કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

ಅಲ್ -ಮುದ್ದಸ್ಸಿರ್

external-link copy
1 : 74

یٰۤاَیُّهَا الْمُدَّثِّرُ ۟ۙ

ಓ ಕಂಬಳಿ ಹೊದ್ದುಕೊಂಡವರೇ, info
التفاسير:

external-link copy
2 : 74

قُمْ فَاَنْذِرْ ۟ۙ

ಎದ್ದೇಳಿ ಮತ್ತು (ಜನರಿಗೆ) ಎಚ್ಚರಿಕೆ ನೀಡಿರಿ. info
التفاسير:

external-link copy
3 : 74

وَرَبَّكَ فَكَبِّرْ ۟ۙ

ತಮ್ಮ ಪ್ರಭುವಿನ ಹಿರಿಮೆಯನ್ನು ಕೊಂಡಾಡಿರಿ. info
التفاسير:

external-link copy
4 : 74

وَثِیَابَكَ فَطَهِّرْ ۟ۙ

ನಿಮ್ಮ ಉಡುಪುಗಳನ್ನು ಶುಚಿಯಾಗಿಡಿರಿ. info
التفاسير:

external-link copy
5 : 74

وَالرُّجْزَ فَاهْجُرْ ۟ۙ

ಮಾಲಿನ್ಯದಿಂದ ದೂರವಿರಿ. info
التفاسير:

external-link copy
6 : 74

وَلَا تَمْنُنْ تَسْتَكْثِرُ ۟ۙ

ಹೆಚ್ಚು ಪಡೆಯುವ ಉದ್ದೇಶದಿಂದ ಉಪಕಾರ ಮಾಡದಿರಿ. info
التفاسير:

external-link copy
7 : 74

وَلِرَبِّكَ فَاصْبِرْ ۟ؕ

ನಿಮ್ಮ ಪ್ರಭುವಿಗಾಗಿ ಸಹನೆವಹಿಸಿರಿ. info
التفاسير:

external-link copy
8 : 74

فَاِذَا نُقِرَ فِی النَّاقُوْرِ ۟ۙ

ಕಹಳೆಯನ್ನು (ಮತ್ತೊಮ್ಮೆ) ಮೊಳಗಿಸಿದಾಗ. info
التفاسير:

external-link copy
9 : 74

فَذٰلِكَ یَوْمَىِٕذٍ یَّوْمٌ عَسِیْرٌ ۟ۙ

ಆ ಪ್ರಳಯ ದಿನವು ಅತ್ಯಂತ ಕಠಿಣ ದಿನವಾಗಿರುವುದು info
التفاسير:

external-link copy
10 : 74

عَلَی الْكٰفِرِیْنَ غَیْرُ یَسِیْرٍ ۟

ಸತ್ಯನಿಷೇಧಿಗಳಿಗೆ ಅದು ಸುಲಭವಾಗಿರಲಾರದು. info
التفاسير:

external-link copy
11 : 74

ذَرْنِیْ وَمَنْ خَلَقْتُ وَحِیْدًا ۟ۙ

ನನ್ನನ್ನು ಮತ್ತು ನಾನು, ಒಬ್ಬಂಟಿಗನನ್ನಾಗಿ ಸೃಷ್ಟಿಸಿದವನನ್ನು (ಪ್ರತಿಕಾರ ಪಡೆಯಲು) ಬಿಟ್ಟುಬಿಡಿರಿ. info
التفاسير:

external-link copy
12 : 74

وَّجَعَلْتُ لَهٗ مَالًا مَّمْدُوْدًا ۟ۙ

ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು. info
التفاسير:

external-link copy
13 : 74

وَّبَنِیْنَ شُهُوْدًا ۟ۙ

ಮತ್ತು ಸದಾ ಅವನ ಜೊತೆಗೆ ಸನ್ನದ್ಧರಾದ ಪುತ್ರರನ್ನು ಸಹ. info
التفاسير:

external-link copy
14 : 74

وَّمَهَّدْتُّ لَهٗ تَمْهِیْدًا ۟ۙ

ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು. info
التفاسير:

external-link copy
15 : 74

ثُمَّ یَطْمَعُ اَنْ اَزِیْدَ ۟ۙ

ಇಷ್ಟಿದ್ದೂ ನಾನು ಇನ್ನಷ್ಟು ನೀಡಬೇಕೆಂದು ಅವನು ಹಂಬಲಿಸುತ್ತಿರುವನು. info
التفاسير:

external-link copy
16 : 74

كَلَّا ؕ— اِنَّهٗ كَانَ لِاٰیٰتِنَا عَنِیْدًا ۟ؕ

ಖಂಡಿತಇಲ್ಲ ಅವನು ನಮ್ಮ ಸೂಕ್ತಿಗಳ ವಿರೋಧಿಯಾಗಿದ್ದಾನೆ. info
التفاسير:

external-link copy
17 : 74

سَاُرْهِقُهٗ صَعُوْدًا ۟ؕ

ಸಧ್ಯದಲ್ಲೇ ನಾನು ಅವನನ್ನು ಒಂದು ಪ್ರಯಾಸಕರವಾದ ಏರುವಿಕೆಗೆ ಏರಿಸುವೆನು. info
التفاسير:

external-link copy
18 : 74

اِنَّهٗ فَكَّرَ وَقَدَّرَ ۟ۙ

ಅವನು ಯೋಚಿಸಿದನು ಮತ್ತು ನರ‍್ಧರಿಸಿದನು. info
التفاسير:

external-link copy
19 : 74

فَقُتِلَ كَیْفَ قَدَّرَ ۟ۙ

ಅವನಿಗೆ ನಾಶವಿರಲಿ, ಅವನು ಹೇಗೆ ನರ‍್ಧರಿಸಿದನು, info
التفاسير:

external-link copy
20 : 74

ثُمَّ قُتِلَ كَیْفَ قَدَّرَ ۟ۙ

ಪುನಃ ಅವನಿಗೆ ನಾಶವಿರಲಿ. ಅವನು ಹೇಗೆ ನರ‍್ಧರಿಸಿದನು, info
التفاسير:

external-link copy
21 : 74

ثُمَّ نَظَرَ ۟ۙ

ಅವನು ಪುನಃ (ತನ್ನ ಸಂಗಡಿಗರಕಡೆಗೆ) ನೋಡಿದನು. info
التفاسير:

external-link copy
22 : 74

ثُمَّ عَبَسَ وَبَسَرَ ۟ۙ

ತರುವಾಯ ಅವನು ಮುಖ ಗಂಟಿಕ್ಕಿಕೊಂಡನು ಮತ್ತು ಮುಖವನ್ನು ಸಿಂಡರಿಸಿಕೊಂಡನು. info
التفاسير:

external-link copy
23 : 74

ثُمَّ اَدْبَرَ وَاسْتَكْبَرَ ۟ۙ

ಬಳಿಕ ಅವನು ಹಿಂದೆ ಸರಿದನು ಮತ್ತು ಅಹಂಕಾರ ತೋರಿದನು. info
التفاسير:

external-link copy
24 : 74

فَقَالَ اِنْ هٰذَاۤ اِلَّا سِحْرٌ یُّؤْثَرُ ۟ۙ

ಮತ್ತು ಹೇಳಿದನು; ಇದಂತು ಹಿಂದಿನಿಂದ ನಡೆದು ಬರುತ್ತಿರುವ ಜಾದೂ ಅಲ್ಲದೇ ಇನ್ನೇನೂ ಅಲ್ಲ. info
التفاسير:

external-link copy
25 : 74

اِنْ هٰذَاۤ اِلَّا قَوْلُ الْبَشَرِ ۟ؕ

ಇದು (ಕುರ್ಆನ್) ಮನುಷ್ಯನ ಮಾತಲ್ಲದೆ ಇನ್ನೇನೂ ಅಲ್ಲ. info
التفاسير:

external-link copy
26 : 74

سَاُصْلِیْهِ سَقَرَ ۟

ಸಧ್ಯವೇ ನಾನು ಅವನನ್ನು ನರಕಾಗ್ನಿಗೆ ಹಾಕುವೆನು. info
التفاسير:

external-link copy
27 : 74

وَمَاۤ اَدْرٰىكَ مَا سَقَرُ ۟ؕ

ನರಕಾಗ್ನಿ ಏನೆಂದು ನಿಮಗೇನು ಗೊತ್ತು ? info
التفاسير:

external-link copy
28 : 74

لَا تُبْقِیْ وَلَا تَذَرُ ۟ۚ

ಅದು ಬಾಕಿ ಉಳಿಸುವುದೂ ಇಲ್ಲ ಬಿಡುವುದೂ ಇಲ್ಲ. info
التفاسير:

external-link copy
29 : 74

لَوَّاحَةٌ لِّلْبَشَرِ ۟ۚ

ಅದು ರ‍್ಮವನ್ನು ಸುಟ್ಟು ಹಾಕುವಂತದ್ದಾಗಿದೆ. info
التفاسير:

external-link copy
30 : 74

عَلَیْهَا تِسْعَةَ عَشَرَ ۟ؕ

ಅದರಲ್ಲಿ ಹತ್ತೊಂಬತ್ತು ಮಲಕ್ಗಳು ನಿಯೋಗಿಸಲ್ಪಟ್ಟಿದ್ದಾರೆ. info
التفاسير:

external-link copy
31 : 74

وَمَا جَعَلْنَاۤ اَصْحٰبَ النَّارِ اِلَّا مَلٰٓىِٕكَةً ۪— وَّمَا جَعَلْنَا عِدَّتَهُمْ اِلَّا فِتْنَةً لِّلَّذِیْنَ كَفَرُوْا ۙ— لِیَسْتَیْقِنَ الَّذِیْنَ اُوْتُوا الْكِتٰبَ وَیَزْدَادَ الَّذِیْنَ اٰمَنُوْۤا اِیْمَانًا وَّلَا یَرْتَابَ الَّذِیْنَ اُوْتُوا الْكِتٰبَ وَالْمُؤْمِنُوْنَ ۙ— وَلِیَقُوْلَ الَّذِیْنَ فِیْ قُلُوْبِهِمْ مَّرَضٌ وَّالْكٰفِرُوْنَ مَاذَاۤ اَرَادَ اللّٰهُ بِهٰذَا مَثَلًا ؕ— كَذٰلِكَ یُضِلُّ اللّٰهُ مَنْ یَّشَآءُ وَیَهْدِیْ مَنْ یَّشَآءُ ؕ— وَمَا یَعْلَمُ جُنُوْدَ رَبِّكَ اِلَّا هُوَ ؕ— وَمَا هِیَ اِلَّا ذِكْرٰی لِلْبَشَرِ ۟۠

ನರಕದ ಕಾವಲುಗಾರರನ್ನಾಗಿ ನಾವು ಕೇವಲ ಮಲಕ್ಗಳನ್ನು ನಿಯೋಗಿಸುತ್ತೇವೆ ಮತ್ತು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ನಿಶ್ಚಯಿಸಿದ್ದೇವೆ, ಇದು ಗ್ರಂಥ ನೀಡಲಾದವರು ನಂಬಲೆಂದೂ (ಅವರ ಗ್ರಂಥದಲ್ಲೂ ಇದೇ ಸಂಖ್ಯೆ ಇದೆ) ಸತ್ಯವಿಶ್ವಾಸಿಗಳ ವಿಶ್ವಾಸವು ವೃದ್ಧಿಸಲೆಂದೂ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಕುರ್ಆನಿನಲ್ಲಿ ಸಂದೇಹ ಪಡದಿರಲೆಂದು ಮತ್ತು ಹೃದಯದಲ್ಲಿ (ಕಾಪಟ್ಯದ) ರೋಗವಿದ್ದವರು ಮತ್ತು ಸತ್ಯನಿಷೇಧಿಗಳು “ಈ ಮಾತಿನ ಮೂಲಕ ಅಲ್ಲಾಹನ ಉದ್ದೇಶವೇನು?” ಎಂದು ಹೇಳಲೆಂದಾಗಿದೆ, ಇದೇ ಪ್ರಕಾರ ಅಲ್ಲಾಹನು (ಒಂದೇ ಮಾತಿನಿಂದ) ತಾನಿಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮರ‍್ಗದಲ್ಲಿ ಮುನ್ನಡೆಸುತ್ತಾನೆ. ನಿನ್ನ ಪ್ರಭುವಿನ ಸೈನ್ಯಗಳನ್ನು ಅವನ ಹೊರತು ಇನ್ನಾರೂ ಅರಿಯಲಾರರು, ಇದು ಸಕಲ ಮಾನವರಿಗೆ ಸ್ಪಷ್ಟ ಉಪದೇಶವಲ್ಲದೇ ಇನ್ನೇನೂ ಅಲ್ಲ. info
التفاسير:

external-link copy
32 : 74

كَلَّا وَالْقَمَرِ ۟ۙ

ಅನುಮಾನವೇ ಇಲ್ಲ, ಚಂದ್ರನ ಮೇಲಾಣೆ. info
التفاسير:

external-link copy
33 : 74

وَالَّیْلِ اِذْ اَدْبَرَ ۟ۙ

ರಾತ್ರಿಯು ಮರಳುವಾಗಿನ ಆಣೆ. info
التفاسير:

external-link copy
34 : 74

وَالصُّبْحِ اِذَاۤ اَسْفَرَ ۟ۙ

ಪ್ರಭಾತದಾಣೆ, ಅದು ಪ್ರಕಾಶಮಾನವಾಗುವಾಗ info
التفاسير:

external-link copy
35 : 74

اِنَّهَا لَاِحْدَی الْكُبَرِ ۟ۙ

ಖಂಡಿತವಾಗಿಯೂ (ಆ ನರಕಾಗ್ನಿ) ಮಹಾ ವಿಷಯಗಳಲ್ಲೊಂದಾಗಿದೆ, info
التفاسير:

external-link copy
36 : 74

نَذِیْرًا لِّلْبَشَرِ ۟ۙ

ಮಾನವರಿಗೆ ಎಚ್ಚರಿಕೆ ನೀಡುವಂತಹದು. info
التفاسير:

external-link copy
37 : 74

لِمَنْ شَآءَ مِنْكُمْ اَنْ یَّتَقَدَّمَ اَوْ یَتَاَخَّرَ ۟ؕ

ನಿಮ್ಮ ಪೈಕಿ (ಸನ್ಮರ‍್ಗದಲ್ಲಿ) ಮುಂದೆ ಸಾಗಲು ಅಥವ ಹಿಂದೆ ಸರಿಯಲು ಇಚ್ಛಿಸುವವರಿಗೆ. info
التفاسير:

external-link copy
38 : 74

كُلُّ نَفْسٍ بِمَا كَسَبَتْ رَهِیْنَةٌ ۟ۙ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರ‍್ಮಗಳ ಬದಲಿಗೆ ಅಡವಿಸಲ್ಪಟ್ಟಿದ್ದಾನೆ. info
التفاسير:

external-link copy
39 : 74

اِلَّاۤ اَصْحٰبَ الْیَمِیْنِ ۟ؕۛ

ಆದರೆ ಬಲಗಡೆಯವರ ಹೊರತು info
التفاسير:

external-link copy
40 : 74

فِیْ جَنّٰتٍ ۛ۫— یَتَسَآءَلُوْنَ ۟ۙ

ಅವರು ಸ್ರ‍್ಗೋದ್ಯಾನಗಳಲ್ಲಿ ಪರಸ್ಪರ ಪ್ರಶ್ನಿಸುವರು. info
التفاسير:

external-link copy
41 : 74

عَنِ الْمُجْرِمِیْنَ ۟ۙ

ಅಪರಾಧಿಗಳ ಕುರಿತು info
التفاسير:

external-link copy
42 : 74

مَا سَلَكَكُمْ فِیْ سَقَرَ ۟

ನಿಮ್ಮನ್ನು ನರಕಕ್ಕೆ ಒಯ್ದುದ್ದು ಯಾವುದು ? info
التفاسير:

external-link copy
43 : 74

قَالُوْا لَمْ نَكُ مِنَ الْمُصَلِّیْنَ ۟ۙ

ಅವರು ಉತ್ತರಿಸುವರು; ನಾವು ನಮಾಜ್ ಮಾಡುವವರಲ್ಲಾಗಿರಲಿಲ್ಲ. info
التفاسير:

external-link copy
44 : 74

وَلَمْ نَكُ نُطْعِمُ الْمِسْكِیْنَ ۟ۙ

ಮತ್ತು ನಾವು ನರ‍್ಗತಿಕರಿಗೆ ಉಣಿಸುತ್ತಿರಲಿಲ್ಲ. info
التفاسير:

external-link copy
45 : 74

وَكُنَّا نَخُوْضُ مَعَ الْخَآىِٕضِیْنَ ۟ۙ

ನಾವು ಸತ್ಯದ ವಿರುದ್ಧ ರ‍್ಕಿಸುವವರ ಜೊತೆ ಸೇರಿರ‍್ಕದಲ್ಲಿ ತಲ್ಲೀನರಾಗಿರುತ್ತಿದ್ದೆವು. info
التفاسير:

external-link copy
46 : 74

وَكُنَّا نُكَذِّبُ بِیَوْمِ الدِّیْنِ ۟ۙ

ಹಾಗು ನಾವು ಪ್ರತಿಫಲ ದಿನವನ್ನು ನಿಷೇಧಿಸುತ್ತಿದ್ದೆವು. info
التفاسير:

external-link copy
47 : 74

حَتّٰۤی اَتٰىنَا الْیَقِیْنُ ۟ؕ

ಕೊನೆಗೆ ಖಚಿತವಾದುದು(ಮರಣವು) ನಮಗೆ ಬಂದುಬಿಟ್ಟಿತು. info
التفاسير:

external-link copy
48 : 74

فَمَا تَنْفَعُهُمْ شَفَاعَةُ الشّٰفِعِیْنَ ۟ؕ

ಶಿಫಾರಸ್ಸು ಮಾಡುವವರ ಶಿಫಾರಸ್ಸು ಅಂದು ಅವರಿಗೆ ಯಾವ ಪ್ರಯೋಜನ ನೀಡದು. info
التفاسير:

external-link copy
49 : 74

فَمَا لَهُمْ عَنِ التَّذْكِرَةِ مُعْرِضِیْنَ ۟ۙ

ಅವರಿಗೇನಾಗಿಬಿಟ್ಟಿದೆ ? ಅವರು ಉದ್ಭೋಧೆಯಿಂದ ವಿಮುಖರಾಗುತ್ತಿದ್ದಾರೆ! info
التفاسير:

external-link copy
50 : 74

كَاَنَّهُمْ حُمُرٌ مُّسْتَنْفِرَةٌ ۟ۙ

50&51 info
التفاسير:

external-link copy
51 : 74

فَرَّتْ مِنْ قَسْوَرَةٍ ۟ؕ

ಅವರ ಅವಸ್ಥೆಯು ಸಿಂಹವನ್ನು ಕಂಡು ಹೆದರಿ ಬೆಚ್ಚಿಬಿದ್ದು ಓಡಿಹೋದ ಕಾಡು ಕತ್ತೆಗಳೆಂಬಂತಿದೆ. info
التفاسير:

external-link copy
52 : 74

بَلْ یُرِیْدُ كُلُّ امْرِئٍ مِّنْهُمْ اَنْ یُّؤْتٰی صُحُفًا مُّنَشَّرَةً ۟ۙ

ವಾಸ್ತವದಲ್ಲಿ ಅವರ ಪೈಕಿ ಪ್ರತಿಯೊಬ್ಬನೂ ತನಗೆ ನೇರವಾಗಿ ತೆರೆದ ದೈವಿಕ ಗ್ರಂಥಗಳನ್ನು ನೀಡಬೇಕೆಂದು ಬಯಸುತ್ತಾನೆ. info
التفاسير:

external-link copy
53 : 74

كَلَّا ؕ— بَلْ لَّا یَخَافُوْنَ الْاٰخِرَةَ ۟ؕ

ಖಂಡಿತ ಇದು ಸಾಧ್ಯವಿಲ್ಲ (ವಾಸ್ತವದಲ್ಲಿ) ಅವರು ಅಂತ್ಯ ದಿನವನ್ನು ಭಯಪಡುವುದಿಲ್ಲ. info
التفاسير:

external-link copy
54 : 74

كَلَّاۤ اِنَّهٗ تَذْكِرَةٌ ۟ۚ

ವಾಸ್ತವವೇನೆಂದರೆ ಇದು (ಕುರ್ಆನ್) ಒಂದು ಉಪದೇಶವಾಗಿದೆ. info
التفاسير:

external-link copy
55 : 74

فَمَنْ شَآءَ ذَكَرَهٗ ۟ؕ

ಆದ್ದರಿಂದ ಇಚ್ಛಿಸುವವನು ಇದರಿಂದ ಉದ್ಭೋದೆ ಪಡೆಯಲಿ. info
التفاسير:

external-link copy
56 : 74

وَمَا یَذْكُرُوْنَ اِلَّاۤ اَنْ یَّشَآءَ اللّٰهُ ؕ— هُوَ اَهْلُ التَّقْوٰی وَاَهْلُ الْمَغْفِرَةِ ۟۠

ಅಲ್ಲಾಹನು ಇಚ್ಛಿಸದೇ ಅವರು (ಸತ್ಯನಿಷೇಧಿಗಳು) ಉದ್ಭೋದೆ ಪಡೆಯಲಾರರು. ಭಯ ಭಕ್ತಿಯಿರಿಸಿಕೊಳ್ಳಲು ಮತ್ತು ಕ್ಷಮೆ ನೀಡಲೂ ಅವನೇ ರ‍್ಹನಾಗಿದ್ದಾನೆ. info
التفاسير: