[1] ಮರಣದ ಸಮಯದಲ್ಲಿ, ದೇವದೂತರು ನರಕಾಗ್ನಿಯನ್ನು ತೋರಿಸುವಾಗ, ಅವರನ್ನು ನರಕಾಗ್ನಿಗೆ ಎಸೆಯುವಾಗ, ಪಾಪಿಗಳಾದ ಸತ್ಯವಿಶ್ವಾಸಿಗಳನ್ನು ನರಕ ಶಿಕ್ಷೆಯಿಂದ ಬಿಡುಗಡೆಗೊಳಿಸುವಾಗ, ಮುಸಲ್ಮಾನರು ವಿಚಾರಣೆ ನಡೆದು ಸ್ವರ್ಗಕ್ಕೆ ಹೋಗುವಾಗ ಮುಂತಾದ ಸಂದರ್ಭಗಳಲ್ಲಿ ನಾವು ಮುಸಲ್ಮಾನರಾಗಿದ್ದರೆ ಎಂದು ಅವರು ಹಾರೈಸುವರು. ಆದರೆ ಈ ಹಾರೈಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿರುವುದಿಲ್ಲ.
[1] ಯಾವುದಾದರೂ ಶಿಕ್ಷೆಯನ್ನು ಕಳುಹಿಸುವುದಕ್ಕಾಗಿಯೇ ಹೊರತು ನಾವು ದೇವದೂತರುಗಳನ್ನು ಇಳಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರೆಲ್ಲರೂ ನಾಶವಾಗುತ್ತಾರೆ. ಅವರಿಗೆ ಪಶ್ಚಾತ್ತಾಪಪಡಲು ಯಾವುದೇ ಕಾಲಾವಕಾಶ ನೀಡಲಾಗುವುದಿಲ್ಲ.
[1] ದೇವದೂತರು ಬರಬೇಕು ಎಂದು ಸತ್ಯನಿಷೇಧಿಗಳು ಆಗ್ರಹಿಸುವುದು ಕೇವಲ ಸತ್ಯವಿಶ್ವಾಸಿಗಳಾಗುವುದರಿಂದ ನುಣುಚಿಕೊಳ್ಳಲು ಮಾತ್ರ. ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಟ್ಟು ಅವರು ಅದಕ್ಕೆ ಏರಿ ಹೋಗಿ ಅಲ್ಲಿನ ಸ್ಥಿತಿಗಳನ್ನು ಕಣ್ಣಾರೆ ನೋಡಿದರೂ ಅವರು ಸಂದೇಶವಾಹಕರಲ್ಲಿ ವಿಶ್ವಾಸವಿಡುವುದಿಲ್ಲ. ನಮ್ಮನ್ನು ಮಂತ್ರಮುಗ್ಧಗೊಳಿಸಲಾಗಿದೆ ಅಥವಾ ನಮಗೆ ಮಾಟ ಮಾಡಲಾಗಿದೆ ಎಂದೇ ಅವರು ಹೇಳುವರು.