[1] ಈ ವಚನವು ಅವತೀರ್ಣವಾಗುವಾಗ ಶರಾಬನ್ನು ನಿಷೇಧಿಸಲಾಗಿರಲಿಲ್ಲ. ಆದರೂ ಈ ವಚನದಲ್ಲಿ ಶರಾಬು ಎಂದು ಹೇಳಿದ ಬಳಿಕ ಉತ್ತಮ ಆಹಾರ ಎಂಬ ಉಲ್ಲೇಖವಿದೆ. ಶರಾಬು ಉತ್ತಮ ಆಹಾರವಲ್ಲ ಎಂದು ಇದರಿಂದ ತಿಳಿಯಬಹುದು.
[1] ನಿಮ್ಮ ಅಧೀನದಲ್ಲಿರುವ ಗುಲಾಮರಿಗಿಂತಲೂ ಹೆಚ್ಚು ಆಸ್ತಿಪಾಸ್ತಿ ನಿಮ್ಮಲ್ಲಿದೆ. ಆದರೂ ನೀವು ನಿಮ್ಮಲ್ಲಿರುವ ಆಸ್ತಿಯನ್ನು ಅವರಿಗೂ ಹಂಚಿ ನೀವಿಬ್ಬರೂ ಆಸ್ತಿಯಲ್ಲಿ ಸಮಾನರಾಗುವಂತೆ ಮಾಡುವುದಿಲ್ಲ. ಆದರೆ ನೀವು ಅಲ್ಲಾಹನ ದಾಸರನ್ನು ಅವನಿಗೆ ಸಹಭಾಗಿಯಾಗಿ ಮಾಡಿ ಅವರು ಅಲ್ಲಾಹನಿಗೆ ಸಮಾನರಾಗಿದ್ದಾರೆ ಮತ್ತು ಅಲ್ಲಾಹು ಅವರಿಗೆ ಅವನ ಅಧಿಕಾರವನ್ನು ಹಂಚಿದ್ದಾನೆಂದು ಹೇಳುತ್ತೀರಿ.