Terjemahan makna Alquran Alkarim - Terjemahan Berbahasa Kannada - Basir Maisuri

Nomor Halaman:close

external-link copy
146 : 2

اَلَّذِیْنَ اٰتَیْنٰهُمُ الْكِتٰبَ یَعْرِفُوْنَهٗ كَمَا یَعْرِفُوْنَ اَبْنَآءَهُمْ ؕ— وَاِنَّ فَرِیْقًا مِّنْهُمْ لَیَكْتُمُوْنَ الْحَقَّ وَهُمْ یَعْلَمُوْنَ ۟ؔ

ನಾವು ಯಾರಿಗೆ ಗ್ರಂಥವನ್ನು ನೀಡಿರುವೆವೋ ಅವರು ತಮ್ಮ ಮಕ್ಕಳನ್ನು ಗುರುತಿಸಿಕೊಳ್ಳವಂತೆ ಅವರನ್ನು (ಮುಹಮ್ಮದರನ್ನು) ಗುರುತಿಸುತ್ತಾರೆ. ಖಂಡಿತವಾಗಿಯೂ ಅವರ ಪೈಕಿ ಒಂದು ಗುಂಪು ತಿಳಿದೂ ತಿಳಿದೂ ಸತ್ಯವನ್ನು ಮರೆ ಮಾಚುತ್ತಿದೆ. info
التفاسير:

external-link copy
147 : 2

اَلْحَقُّ مِنْ رَّبِّكَ فَلَا تَكُوْنَنَّ مِنَ الْمُمْتَرِیْنَ ۟۠

ನಿಮ್ಮ ಪ್ರಭುವಿನ ವತಿಯ ಸತ್ಯವಾಗಿದೆ. ಆದ್ದರಿಂದ! ನೀವು ಸಂಶಯಗ್ರಸ್ತರಲ್ಲಿ ಸೇರಬಾರದು. info
التفاسير:

external-link copy
148 : 2

وَلِكُلٍّ وِّجْهَةٌ هُوَ مُوَلِّیْهَا فَاسْتَبِقُوْا الْخَیْرٰتِ ؔؕ— اَیْنَ مَا تَكُوْنُوْا یَاْتِ بِكُمُ اللّٰهُ جَمِیْعًا ؕ— اِنَّ اللّٰهَ عَلٰی كُلِّ شَیْءٍ قَدِیْرٌ ۟

ಪ್ರತಿಯೊಂದು ಧರ್ಮದವನಿಗೂ ಒಂದು ದಿಶೆ ಇದೆ. ಆರಾಧನೆಯ ಸಮಯದಲ್ಲಿ ಆ ದಿಶೆಗೆ ಮುಖ ಮಾಡುತ್ತಾರೆ. ನೀವೆಲ್ಲೇ ಇದ್ದರೂ ಅಲ್ಲಾಹನು ನಿಮ್ಮನ್ನು (ಅಂತಿಮ ದಿನದಂದು ಒಟ್ಟುಗೂಡಿಸಿ) ತರುವನು. ವಾಸ್ತವದಲ್ಲಿ ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
149 : 2

وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَاِنَّهٗ لَلْحَقُّ مِنْ رَّبِّكَ ؕ— وَمَا اللّٰهُ بِغَافِلٍ عَمَّا تَعْمَلُوْنَ ۟

ನೀವು ಎತ್ತ ಕಡೆಯಿಂದ ಪ್ರಯಾಣದಲ್ಲಿ ಹೊರಟರೂ ತಮ್ಮ ಮುಖವನ್ನು (ನಮಾಝ್‌ಗಾಗಿ) ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ತಿರುಗಿಸಿರಿ. ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ ಮತ್ತು ಅಲ್ಲಾಹನು ನೀವು ಮಾಡುತ್ತಿರುವುದರ ಕುರಿತು ಅಲಕ್ಷö್ಯನಲ್ಲ. info
التفاسير:

external-link copy
150 : 2

وَمِنْ حَیْثُ خَرَجْتَ فَوَلِّ وَجْهَكَ شَطْرَ الْمَسْجِدِ الْحَرَامِ ؕ— وَحَیْثُ مَا كُنْتُمْ فَوَلُّوْا وُجُوْهَكُمْ شَطْرَهٗ ۙ— لِئَلَّا یَكُوْنَ لِلنَّاسِ عَلَیْكُمْ حُجَّةٌ ۗ— اِلَّا الَّذِیْنَ ظَلَمُوْا مِنْهُمْ ۗ— فَلَا تَخْشَوْهُمْ وَاخْشَوْنِیْ ۗ— وَلِاُتِمَّ نِعْمَتِیْ عَلَیْكُمْ وَلَعَلَّكُمْ تَهْتَدُوْنَ ۟ۙۛ

ಮತ್ತು ನೀವು ಯಾವ ಕಡೆಯಿಂದ ಹೊರಟರು (ನಮಾಜಿನಲ್ಲಿ) ತಮ್ಮ ಮುಖವನ್ನು ಮಸ್ಜಿದುಲ್ ಹರಾಮ್‌ನ ದಿಕ್ಕಿಗೆ ಮುಖಮಾಡಿರಿ ಮತ್ತು ಓ ಸತ್ಯವಿಶ್ವಾಸಿಗಳೇ, ನೀವೆಲ್ಲೇ ಇದ್ದರೂ (ನಾಮಾಜ್‌ಗೆ) ನಿಮ್ಮ ಮುಖಗಳನ್ನು ಆ ದಿಕ್ಕಿಗೆ ಮುಖಮಾಡಿರಿ. ಇದು ನಿಮ್ಮ ವಿರುದ್ಧ ಜನರ ಯಾವ ಪುರಾವೆಯು ಇರಬಾರದೆಂದಾಗಿರುತ್ತದೆ. ಆದರೆ ಅವರ ಪೈಕಿ ಆಕ್ರಮವೆಸಗಿದವರ ಹೊರತು. ನೀವು ಅವರನ್ನು ಭಯಪಡಬೇಡಿರಿ. ನನ್ನನ್ನು (ಅಲ್ಲಾಹನನ್ನು) ಮಾತ್ರ ಭಯಪಡಿರಿ ಇದು ನೀವು ಸನ್ಮಾರ್ಗ ಪಡೆಯಲೆಂದೂ ಮತ್ತು ನಾನು ನನ್ನ ಅನುಗ್ರಹವನ್ನು ನಿಮ್ಮ ಮೇಲೆ ಪೂರ್ತಿಗೊಳಿಸಲೆಂದೂ ಆಗಿರುತ್ತದೆ. info
التفاسير:

external-link copy
151 : 2

كَمَاۤ اَرْسَلْنَا فِیْكُمْ رَسُوْلًا مِّنْكُمْ یَتْلُوْا عَلَیْكُمْ اٰیٰتِنَا وَیُزَكِّیْكُمْ وَیُعَلِّمُكُمُ الْكِتٰبَ وَالْحِكْمَةَ وَیُعَلِّمُكُمْ مَّا لَمْ تَكُوْنُوْا تَعْلَمُوْنَ ۟ؕۛ

ನಾವು ನಿಮ್ಮಿಂದಲೇ ಆದ ಒಬ್ಬ ಸಂದೇಶವಾಹಕರನ್ನು ನಿಮ್ಮಲ್ಲಿಗೆ ಕಳುಹಿಸಿರುತ್ತೇವೆ. ಅವರು ನಿಮಗೆ ನಮ್ಮ ಸೂಕ್ತಿಗಳನ್ನು ಓದಿ ಕೇಳಿಸುತ್ತಾರೆ. ಹಾಗೂ ನಿಮ್ಮನ್ನು ಸಂಸ್ಕರಿಸುತ್ತಾರೆ. ಮತ್ತು ನಿಮಗೆ ಈ ದಿವ್ಯ ಗ್ರಂಥವನ್ನೂ, ಸುಜ್ಞಾನವನ್ನೂ ಹಾಗೂ ನೀವು ಅರಿಯದ ವಿಷಯಗಳನ್ನು ನಿಮಗೆ ಕಲಿಸಿ ಕೊಡುತ್ತಾರೆ. info
التفاسير:

external-link copy
152 : 2

فَاذْكُرُوْنِیْۤ اَذْكُرْكُمْ وَاشْكُرُوْا لِیْ وَلَا تَكْفُرُوْنِ ۟۠

ಆದ್ದರಿಂದ ನೀವು ನನ್ನನ್ನು ಸ್ಮರಿಸಿ ನಾನು ಸಹ ನಿಮ್ಮನ್ನು ಸ್ಮರಿಸುತ್ತೇನೆ ಮತ್ತು ನೀವು ನನಗೆ ಕೃತಜ್ಞತೆ ಸಲ್ಲಿಸಿ ಮತ್ತು ನನ್ನೊಂದಿಗೆ ಕೃತಘ್ನತೆ ತೋರದಿರಿ. info
التفاسير:

external-link copy
153 : 2

یٰۤاَیُّهَا الَّذِیْنَ اٰمَنُوا اسْتَعِیْنُوْا بِالصَّبْرِ وَالصَّلٰوةِ ؕ— اِنَّ اللّٰهَ مَعَ الصّٰبِرِیْنَ ۟

ಓ ಸತ್ಯ ವಿಶ್ವಾಸಿಗಳೇ, ನೀವು ಸಹನೆ ಮತ್ತು ನಮಾಝ್‌ನ ಮೂಲಕ ಸಹಾಯ ಯಾಚಿಸಿರಿ. ಖಂಡಿತವಾಗಿಯು ಅಲ್ಲಾಹನು ಸಹನಾಶೀಲರೊಂದಿಗಿದ್ದಾನೆ. info
التفاسير: