क़ुरआन के अर्थों का अनुवाद - कन्नड़ अनुवाद - हमज़ा बतूर

पृष्ठ संख्या:close

external-link copy
30 : 3

یَوْمَ تَجِدُ كُلُّ نَفْسٍ مَّا عَمِلَتْ مِنْ خَیْرٍ مُّحْضَرًا ۖۚۛ— وَّمَا عَمِلَتْ مِنْ سُوْٓءٍ ۛۚ— تَوَدُّ لَوْ اَنَّ بَیْنَهَا وَبَیْنَهٗۤ اَمَدًاۢ بَعِیْدًا ؕ— وَیُحَذِّرُكُمُ اللّٰهُ نَفْسَهٗ ؕ— وَاللّٰهُ رَءُوْفٌۢ بِالْعِبَادِ ۟۠

ಪ್ರತಿಯೊಬ್ಬನೂ ತಾನು ಮಾಡಿದ ಒಳಿತನ್ನು ಮತ್ತು ತಾನು ಮಾಡಿದ ಕೆಡುಕನ್ನು ತನ್ನ ಮುಂದೆ ಪ್ರದರ್ಶಿಸಿಟ್ಟಿರುವುದನ್ನು ನೋಡುವ ದಿನ. ತನ್ನ ಮತ್ತು ಅದರ (ಕೆಡುಕಿನ) ನಡುವೆ ವಿದೂರ ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವನು ಹಾರೈಸುವನು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನಿಗೆ ದಾಸರ ಮೇಲೆ ಅಪಾರ ಸಹಾನುಭೂತಿಯಿದೆ. info
التفاسير:

external-link copy
31 : 3

قُلْ اِنْ كُنْتُمْ تُحِبُّوْنَ اللّٰهَ فَاتَّبِعُوْنِیْ یُحْبِبْكُمُ اللّٰهُ وَیَغْفِرْ لَكُمْ ذُنُوْبَكُمْ ؕ— وَاللّٰهُ غَفُوْرٌ رَّحِیْمٌ ۟

ಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.” info
التفاسير:

external-link copy
32 : 3

قُلْ اَطِیْعُوا اللّٰهَ وَالرَّسُوْلَ ۚ— فَاِنْ تَوَلَّوْا فَاِنَّ اللّٰهَ لَا یُحِبُّ الْكٰفِرِیْنَ ۟

ಹೇಳಿರಿ: “ನೀವು ಅಲ್ಲಾಹನ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ.” ಅವರೇನಾದರೂ ವಿಮುಖರಾದರೆ—ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಇಷ್ಟಪಡುವುದಿಲ್ಲ. info
التفاسير:

external-link copy
33 : 3

اِنَّ اللّٰهَ اصْطَفٰۤی اٰدَمَ وَنُوْحًا وَّاٰلَ اِبْرٰهِیْمَ وَاٰلَ عِمْرٰنَ عَلَی الْعٰلَمِیْنَ ۟ۙ

ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕಗಳ ಜನರ ಪೈಕಿ ಆದಮ್, ನೂಹ್‍, ಇಬ್ರಾಹೀಮರ ಕುಟುಂಬ ಮತ್ತು ಇಮ್ರಾನರ[1] ಕುಟುಂಬವನ್ನು ಆರಿಸಿದ್ದಾನೆ. info

[1] ಇಮ್ರಾನ್ ಮರ್ಯಮರ ತಂದೆ. ಪ್ರವಾದಿ ಈಸಾರ ಅಜ್ಜ. ಅವರ ಪತ್ನಿಯ ಹೆಸರು ಹನ್ನ.

التفاسير:

external-link copy
34 : 3

ذُرِّیَّةً بَعْضُهَا مِنْ بَعْضٍ ؕ— وَاللّٰهُ سَمِیْعٌ عَلِیْمٌ ۟ۚ

ಅವರು ಒಬ್ಬರು ಇನ್ನೊಬ್ಬರ ವಂಶದಿಂದ ಬಂದವರು. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. info
التفاسير:

external-link copy
35 : 3

اِذْ قَالَتِ امْرَاَتُ عِمْرٰنَ رَبِّ اِنِّیْ نَذَرْتُ لَكَ مَا فِیْ بَطْنِیْ مُحَرَّرًا فَتَقَبَّلْ مِنِّیْ ۚ— اِنَّكَ اَنْتَ السَّمِیْعُ الْعَلِیْمُ ۟

ಇಮ್ರಾನರ ಪತ್ನಿ ಹೇಳಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನ ಗರ್ಭದಲ್ಲಿರುವುದನ್ನು ನಾನು ನಿನ್ನ ಹೆಸರಲ್ಲಿ ಸ್ವತಂತ್ರಗೊಳಿಸುವೆನೆಂದು[1] ಹರಕೆ ಹೊತ್ತಿದ್ದೇನೆ. ನೀನು ಅದನ್ನು ನನ್ನಿಂದ ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿರುವೆ.” info

[1] ಸ್ವತಂತ್ರಗೊಳಿಸುವುದು ಎಂದರೆ ಬೈತುಲ್ ಮುಕದ್ದಿಸ್‌ನ ಸೇವೆ ಮಾಡಲು ಬಿಟ್ಟುಬಿಡುವುದು.

التفاسير:

external-link copy
36 : 3

فَلَمَّا وَضَعَتْهَا قَالَتْ رَبِّ اِنِّیْ وَضَعْتُهَاۤ اُ ؕ— وَاللّٰهُ اَعْلَمُ بِمَا وَضَعَتْ ؕ— وَلَیْسَ الذَّكَرُ كَالْاُ ۚ— وَاِنِّیْ سَمَّیْتُهَا مَرْیَمَ وَاِنِّیْۤ اُعِیْذُهَا بِكَ وَذُرِّیَّتَهَا مِنَ الشَّیْطٰنِ الرَّجِیْمِ ۟

ನಂತರ ಆಕೆ ಮಗುವಿಗೆ ಜನ್ಮ ನೀಡಿದಾಗ ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ!” ಅವಳು ಯಾರಿಗೆ ಜನ್ಮ ನೀಡಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗಂಡು ಹೆಣ್ಣಿನಂತಲ್ಲ! “ನಾನು ಅವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ; ಅವಳನ್ನು ಮತ್ತು ಅವಳ ಸಂತಾನವನ್ನು ಬಹಿಷ್ಕೃತ ಶೈತಾನನಿಂದ ಕಾಪಾಡಲು ನಿನ್ನ ರಕ್ಷಣೆಗೆ ಒಪ್ಪಿಸುತ್ತೇನೆ.” info
التفاسير:

external-link copy
37 : 3

فَتَقَبَّلَهَا رَبُّهَا بِقَبُوْلٍ حَسَنٍ وَّاَنْۢبَتَهَا نَبَاتًا حَسَنًا ۙ— وَّكَفَّلَهَا زَكَرِیَّا ؕ— كُلَّمَا دَخَلَ عَلَیْهَا زَكَرِیَّا الْمِحْرَابَ ۙ— وَجَدَ عِنْدَهَا رِزْقًا ۚ— قَالَ یٰمَرْیَمُ اَنّٰی لَكِ هٰذَا ؕ— قَالَتْ هُوَ مِنْ عِنْدِ اللّٰهِ ؕ— اِنَّ اللّٰهَ یَرْزُقُ مَنْ یَّشَآءُ بِغَیْرِ حِسَابٍ ۟

ಅವಳ ಪರಿಪಾಲಕ (ಅಲ್ಲಾಹು) ಅವಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಬೆಳೆಸಿದನು. ಅವಳ ಪಾಲನೆ-ಪೋಷಣೆ ಮಾಡುವ ಹೊಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಅವಳ ಕೋಣೆಗೆ ತೆರಳಿದಾಗಲೆಲ್ಲ ಅವಳ ಬಳಿ ಏನಾದರೊಂದು ಆಹಾರವನ್ನು ಕಾಣುತ್ತಿದ್ದರು. ಅವರು ಕೇಳಿದರು: “ಓ ಮರ್ಯಮ್! ಇದು ನಿನಗೆಲ್ಲಿಂದ ದೊರೆಯುತ್ತದೆ?” ಅವಳು ಉತ್ತರಿಸಿದಳು: “ಅದು ಅಲ್ಲಾಹನ ಬಳಿಯಿಂದ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುತ್ತಾನೆ.” info
التفاسير: