Terjemahan makna Alquran Alkarim - Terjemahan Berbahasa Kannada - Basir Maisuri

ಅನ್ನಜ್ಮ್

external-link copy
1 : 53

وَالنَّجْمِ اِذَا هَوٰی ۟ۙ

ನಕ್ಷತ್ರದಾಣೆ, ಅದು ಅಸ್ತಮಿಸಿದಾಗ. info
التفاسير:

external-link copy
2 : 53

مَا ضَلَّ صَاحِبُكُمْ وَمَا غَوٰی ۟ۚ

ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ. info
التفاسير:

external-link copy
3 : 53

وَمَا یَنْطِقُ عَنِ الْهَوٰی ۟ؕۚ

ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ. info
التفاسير:

external-link copy
4 : 53

اِنْ هُوَ اِلَّا وَحْیٌ یُّوْحٰی ۟ۙ

ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ. info
التفاسير:

external-link copy
5 : 53

عَلَّمَهٗ شَدِیْدُ الْقُوٰی ۟ۙ

ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ. info
التفاسير:

external-link copy
6 : 53

ذُوْ مِرَّةٍ ؕ— فَاسْتَوٰی ۟ۙ

ಅವನು ಬಲಿಷ್ಠನಾಗಿರುವನು, ಅನಂತರ ಅವನು ಪ್ರತ್ಯಕ್ಷನಾದನು. info
التفاسير:

external-link copy
7 : 53

وَهُوَ بِالْاُفُقِ الْاَعْلٰی ۟ؕ

ಅವನು ಉನ್ನತ ದಿಗಂತದ ತುದಿಯಲ್ಲಿದ್ದನು. info
التفاسير:

external-link copy
8 : 53

ثُمَّ دَنَا فَتَدَلّٰی ۟ۙ

ತರುವಾಯ ಅವನು ಹತ್ತಿರವಾದನು, ಬಳಿಕ ಇನ್ನೂ ನಿಕಟನಾದನು. info
التفاسير:

external-link copy
9 : 53

فَكَانَ قَابَ قَوْسَیْنِ اَوْ اَدْنٰی ۟ۚ

ಎರಡು ಬಿಲ್ಲುಗಳಷ್ಟು ಅಥವ ಅದಕ್ಕಿಂತಲೂ ಸಮೀಪ. info
التفاسير:

external-link copy
10 : 53

فَاَوْحٰۤی اِلٰی عَبْدِهٖ مَاۤ اَوْحٰی ۟ؕ

ಆಗ ಅವನು ಅಲ್ಲಾಹನ ದಾಸನೆಡೆಗೆ ತಲುಪಿಸಬೇಕಾದುದನ್ನು ದಿವ್ಯವಾಣಿಯನ್ನು ತಲುಪಿಸಿದನು. info
التفاسير:

external-link copy
11 : 53

مَا كَذَبَ الْفُؤَادُ مَا رَاٰی ۟

ಪೈಗಂಬರರು ನೋಡಿದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ. info
التفاسير:

external-link copy
12 : 53

اَفَتُمٰرُوْنَهٗ عَلٰی مَا یَرٰی ۟

ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ? info
التفاسير:

external-link copy
13 : 53

وَلَقَدْ رَاٰهُ نَزْلَةً اُخْرٰی ۟ۙ

ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು. info
التفاسير:

external-link copy
14 : 53

عِنْدَ سِدْرَةِ الْمُنْتَهٰی ۟

'ಸಿದ್‌ರತುಲ್ ಮುಂತಹಾ'ದ ಬಳಿ. info
التفاسير:

external-link copy
15 : 53

عِنْدَهَا جَنَّةُ الْمَاْوٰی ۟ؕ

ಅದರ ಸಮೀಪದಲ್ಲಿ 'ಜನ್ನತುಲ್ ಮಾವಾ' ಇದೆ. info
التفاسير:

external-link copy
16 : 53

اِذْ یَغْشَی السِّدْرَةَ مَا یَغْشٰی ۟ۙ

ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು. info
التفاسير:

external-link copy
17 : 53

مَا زَاغَ الْبَصَرُ وَمَا طَغٰی ۟

ಪೈಗಂಬರರ ದೃಷ್ಟಿಯು ತಪ್ಪಲಿಲ್ಲ ಮತ್ತು ಮೇರೆಮೀರಲೂ ಇಲ್ಲ. info
التفاسير:

external-link copy
18 : 53

لَقَدْ رَاٰی مِنْ اٰیٰتِ رَبِّهِ الْكُبْرٰی ۟

ನಿಜವಾಗಿಯೂ ಅವರು ತಮ್ಮ ಪ್ರಭುವಿನ ಮಹಾ ನಿದರ್ಶನಗಳಲ್ಲಿ ಕೆಲವನ್ನು ಕಂಡರು. info
التفاسير:

external-link copy
19 : 53

اَفَرَءَیْتُمُ اللّٰتَ وَالْعُزّٰی ۟ۙ

ನೀವು ಲಾತ್ ಉಝ್ಝಾಗಳ ಬಗ್ಗೆ ಯೋಚಿಸಿದ್ದೀರಾ ? info
التفاسير:

external-link copy
20 : 53

وَمَنٰوةَ الثَّالِثَةَ الْاُخْرٰی ۟

ಮೂರನೆಯದಾದ 'ಮನಾತ'ನ ಬಗ್ಗೆ ? info
التفاسير:

external-link copy
21 : 53

اَلَكُمُ الذَّكَرُ وَلَهُ الْاُ ۟

ಏನು ನಿಮಗೆ ಪುತ್ರರು ಮತ್ತು ಅಲ್ಲಾಹನಿಗೆ ಪುತ್ರಿಯರೇ ? info
التفاسير:

external-link copy
22 : 53

تِلْكَ اِذًا قِسْمَةٌ ضِیْزٰی ۟

ಹಾಗಿದ್ದರೆ ಇದಂತು ಘೋರ ಅನ್ಯಾಯದ ಹಂಚುವಿಕೆಯಾಗಿದೆ. info
التفاسير:

external-link copy
23 : 53

اِنْ هِیَ اِلَّاۤ اَسْمَآءٌ سَمَّیْتُمُوْهَاۤ اَنْتُمْ وَاٰبَآؤُكُمْ مَّاۤ اَنْزَلَ اللّٰهُ بِهَا مِنْ سُلْطٰنٍ ؕ— اِنْ یَّتَّبِعُوْنَ اِلَّا الظَّنَّ وَمَا تَهْوَی الْاَنْفُسُ ۚ— وَلَقَدْ جَآءَهُمْ مِّنْ رَّبِّهِمُ الْهُدٰی ۟ؕ

ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ. info
التفاسير:

external-link copy
24 : 53

اَمْ لِلْاِنْسَانِ مَا تَمَنّٰی ۟ؗۖ

ಏನು ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಲಭಿಸುವುದೇ ? info
التفاسير:

external-link copy
25 : 53

فَلِلّٰهِ الْاٰخِرَةُ وَالْاُوْلٰی ۟۠

ಆದರೆ ಇಹಲೋಕ ಮತ್ತು ಪರಲೋಕ ಅಲ್ಲಾಹನದ್ದಾಗಿದೆ. info
التفاسير:

external-link copy
26 : 53

وَكَمْ مِّنْ مَّلَكٍ فِی السَّمٰوٰتِ لَا تُغْنِیْ شَفَاعَتُهُمْ شَیْـًٔا اِلَّا مِنْ بَعْدِ اَنْ یَّاْذَنَ اللّٰهُ لِمَنْ یَّشَآءُ وَیَرْضٰی ۟

ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ. info
التفاسير: