِنُوْهُنَّ ؕ— اَللّٰهُ اَعْلَمُ بِاِیْمَانِهِنَّ ۚ— فَاِنْ عَلِمْتُمُوْهُنَّ مُؤْمِنٰتٍ فَلَا تَرْجِعُوْهُنَّ اِلَی الْكُفَّارِ ؕ— لَا هُنَّ حِلٌّ لَّهُمْ وَلَا هُمْ یَحِلُّوْنَ لَهُنَّ ؕ— وَاٰتُوْهُمْ مَّاۤ اَنْفَقُوْا ؕ— وَلَا جُنَاحَ عَلَیْكُمْ اَنْ تَنْكِحُوْهُنَّ اِذَاۤ اٰتَیْتُمُوْهُنَّ اُجُوْرَهُنَّ ؕ— وَلَا تُمْسِكُوْا بِعِصَمِ الْكَوَافِرِ وَسْـَٔلُوْا مَاۤ اَنْفَقْتُمْ وَلْیَسْـَٔلُوْا مَاۤ اَنْفَقُوْا ؕ— ذٰلِكُمْ حُكْمُ اللّٰهِ ؕ— یَحْكُمُ بَیْنَكُمْ ؕ— وَاللّٰهُ عَلِیْمٌ حَكِیْمٌ ۟

ಓ ಸತ್ಯ ವಿಶ್ವಾಸವಿರಿಸಿದವರೇ, ನಿಮ್ಮ ಬಳಿಗೆ ಸತ್ಯವಿಶ್ವಾಸಿನಿ ಸ್ತ್ರೀಯರು ವಲಸೆ ಬಂದುಬಿಟ್ಟರೆ ನೀವು ಅವರನ್ನು ಪರೀಕ್ಷಿಸಿರಿ ವಾಸ್ತವದಲ್ಲಿ ಅವರ ವಿಶ್ವಾಸದ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು. ಆದರೆ ನೀವು ಅವರನ್ನು ಸತ್ಯವಿಶ್ವಾಸಿನಿಗಳೆಂದು ಅರಿತುಕೊಂಡಲ್ಲಿ ಅವರನ್ನು ಸತ್ಯನಿಷೇಧಿಗಳ ಬಳಿಗೆ ಹಿಂದಿರುಗಿಸಬೇಡಿರಿ. ಅವರು ಅವರಿಗೆ ಧರ್ಮಸಮ್ಮತವಲ್ಲ ಮತ್ತು ಸತ್ಯ ನಿಷೇಧಿಗಳೂ ಅವರಿಗೆ ಧರ್ಮಸಮ್ಮತರಲ್ಲ ಮತ್ತು ಅವರ ಸತ್ಯನಿಷೇಧಿ ಪತಿಯರು ಮಾಡಿರುವ ಖರ್ಚನ್ನು ನೀವು ಅವರಿಗೆ ಕೊಟ್ಟುಬಿಡಿ, ನೀವು ಆ ಸ್ತ್ರೀಯರನ್ನು ಅವರ ಮಹರ್(ವಧುಧನ) ಪಾವತಿಸಿರಿ, ಅವರೊಂದಿಗೆ ವಿವಾಹ ಮಾಡಿಕೊಳ್ಳುವುದರಲ್ಲಿ ನಿಮ್ಮ ಮೇಲೆ ಯಾವ ದೋಷವೂ ಇರುವುದಿಲ್ಲ, ನೀವು ಸತ್ಯನಿಷೆೆÃಧಿ ಸ್ತ್ರೀಯರನ್ನು ವಿವಾಹ ಬಂಧನದಲ್ಲಿರಿಸಿಕೊಳ್ಳಬೇಡಿರಿ. ಮತ್ತು ನೀವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಿರಿ ಮತ್ತು ಅವರೂ ಸಹ ತಾವು ಖರ್ಚು ಮಾಡಿರುವುದನ್ನು ಕೇಳಿ ಪಡೆಯಲಿ. ಇದು ಅಲ್ಲಾಹನ ತೀರ್ಪು ಆಗಿದೆ. ಅವನು ನಿಮ್ಮ ನಡುವೆ ತೀರ್ಮಾನ ಮಾಡುತ್ತಾನೆ ಮತ್ತು ಅಲ್ಲಾಹನು ಮಹಾಜ್ಞಾನಿಯೂ ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير: