કુરઆન મજીદના શબ્દોનું ભાષાંતર - કન્નડ ભાષામાં અનુવાદ - હમઝહ બતુર

પેજ નંબર:close

external-link copy
57 : 39

اَوْ تَقُوْلَ لَوْ اَنَّ اللّٰهَ هَدٰىنِیْ لَكُنْتُ مِنَ الْمُتَّقِیْنَ ۟ۙ

ಅಥವಾ “ಅಲ್ಲಾಹು ನನ್ನನ್ನು ಸನ್ಮಾರ್ಗದಲ್ಲಿ ಸೇರಿಸಿದ್ದರೆ ನಾನು ದೇವಭಯವುಳ್ಳವರಲ್ಲಿ ಸೇರುತ್ತಿದ್ದೆ” ಎಂದು ಹೇಳದಿರುವುದಕ್ಕಾಗಿ. info
التفاسير:

external-link copy
58 : 39

اَوْ تَقُوْلَ حِیْنَ تَرَی الْعَذَابَ لَوْ اَنَّ لِیْ كَرَّةً فَاَكُوْنَ مِنَ الْمُحْسِنِیْنَ ۟

ಅಥವಾ ಶಿಕ್ಷೆಯನ್ನು ನೇರವಾಗಿ ನೋಡುವಾಗ, “ನನಗೆ (ಇಹಲೋಕಕ್ಕೆ) ಮರಳುವ ಅವಕಾಶವಿರುತ್ತಿದ್ದರೆ ನಾನು ನೀತಿವಂತರಲ್ಲಿ ಸೇರುತ್ತಿದ್ದೆ” ಎಂದು ಹೇಳದಿರುವುದಕ್ಕಾಗಿ. info
التفاسير:

external-link copy
59 : 39

بَلٰی قَدْ جَآءَتْكَ اٰیٰتِیْ فَكَذَّبْتَ بِهَا وَاسْتَكْبَرْتَ وَكُنْتَ مِنَ الْكٰفِرِیْنَ ۟

ಹೌದು! ನಿಶ್ಚಯವಾಗಿಯೂ ನನ್ನ ವಚನಗಳು ನಿನ್ನ ಬಳಿಗೆ ಬಂದಿವೆ. ಆದರೆ ನೀನು ಅವುಗಳನ್ನು ನಿಷೇಧಿಸಿ ಅಹಂಕಾರ ತೋರಿದೆ. ನೀನು ಸತ್ಯನಿಷೇಧಿಗಳಲ್ಲಿ ಸೇರಿದವನಾಗಿದ್ದೆ. info
التفاسير:

external-link copy
60 : 39

وَیَوْمَ الْقِیٰمَةِ تَرَی الَّذِیْنَ كَذَبُوْا عَلَی اللّٰهِ وُجُوْهُهُمْ مُّسْوَدَّةٌ ؕ— اَلَیْسَ فِیْ جَهَنَّمَ مَثْوًی لِّلْمُتَكَبِّرِیْنَ ۟

ಅಲ್ಲಾಹನ ಮೇಲೆ ಸುಳ್ಳು ಹೇಳಿದವರ ಮುಖಗಳು ಪುನರುತ್ಥಾನ ದಿನದಂದು ಕಪ್ಪಾಗಿರುವುದನ್ನು ನೀವು ನೋಡುವಿರಿ. ನರಕದಲ್ಲಿ ಅಹಂಕಾರಿಗಳಿಗೆ ಸ್ಥಳವಿಲ್ಲವೇ? info
التفاسير:

external-link copy
61 : 39

وَیُنَجِّی اللّٰهُ الَّذِیْنَ اتَّقَوْا بِمَفَازَتِهِمْ ؗ— لَا یَمَسُّهُمُ السُّوْٓءُ وَلَا هُمْ یَحْزَنُوْنَ ۟

ದೇವಭಯವುಳ್ಳವರನ್ನು ಅಲ್ಲಾಹು ಅವರ ಯಶಸ್ಸಿನೊಂದಿಗೆ ಪಾರು ಮಾಡುವನು. ಯಾವುದೇ ರೀತಿಯ ವ್ಯಥೆಯು ಅವರನ್ನು ಸ್ಪರ್ಶಿಸುವುದಿಲ್ಲ. ಅವರು ದುಃಖಿಸುವುದೂ ಇಲ್ಲ. info
التفاسير:

external-link copy
62 : 39

اَللّٰهُ خَالِقُ كُلِّ شَیْءٍ ؗ— وَّهُوَ عَلٰی كُلِّ شَیْءٍ وَّكِیْلٌ ۟

ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಅವನು ಎಲ್ಲ ವಸ್ತುಗಳ ಕಾರ್ಯನಿರ್ವಾಹಕನಾಗಿದ್ದಾನೆ. info
التفاسير:

external-link copy
63 : 39

لَهٗ مَقَالِیْدُ السَّمٰوٰتِ وَالْاَرْضِ ؕ— وَالَّذِیْنَ كَفَرُوْا بِاٰیٰتِ اللّٰهِ اُولٰٓىِٕكَ هُمُ الْخٰسِرُوْنَ ۟۠

ಭೂಮ್ಯಾಕಾಶಗಳ ಕೀಲಿಗಳು ಅವನಿಗೆ ಸೇರಿದ್ದು. ಅಲ್ಲಾಹನ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ನಷ್ಟ ಹೊಂದಿದವರು. info
التفاسير:

external-link copy
64 : 39

قُلْ اَفَغَیْرَ اللّٰهِ تَاْمُرُوْٓنِّیْۤ اَعْبُدُ اَیُّهَا الْجٰهِلُوْنَ ۟

ಹೇಳಿರಿ: “ಓ ಅಜ್ಞಾನಿಗಳೇ! ನಾನು ಅಲ್ಲಾಹನನ್ನು ಬಿಟ್ಟು ಬೇರೆಯವರನ್ನು ಆರಾಧಿಸಬೇಕೆಂದು ನೀವು ನನಗೆ ಆದೇಶಿಸುತ್ತಿದ್ದೀರಾ?” info
التفاسير:

external-link copy
65 : 39

وَلَقَدْ اُوْحِیَ اِلَیْكَ وَاِلَی الَّذِیْنَ مِنْ قَبْلِكَ ۚ— لَىِٕنْ اَشْرَكْتَ لَیَحْبَطَنَّ عَمَلُكَ وَلَتَكُوْنَنَّ مِنَ الْخٰسِرِیْنَ ۟

ನೀವೇನಾದರೂ ಸಹಭಾಗಿತ್ವ (ಶಿರ್ಕ್) ಮಾಡಿದರೆ ನಿಶ್ಚಯವಾಗಿಯೂ ನಿಮ್ಮ ಕರ್ಮಗಳು ನಿಷ್ಫಲವಾಗುತ್ತವೆ ಮತ್ತು ನೀವು ನಷ್ಟ ಹೊಂದಿದವರಲ್ಲಿ ಸೇರುವಿರಿ ಎಂದು ನಿಮಗೂ ನಿಮಗಿಂತ ಮೊದಲಿನವರಿಗೂ ದೇವವಾಣಿ ನೀಡಲಾಗಿದೆ. info
التفاسير:

external-link copy
66 : 39

بَلِ اللّٰهَ فَاعْبُدْ وَكُنْ مِّنَ الشّٰكِرِیْنَ ۟

ಬದಲಿಗೆ, ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಕೃತಜ್ಞರಾಗಿರುವವರೊಂದಿಗೆ ಸೇರಿಕೊಳ್ಳಿರಿ. info
التفاسير:

external-link copy
67 : 39

وَمَا قَدَرُوا اللّٰهَ حَقَّ قَدْرِهٖ ۖۗ— وَالْاَرْضُ جَمِیْعًا قَبْضَتُهٗ یَوْمَ الْقِیٰمَةِ وَالسَّمٰوٰتُ مَطْوِیّٰتٌ بِیَمِیْنِهٖ ؕ— سُبْحٰنَهٗ وَتَعٰلٰی عَمَّا یُشْرِكُوْنَ ۟

ಅವರು ಅಲ್ಲಾಹನಿಗೆ ಮಹತ್ವ ನೀಡಬೇಕಾದ ರೀತಿಯಲ್ಲಿ ಮಹತ್ವ ನೀಡಲಿಲ್ಲ. ಪುನರುತ್ಥಾನ ದಿನದಂದು ಭೂಮಿಯು ಸಂಪೂರ್ಣವಾಗಿ ಅವನ ಮುಷ್ಠಿಯಲ್ಲಿರುತ್ತದೆ ಮತ್ತು ಆಕಾಶಗಳೆಲ್ಲವೂ ಅವನ ಬಲಗೈಯಲ್ಲಿ ಸುರುಳಿಯಾಗಿರುತ್ತವೆ. ಅವರು ಸಹಾಭಾಗಿತ್ವ (ಶಿರ್ಕ್) ಮಾಡುವ ಎಲ್ಲಾ ವಸ್ತುಗಳಿಂದಲೂ ಅವನು ಎಷ್ಟೋ ಪರಿಶುದ್ಧನು ಮತ್ತು ಪರಮೋನ್ನತನಾಗಿದ್ದಾನೆ. info
التفاسير: