क़ुरआन के अर्थों का अनुवाद - कन्नड़ अनुवाद - बशीर मैसूरी

ಅಲ್ -ಮುಮ್ತಹನ

external-link copy
1 : 60

یٰۤاَیُّهَا الَّذِیْنَ اٰمَنُوْا لَا تَتَّخِذُوْا عَدُوِّیْ وَعَدُوَّكُمْ اَوْلِیَآءَ تُلْقُوْنَ اِلَیْهِمْ بِالْمَوَدَّةِ وَقَدْ كَفَرُوْا بِمَا جَآءَكُمْ مِّنَ الْحَقِّ ۚ— یُخْرِجُوْنَ الرَّسُوْلَ وَاِیَّاكُمْ اَنْ تُؤْمِنُوْا بِاللّٰهِ رَبِّكُمْ ؕ— اِنْ كُنْتُمْ خَرَجْتُمْ جِهَادًا فِیْ سَبِیْلِیْ وَابْتِغَآءَ مَرْضَاتِیْ تُسِرُّوْنَ اِلَیْهِمْ بِالْمَوَدَّةِ ۖۗ— وَاَنَا اَعْلَمُ بِمَاۤ اَخْفَیْتُمْ وَمَاۤ اَعْلَنْتُمْ ؕ— وَمَنْ یَّفْعَلْهُ مِنْكُمْ فَقَدْ ضَلَّ سَوَآءَ السَّبِیْلِ ۟

ಓ ಸತ್ಯವಿಶ್ವಾಸಿಗಳೇ, ನನ್ನ ಮತ್ತು ನಿಮ್ಮ ಶತ್ರುಗಳನ್ನು ನಿಮ್ಮ ಮಿತ್ರರನ್ನಾಗಿ ಮಾಡಿಕೊಳ್ಳಬೇಡಿರಿ. ನೀವು ಅವರೆಡೆಗೆ ಸ್ನೇಹ ಸಂದೇಶಗಳನ್ನು ಕಳುಹಿಸುತ್ತಿರುವಿರಿ, ವಾಸ್ತವದಲ್ಲಿ ಅವರು ನಿಮ್ಮೆಡೆಗೆ ಬಂದAತಹ ಸತ್ಯವನ್ನು ನಿಷೇಧಿಸುತ್ತಾರೆ. ಅವರು ಸಂದೇಶವಾಹಕರನ್ನೂ ಸ್ವತಃ ನಿಮ್ಮನ್ನೂ ಕೇವಲ ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೀರಿ ಎಂಬ ಕಾರಣಕ್ಕೆ ಗಡಿಪಾರು ಮಾಡುತ್ತಾರೆ. ನೀವು ನನ್ನ ಮಾರ್ಗದಲ್ಲಿ ಹೋರಾಡಲಿಕ್ಕಾಗಿ ಮತ್ತು ನನ್ನ ಸಂತೃಪ್ತಿಯನ್ನು ಅರಸಲಿಕ್ಕಾಗಿ ಹೊರಟಿದ್ದೀರೆಂದಾದರೆ ನೀವು ಅವರೆಡೆಗೆ ಗುಪ್ತವಾಗಿ ಸ್ನೇಹ ಸಂದೇಶವನ್ನು ಏಕೆ ಕಳುಹಿಸುತ್ತಿರುವಿರಿ? ನೀವು ರಹಸ್ಯವಾಗಿಡುವುದನ್ನು, ಬಹಿರಂಗಗೊಳಿಸುವುದನ್ನು ನಾನು ಚೆನ್ನಾಗಿ ಬಲ್ಲೆನು. ನಿಮ್ಮ ಪೈಕಿ ಯಾರು ಈ ಕೃತ್ಯವನ್ನು ಮಾಡುತ್ತಾರೋ ಅವನು ಖಂಡಿತವಾಗಿಯೂ ನೇರ ಮಾರ್ಗದಿಂದ ಭ್ರಷ್ಟನಾಗುವನು. info
التفاسير: