કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

ಅಲ್ -ಅಲಕ್

external-link copy
1 : 96

اِقْرَاْ بِاسْمِ رَبِّكَ الَّذِیْ خَلَقَ ۟ۚ

ಸೃಷ್ಟಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನಿಂದ ಓದಿರಿ. info
التفاسير:

external-link copy
2 : 96

خَلَقَ الْاِنْسَانَ مِنْ عَلَقٍ ۟ۚ

ಅವನು ಮನುಷ್ಯನನ್ನು ರಕ್ತಪಿಂಡದಿಂದ ಸೃಷ್ಟಿಸಿದನು. info
التفاسير:

external-link copy
3 : 96

اِقْرَاْ وَرَبُّكَ الْاَكْرَمُ ۟ۙ

ಓದಿರಿ. ನಿಮ್ಮ ಪರಿಪಾಲಕ (ಅಲ್ಲಾಹು) ಅತ್ಯುದಾರಿಯಾಗಿದ್ದಾನೆ. info
التفاسير:

external-link copy
4 : 96

الَّذِیْ عَلَّمَ بِالْقَلَمِ ۟ۙ

ಅವನು ಯಾರೆಂದರೆ ಲೇಖನಿಯ ಮೂಲಕ ಕಲಿಸಿದವನು. info
التفاسير:

external-link copy
5 : 96

عَلَّمَ الْاِنْسَانَ مَا لَمْ یَعْلَمْ ۟ؕ

ಮನುಷ್ಯನಿಗೆ ತಿಳಿಯದೇ ಇರುವುದನ್ನು ಅವನು ಕಲಿಸಿದನು.[1] info

[1] ಇವು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಪ್ರಥಮವಾಗಿ ಅವತೀರ್ಣವಾದ ಐದು ವಚನಗಳು. ಅವರು ಹಿರಾ ಗುಹೆಯಲ್ಲಿದ್ದಾಗ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಈ ವಚನಗಳನ್ನು ಅವರಿಗೆ ಓದಿಕೊಟ್ಟರು.

التفاسير:

external-link copy
6 : 96

كَلَّاۤ اِنَّ الْاِنْسَانَ لَیَطْغٰۤی ۟ۙ

ನಿಸ್ಸಂದೇಹವಾಗಿಯೂ ಮನುಷ್ಯನು ಎಲ್ಲೆ ಮೀರಿ ನಡೆಯುತ್ತಾನೆ. info
التفاسير:

external-link copy
7 : 96

اَنْ رَّاٰهُ اسْتَغْنٰی ۟ؕ

ಅದೇಕೆಂದರೆ, ಅವನು ಅವನನ್ನೇ ಸ್ವಯಂ-ಪರ್ಯಾಪ್ತನಾಗಿ ಕಾಣುತ್ತಾನೆ. info
التفاسير:

external-link copy
8 : 96

اِنَّ اِلٰی رَبِّكَ الرُّجْعٰی ۟ؕ

ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗಬೇಕಾಗಿದೆ. info
التفاسير:

external-link copy
9 : 96

اَرَءَیْتَ الَّذِیْ یَنْهٰی ۟ۙ

ತಡೆಯುವವನನ್ನು ನೀವು ನೋಡಿದ್ದೀರಾ?[1] info

[1] ತಡೆಯುವವನು ಎಂದರೆ ಪ್ರವಾದಿಯ ಬದ್ಧ ವೈರಿಯಾಗಿದ್ದ ಸತ್ಯನಿಷೇಧಿಗಳ ಮುಖಂಡ ಅಬೂಜಹಲ್. ದಾಸನು ಎಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುತ್ತಿದ್ದಾಗ ಅಬೂಜಹಲ್ ತಡೆಯಲು ಪ್ರಯತ್ನಿಸಿದ್ದನು.

التفاسير:

external-link copy
10 : 96

عَبْدًا اِذَا صَلّٰی ۟ؕ

ದಾಸನನ್ನು—ಅವನು ನಮಾಝ್ ಮಾಡುವಾಗ. info
التفاسير:

external-link copy
11 : 96

اَرَءَیْتَ اِنْ كَانَ عَلَی الْهُدٰۤی ۟ۙ

ನೀವು ನೋಡಿದ್ದೀರಾ—ಒಂದು ವೇಳೆ ಅವನು (ದಾಸನು) ಸನ್ಮಾರ್ಗದಲ್ಲಿದ್ದರೆ. info
التفاسير:

external-link copy
12 : 96

اَوْ اَمَرَ بِالتَّقْوٰی ۟ؕ

ಅಥವಾ ಅವನು ದೇವಭಯವಿಟ್ಟುಕೊಳ್ಳಲು ಆದೇಶಿಸಿದ್ದರೆ. info
التفاسير:

external-link copy
13 : 96

اَرَءَیْتَ اِنْ كَذَّبَ وَتَوَلّٰی ۟ؕ

ನೀವು ನೋಡಿದ್ದೀರಾ—ಒಂದು ವೇಳೆ ಅವನು (ತಡೆಯುವವನು) ನಿಷೇಧಿಸಿದ್ದರೆ ಮತ್ತು ವಿಮುಖನಾಗಿದ್ದರೆ. info
التفاسير:

external-link copy
14 : 96

اَلَمْ یَعْلَمْ بِاَنَّ اللّٰهَ یَرٰی ۟ؕ

ಅಲ್ಲಾಹು ಅವನನ್ನು ನೋಡುತ್ತಿದ್ದಾನೆಂದು ಅವನಿಗೆ ತಿಳಿದಿಲ್ಲವೇ? info
التفاسير:

external-link copy
15 : 96

كَلَّا لَىِٕنْ لَّمْ یَنْتَهِ ۙ۬— لَنَسْفَعًا بِالنَّاصِیَةِ ۟ۙ

ಅವನು ದೂರ ಸರಿಯದಿದ್ದರೆ ನಾವು ಖಂಡಿತವಾಗಿಯೂ ಅವನ ಮುಂದಲೆಯನ್ನು ಹಿಡಿದು ಎಳೆಯುವೆವು. info
التفاسير:

external-link copy
16 : 96

نَاصِیَةٍ كَاذِبَةٍ خَاطِئَةٍ ۟ۚ

ಸುಳ್ಳು ಹೇಳುವ, ಪಾಪವೆಸಗುವ ಮುಂದಲೆ. info
التفاسير:

external-link copy
17 : 96

فَلْیَدْعُ نَادِیَهٗ ۟ۙ

ಅವನು ತನ್ನ ಸಭಾ ಸದಸ್ಯರನ್ನು ಕರೆಯಲಿ. info
التفاسير:

external-link copy
18 : 96

سَنَدْعُ الزَّبَانِیَةَ ۟ۙ

ನಾವು (ನರಕದಲ್ಲಿ) ಶಿಕ್ಷೆ ನೀಡುವ ದೇವದೂತರನ್ನು ಕರೆಯುವೆವು. info
التفاسير:

external-link copy
19 : 96

كَلَّا ؕ— لَا تُطِعْهُ وَاسْجُدْ وَاقْتَرِبْ ۟

ಎಚ್ಚರಾ! ಅವನ ಮಾತನ್ನು ಎಂದಿಗೂ ಕೇಳಬೇಡಿ. (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ ಮತ್ತು ಅವನಿಗೆ ಸಮೀಪವಾಗಿರಿ. info
التفاسير: