क़ुरआन के अर्थों का अनुवाद - कन्नड़ अनुवाद - हमज़ा बतूर

पृष्ठ संख्या:close

external-link copy
17 : 38

اِصْبِرْ عَلٰی مَا یَقُوْلُوْنَ وَاذْكُرْ عَبْدَنَا دَاوٗدَ ذَا الْاَیْدِ ۚ— اِنَّهٗۤ اَوَّابٌ ۟

ಅವರು ಹೇಳುತ್ತಿರುವ ಮಾತುಗಳ ಬಗ್ಗೆ ನೀವು ತಾಳ್ಮೆಯಿಂದಿರಿ. ನಮ್ಮ ಬಲಿಷ್ಠ ದಾಸರಾಗಿದ್ದ ದಾವೂದರನ್ನು ಸ್ಮರಿಸಿ. ನಿಶ್ಚಯವಾಗಿಯೂ ಅವರು ಅತಿಹೆಚ್ಚು ಪಶ್ಚಾತ್ತಾಪಪಡುತ್ತಿದ್ದರು. info
التفاسير:

external-link copy
18 : 38

اِنَّا سَخَّرْنَا الْجِبَالَ مَعَهٗ یُسَبِّحْنَ بِالْعَشِیِّ وَالْاِشْرَاقِ ۟ۙ

ನಾವು ಪರ್ವತಗಳನ್ನು ಅವರಿಗೆ ಅಧೀನಗೊಳಿಸಿದ್ದೆವು. ಅವು ಸಂಜೆ ಮತ್ತು ಮುಂಜಾನೆ ಅವರ ಜೊತೆಗೆ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿದ್ದವು. info
التفاسير:

external-link copy
19 : 38

وَالطَّیْرَ مَحْشُوْرَةً ؕ— كُلٌّ لَّهٗۤ اَوَّابٌ ۟

ಹಕ್ಕಿಗಳನ್ನು ಕೂಡ ಒಟ್ಟುಗೂಡಿಸಲಾಗಿತ್ತು. ಎಲ್ಲವೂ ಅವರ ಆಜ್ಞೆಗೆ ವಿಧೇಯವಾಗಿದ್ದವು. info
التفاسير:

external-link copy
20 : 38

وَشَدَدْنَا مُلْكَهٗ وَاٰتَیْنٰهُ الْحِكْمَةَ وَفَصْلَ الْخِطَابِ ۟

ನಾವು ಅವರ ಸಾಮ್ರಾಜ್ಯವನ್ನು ಬಲಪಡಿಸಿದೆವು ಮತ್ತು ಅವರಿಗೆ ವಿವೇಕವನ್ನು ಹಾಗೂ ತೀರ್ಪು ನೀಡುವ ಮಾತುಗಾರಿಕೆಯನ್ನು ನೀಡಿದ್ದೆವು. info
التفاسير:

external-link copy
21 : 38

وَهَلْ اَتٰىكَ نَبَؤُا الْخَصْمِ ۘ— اِذْ تَسَوَّرُوا الْمِحْرَابَ ۟ۙ

ಜಗಳವಾಡುವವರ ಸಮಾಚಾರವು ನಿಮಗೆ ತಲುಪಿದೆಯೇ? ಅವರು ಪ್ರಾರ್ಥನಾ ಪೀಠದ ಗೋಡೆಯನ್ನು ಏರಿ ಬಂದ ಸಂದರ್ಭ. info
التفاسير:

external-link copy
22 : 38

اِذْ دَخَلُوْا عَلٰی دَاوٗدَ فَفَزِعَ مِنْهُمْ قَالُوْا لَا تَخَفْ ۚ— خَصْمٰنِ بَغٰی بَعْضُنَا عَلٰی بَعْضٍ فَاحْكُمْ بَیْنَنَا بِالْحَقِّ وَلَا تُشْطِطْ وَاهْدِنَاۤ اِلٰی سَوَآءِ الصِّرَاطِ ۟

ಅವರು ದಾವೂದರ ಬಳಿಗೆ ತಲುಪಿದರು. ದಾವೂದ್ ಅವರನ್ನು ಕಂಡು ಗಾಬರಿಯಾದರು. ಅವರು ಹೇಳಿದರು: “ಭಯಪಡಬೇಡಿ. ನಾವು ಎದುರಾಳಿಗಳಾಗಿದ್ದೇವೆ. ನಮ್ಮಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನೀವು ನಮ್ಮ ನಡುವೆ ನ್ಯಾಯಬದ್ಧವಾದ ತೀರ್ಪನ್ನು ನೀಡಿರಿ. ಅನ್ಯಾಯವೆಸಗಬೇಡಿ. ನಮಗೆ ನೇರ ಮಾರ್ಗವನ್ನು ತೋರಿಸಿ. info
التفاسير:

external-link copy
23 : 38

اِنَّ هٰذَاۤ اَخِیْ ۫— لَهٗ تِسْعٌ وَّتِسْعُوْنَ نَعْجَةً وَّلِیَ نَعْجَةٌ وَّاحِدَةٌ ۫— فَقَالَ اَكْفِلْنِیْهَا وَعَزَّنِیْ فِی الْخِطَابِ ۟

ಇವನು ನನ್ನ ಸಹೋದರ. ಇವನಿಗೆ ತೊಂಬತ್ತೊಂಬತ್ತು ಹೆಣ್ಣುಕುರಿಗಳಿವೆ. ನನಗಿರುವುದು ಒಂದು ಹೆಣ್ಣುಕುರಿ. ಆದರೆ ಅವನು, “ಅದನ್ನು ಕೂಡ ನನಗೆ ಕೊಟ್ಟು ಬಿಡು” ಎನ್ನುತ್ತಿದ್ದಾನೆ. ಅವನು ಮಾತಿನಲ್ಲಿ ನನ್ನನ್ನು ಸೋಲಿಸಿಬಿಟ್ಟನು.” info
التفاسير:

external-link copy
24 : 38

قَالَ لَقَدْ ظَلَمَكَ بِسُؤَالِ نَعْجَتِكَ اِلٰی نِعَاجِهٖ ؕ— وَاِنَّ كَثِیْرًا مِّنَ الْخُلَطَآءِ لَیَبْغِیْ بَعْضُهُمْ عَلٰی بَعْضٍ اِلَّا الَّذِیْنَ اٰمَنُوْا وَعَمِلُوا الصّٰلِحٰتِ وَقَلِیْلٌ مَّا هُمْ ؕ— وَظَنَّ دَاوٗدُ اَنَّمَا فَتَنّٰهُ فَاسْتَغْفَرَ رَبَّهٗ وَخَرَّ رَاكِعًا وَّاَنَابَ ۟

ಅವರು (ದಾವೂದ್) ಹೇಳಿದರು: “ಅವನ ಹೆಣ್ಣುಕುರಿಗಳ ಜೊತೆಗೆ ನಿನ್ನ ಹೆಣ್ಣುಕುರಿಯನ್ನು ಸೇರಿಸಬೇಕೆಂದು ಬೇಡುವ ಮೂಲಕ ಅವನು ನಿನ್ನೊಡನೆ ಖಂಡಿತ ಅಕ್ರಮವೆಸಗಿದ್ದಾನೆ. ನಿಶ್ಚಯವಾಗಿಯೂ ಪಾಲುದಾರರಲ್ಲಿ ಹೆಚ್ಚಿನವರೂ (ಹೀಗೆಯೇ) ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗುವವರು ಇದಕ್ಕೆ ಹೊರತಾಗಿದ್ದಾರೆ. ಆದರೆ ಅವರು ಬಹಳ ಕಡಿಮೆ ಜನರು ಮಾತ್ರ.” ನಾವು ಅವರನ್ನು ಪರೀಕ್ಷಿಸಿದ್ದೆಂದು ದಾವೂದರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿದರು ಮತ್ತು ಸಾಷ್ಟಾಂಗವೆರಗಿ ಪಶ್ಚಾತ್ತಾಪಪಟ್ಟರು. info
التفاسير:

external-link copy
25 : 38

فَغَفَرْنَا لَهٗ ذٰلِكَ ؕ— وَاِنَّ لَهٗ عِنْدَنَا لَزُلْفٰی وَحُسْنَ مَاٰبٍ ۟

ಆಗ ನಾವು ಅವರನ್ನು ಕ್ಷಮಿಸಿದೆವು. ನಿಶ್ಚಯವಾಗಿಯೂ ಅವರಿಗೆ ನಮ್ಮ ಬಳಿ ಸಾಮೀಪ್ಯವಿದೆ ಮತ್ತು ಅತ್ಯುತ್ತಮವಾದ ಠಿಕಾಣಿಯಿದೆ. info
التفاسير:

external-link copy
26 : 38

یٰدَاوٗدُ اِنَّا جَعَلْنٰكَ خَلِیْفَةً فِی الْاَرْضِ فَاحْكُمْ بَیْنَ النَّاسِ بِالْحَقِّ وَلَا تَتَّبِعِ الْهَوٰی فَیُضِلَّكَ عَنْ سَبِیْلِ اللّٰهِ ؕ— اِنَّ الَّذِیْنَ یَضِلُّوْنَ عَنْ سَبِیْلِ اللّٰهِ لَهُمْ عَذَابٌ شَدِیْدٌۢ بِمَا نَسُوْا یَوْمَ الْحِسَابِ ۟۠

“ಓ ದಾವೂದ್! ನಿಶ್ಚಯವಾಗಿಯೂ ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದ್ದರಿಂದ ನೀವು ಜನರ ಮಧ್ಯೆ ನ್ಯಾಯಯುತವಾಗಿ ತೀರ್ಪು ನೀಡಿರಿ. ನೀವು ಸ್ವೇಚ್ಛೆಯನ್ನು ಹಿಂಬಾಲಿಸಬೇಡಿ. ಅದು ನಿಮ್ಮನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುತ್ತದೆ. ಯಾರು ಅಲ್ಲಾಹನ ಮಾರ್ಗದಿಂದ ತಪ್ಪಿಹೋಗುತ್ತಾರೋ ಅವರು ವಿಚಾರಣಾ ದಿನವನ್ನು ಮರೆತ ಕಾರಣ ಅವರಿಗೆ ನಿಶ್ಚಯವಾಗಿಯೂ ಕಠಿಣವಾದ ಶಿಕ್ಷೆಯಿದೆ. info
التفاسير: