કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

ಅಲ್ -ಫತ್ ಹ್

external-link copy
1 : 48

اِنَّا فَتَحْنَا لَكَ فَتْحًا مُّبِیْنًا ۟ۙ

(ಪ್ರವಾದಿಯವರೇ) ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟ ವಿಜಯವನ್ನು[1] ದಯಪಾಲಿಸಿದ್ದೇವೆ. info

[1] ಸ್ಪಷ್ಟ ವಿಜಯ ಎಂದರೆ ಹುದೈಬಿಯಾ ಒಪ್ಪಂದ. ಈ ಒಪ್ಪಂದದಿಂದಾಗಿ ಮುಸ್ಲಿಮರಿಗೆ ನಾಲ್ಕೂ ಕಡೆ ನಿರ್ಭಯವಾಗಿ ಓಡಾಡಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಸಾಧ್ಯವಾಯಿತು. ಇದರಿಂದ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾದರು. ಇದು ನಂತರ ಮಕ್ಕಾ ವಿಜಯಕ್ಕೆ ನಾಂದಿಯಾಯಿತು.

التفاسير:

external-link copy
2 : 48

لِّیَغْفِرَ لَكَ اللّٰهُ مَا تَقَدَّمَ مِنْ ذَنْۢبِكَ وَمَا تَاَخَّرَ وَیُتِمَّ نِعْمَتَهٗ عَلَیْكَ وَیَهْدِیَكَ صِرَاطًا مُّسْتَقِیْمًا ۟ۙ

ಹಿಂದೆ ಸಂಭವಿಸಿರುವ ನಿಮ್ಮ ತಪ್ಪುಗಳನ್ನು ಮತ್ತು ಮುಂದೆ ಸಂಭವಿಸಲಿರುವುದನ್ನು ಅಲ್ಲಾಹು ನಿಮಗೆ ಕ್ಷಮಿಸುವುದಕ್ಕಾಗಿ, ಅವನ ಅನುಗ್ರಹವನ್ನು ನಿಮಗೆ ಪೂರ್ಣಗೊಳಿಸುವುದಕ್ಕಾಗಿ ಮತ್ತು ನಿಮ್ಮನ್ನು ನೇರಮಾರ್ಗದಲ್ಲಿ ಮುನ್ನಡೆಸುವುದಕ್ಕಾಗಿ. info
التفاسير:

external-link copy
3 : 48

وَّیَنْصُرَكَ اللّٰهُ نَصْرًا عَزِیْزًا ۟

ಅಲ್ಲಾಹು ನಿಮಗೆ ಪ್ರಬಲವಾದ ಸಹಾಯವನ್ನು ನೀಡುವುದಕ್ಕಾಗಿ. info
التفاسير:

external-link copy
4 : 48

هُوَ الَّذِیْۤ اَنْزَلَ السَّكِیْنَةَ فِیْ قُلُوْبِ الْمُؤْمِنِیْنَ لِیَزْدَادُوْۤا اِیْمَانًا مَّعَ اِیْمَانِهِمْ ؕ— وَلِلّٰهِ جُنُوْدُ السَّمٰوٰتِ وَالْاَرْضِ ؕ— وَكَانَ اللّٰهُ عَلِیْمًا حَكِیْمًا ۟ۙ

ಅವನೇ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು. ಅವರಲ್ಲಿರುವ ಸತ್ಯವಿಶ್ವಾಸಕ್ಕೆ ಇನ್ನಷ್ಟು ಸತ್ಯವಿಶ್ವಾಸವು ಹೆಚ್ಚಾಗುವುದಕ್ಕಾಗಿ. ಭೂಮ್ಯಾಕಾಶಗಳ ಸೈನ್ಯಗಳು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
5 : 48

لِّیُدْخِلَ الْمُؤْمِنِیْنَ وَالْمُؤْمِنٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا وَیُكَفِّرَ عَنْهُمْ سَیِّاٰتِهِمْ ؕ— وَكَانَ ذٰلِكَ عِنْدَ اللّٰهِ فَوْزًا عَظِیْمًا ۟ۙ

ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಲ್ಲಿ ಶಾಶ್ವತವಾಸಿಗಳಾಗಿ ಪ್ರವೇಶಗೊಳಿಸುವುದಕ್ಕಾಗಿ ಮತ್ತು ಅವರ ಕೆಡುಕುಗಳನ್ನು ಅಳಿಸುವುದಕ್ಕಾಗಿ. ಅದು ಅಲ್ಲಾಹನ ದೃಷ್ಟಿಯಲ್ಲಿ ಅತಿದೊಡ್ಡ ವಿಜಯವಾಗಿದೆ. info
التفاسير:

external-link copy
6 : 48

وَّیُعَذِّبَ الْمُنٰفِقِیْنَ وَالْمُنٰفِقٰتِ وَالْمُشْرِكِیْنَ وَالْمُشْرِكٰتِ الظَّآنِّیْنَ بِاللّٰهِ ظَنَّ السَّوْءِ ؕ— عَلَیْهِمْ دَآىِٕرَةُ السَّوْءِ ۚ— وَغَضِبَ اللّٰهُ عَلَیْهِمْ وَلَعَنَهُمْ وَاَعَدَّ لَهُمْ جَهَنَّمَ ؕ— وَسَآءَتْ مَصِیْرًا ۟

ಅಲ್ಲಾಹನ ವಿಷಯದಲ್ಲಿ ಕೆಟ್ಟ ಭಾವನೆಗಳನ್ನು ಇಟ್ಟುಕೊಂಡಿರುವ ಕಪಟವಿಶ್ವಾಸಿ ಪುರುಷರು ಮತ್ತು ಕಪಟವಿಶ್ವಾಸಿ ಸ್ತ್ರೀಯರನ್ನು, ಬಹುದೇವವಿಶ್ವಾಸಿ ಪುರುಷರು ಮತ್ತು ಬಹುದೇವವಿಶ್ವಾಸಿ ಸ್ತ್ರೀಯರನ್ನು ಶಿಕ್ಷಿಸುವುದಕ್ಕಾಗಿ. ಅವರ ಮೇಲೆ ಕೆಡುಕಿನ ಆವರಣವಿದೆ. ಅಲ್ಲಾಹು ಅವರ ಮೇಲೆ ಕೋಪಿಸಿದ್ದಾನೆ, ಅವರನ್ನು ಶಪಿಸಿದ್ದಾನೆ ಮತ್ತು ಅವರಿಗೆ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದಾನೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ. info
التفاسير:

external-link copy
7 : 48

وَلِلّٰهِ جُنُوْدُ السَّمٰوٰتِ وَالْاَرْضِ ؕ— وَكَانَ اللّٰهُ عَزِیْزًا حَكِیْمًا ۟

ಭೂಮ್ಯಾಕಾಶಗಳ ಸೈನ್ಯಗಳು ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
8 : 48

اِنَّاۤ اَرْسَلْنٰكَ شَاهِدًا وَّمُبَشِّرًا وَّنَذِیْرًا ۟ۙ

ನಿಶ್ಚಯವಾಗಿಯೂ ನಾವು ನಿಮ್ಮನ್ನು ಸಾಕ್ಷಿಯಾಗಿ, ಸುವಾರ್ತೆ ನೀಡುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿ ಕಳುಹಿಸಿದ್ದೇವೆ. info
التفاسير:

external-link copy
9 : 48

لِّتُؤْمِنُوْا بِاللّٰهِ وَرَسُوْلِهٖ وَتُعَزِّرُوْهُ وَتُوَقِّرُوْهُ ؕ— وَتُسَبِّحُوْهُ بُكْرَةً وَّاَصِیْلًا ۟

ನೀವು (ಜನರು) ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಕ್ಕಾಗಿ, ಅವರಿಗೆ (ಪ್ರವಾದಿಗೆ) ಸಹಾಯ ಮಾಡುವುದಕ್ಕಾಗಿ, ಅವರನ್ನು ಗೌರವಿಸುವುದಕ್ಕಾಗಿ ಮತ್ತು ಮುಂಜಾನೆ ಹಾಗೂ ಸಂಜೆ ಅವನ (ಅಲ್ಲಾಹನ) ಮಹತ್ವವನ್ನು ಕೊಂಡಾಡುವುದಕ್ಕಾಗಿ. info
التفاسير: