કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

external-link copy
25 : 9

لَقَدْ نَصَرَكُمُ اللّٰهُ فِیْ مَوَاطِنَ كَثِیْرَةٍ ۙ— وَّیَوْمَ حُنَیْنٍ ۙ— اِذْ اَعْجَبَتْكُمْ كَثْرَتُكُمْ فَلَمْ تُغْنِ عَنْكُمْ شَیْـًٔا وَّضَاقَتْ عَلَیْكُمُ الْاَرْضُ بِمَا رَحُبَتْ ثُمَّ وَلَّیْتُمْ مُّدْبِرِیْنَ ۟ۚ

ನಿಶ್ಚಯವಾಗಿಯೂ ಅನೇಕ ಸ್ಥಳಗಳಲ್ಲಿ ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಹುನೈನ್ ಯುದ್ಧ ನಡೆದ ದಿನದಲ್ಲಿ ಕೂಡ (ಅವನು ನಿಮಗೆ ಸಹಾಯ ಮಾಡಿದ್ದಾನೆ). ಅಂದು ನಿಮ್ಮ ಸಂಖ್ಯಾಬಲವನ್ನು ನೋಡಿ ನೀವು ಪುಳಕಿತರಾದ ಸಂದರ್ಭ. ಆದರೆ ಅದು ನಿಮಗೆ ಯಾವುದೇ ಉಪಕಾರ ಮಾಡಲಿಲ್ಲ. ಭೂಮಿಯು ವಿಶಾಲವಾಗಿದ್ದೂ ಸಹ ನಿಮಗೆ ಸಂಕುಚಿತವಾದಂತೆ ತೋರಿತು. ನಂತರ ನೀವು ದಿಕ್ಕೆಟ್ಟು ಪಲಾಯನ ಮಾಡಿದಿರಿ.[1] info

[1] ಹಿಜ್ರ 8ನೇ ವರ್ಷದಲ್ಲಿ ಹುನೈನ್ ಯುದ್ಧ ನಡೆಯಿತು. ಮುಸ್ಲಿಮರು ಮಕ್ಕಾ ವಶಪಡಿಸಿದ್ದನ್ನು ಕಂಡು ರೋಷದಿಂದ ಕೆಲವು ಸತ್ಯನಿಷೇಧಿ ಗೋತ್ರಗಳು ಮುಸ್ಲಿಮರ ವಿರುದ್ಧ ಯುದ್ಧ ಸಾರಿದರು. ಈ ಯುದ್ಧದಲ್ಲಿ ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿದ್ದೂ ಸಹ ಆರಂಭದಲ್ಲಿ ಸೋಲನ್ನು ಕಂಡರು. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಆಪ್ತ ಸಂಗಡಿಗರ ಹೊರತು ಉಳಿದವರು ಯುದ್ಧರಂಗದಿಂದ ಪಲಾಯನ ಮಾಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿ ಬಂದು ವೀರಾವೇಶದಿಂದ ಹೋರಾಡಿ ಯುದ್ಧವನ್ನು ಗೆದ್ದರು.

التفاسير: