કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

પેજ નંબર:close

external-link copy
12 : 49

یٰۤاَیُّهَا الَّذِیْنَ اٰمَنُوا اجْتَنِبُوْا كَثِیْرًا مِّنَ الظَّنِّ ؗ— اِنَّ بَعْضَ الظَّنِّ اِثْمٌ وَّلَا تَجَسَّسُوْا وَلَا یَغْتَبْ بَّعْضُكُمْ بَعْضًا ؕ— اَیُحِبُّ اَحَدُكُمْ اَنْ یَّاْكُلَ لَحْمَ اَخِیْهِ مَیْتًا فَكَرِهْتُمُوْهُ ؕ— وَاتَّقُوا اللّٰهَ ؕ— اِنَّ اللّٰهَ تَوَّابٌ رَّحِیْمٌ ۟

ಓ ಸತ್ಯವಿಶ್ವಾಸಿಗಳೇ ಹೆಚ್ಚಿನ ಸಂಶಯಗಳಿAದ ದೂರವಿರಿ, ನಿಶ್ಚಯವಾಗಿಯು ಕೆಲವು ಸಂಶಯಗಳು ಪಾಪಗಳಾಗಿವೆ ಮತ್ತು ಪರಸ್ಪರ ಗೂಡಾಚಾರಿಕೆ ಮಾಡದಿರಿ. ನಿಮ್ಮಲ್ಲಿ ಯಾರೂ ಪರದೋಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ ? ನೀವು ಅದನ್ನು ಅಸಹ್ಯಪಡುವಿರಿ. ಆದ್ದರಿಂದ ಅಲ್ಲಾಹನನ್ನು ಭಯಪಡಿರಿ, ನಿಸ್ಸಂದೇಹವಾಗಿಯೂ ಅಲ್ಲಾಹನು ಪಶ್ಚಾತಾಪ ಸ್ವೀಕರಿಸುವವನೂ ಕರುಣಾಮಯಿಯೂ ಆಗಿದ್ದಾನೆ. info
التفاسير:

external-link copy
13 : 49

یٰۤاَیُّهَا النَّاسُ اِنَّا خَلَقْنٰكُمْ مِّنْ ذَكَرٍ وَّاُ وَجَعَلْنٰكُمْ شُعُوْبًا وَّقَبَآىِٕلَ لِتَعَارَفُوْا ؕ— اِنَّ اَكْرَمَكُمْ عِنْدَ اللّٰهِ اَتْقٰىكُمْ ؕ— اِنَّ اللّٰهَ عَلِیْمٌ خَبِیْرٌ ۟

ಓ ಜನರೇ ನಾವು ನಿಮ್ಮನ್ನು ಓರ್ವ ಪುರುಷ ಮತ್ತು ಸ್ತಿçÃಯಿಂದ ಸೃಷ್ಟಿಸಿರುತ್ತೇವೆ, ನೀವು ಪರಸ್ಪರ ಗುರುತಿಸುವ ಸಲುವಾಗಿ ನಾವು ನಿಮ್ಮನ್ನು ಪಂಗಡಗಳಾಗಿಯೂ ಗೋತ್ರಗಳಾಗಿಯೂ ನಿಶ್ಚಯಿಸಿರುತ್ತೇವೆ. ನಿಮ್ಮಲ್ಲಿ ಹೆಚ್ಚು ಭಯಭಕ್ತಿಯುಳ್ಳವನೇ ಅಲ್ಲಾಹನ ಬಳಿ ಹೆಚ್ಚು ಗೌರವಾನ್ವಿತನಾಗಿದ್ದಾನೆ, ನಿಜವಾಗಿಯೂ ಅಲ್ಲಾಹನು ಸರ್ವಜ್ಞಾನಿಯು ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
14 : 49

قَالَتِ الْاَعْرَابُ اٰمَنَّا ؕ— قُلْ لَّمْ تُؤْمِنُوْا وَلٰكِنْ قُوْلُوْۤا اَسْلَمْنَا وَلَمَّا یَدْخُلِ الْاِیْمَانُ فِیْ قُلُوْبِكُمْ ؕ— وَاِنْ تُطِیْعُوا اللّٰهَ وَرَسُوْلَهٗ لَا یَلِتْكُمْ مِّنْ اَعْمَالِكُمْ شَیْـًٔا ؕ— اِنَّ اللّٰهَ غَفُوْرٌ رَّحِیْمٌ ۟

ಗ್ರಾಮೀಣ ಅರಬರು ನಾವು ಸತ್ಯವಿಶ್ವಾಸವಿರಿಸಿದೆವು ಎನ್ನುತ್ತಾರೆ, ಹೇಳಿರಿ ವಾಸ್ತವದಲ್ಲಿ ನೀವು ಸತ್ಯವಿಶ್ವಾಸವಿರಿಸಿಲ್ಲ, ಆದರೆ ನೀವು ನಾವು ವಿಧೇಯರಾದೆವು ಎಂದು ಹೇಳಿರಿ. ವಸ್ತುತಃ ಇದುವರೆಗೂ ನಿಮ್ಮ ಹೃದಯಗಳಲ್ಲಿ ಸತ್ಯವಿಶ್ವಾಸವು ಪ್ರವೇಶಿಸಿಲ್ಲ, ನೀವು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದರೆ ಅವನು ನಿಮ್ಮ ಸತ್ಕರ್ಮಗಳಿಂದ ಅಲ್ಪವನ್ನು ಕಡಿತಗೊಳಿಸಲಾರನು, ಖಂಡಿತವಾಗಿಯು ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
15 : 49

اِنَّمَا الْمُؤْمِنُوْنَ الَّذِیْنَ اٰمَنُوْا بِاللّٰهِ وَرَسُوْلِهٖ ثُمَّ لَمْ یَرْتَابُوْا وَجٰهَدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ ؕ— اُولٰٓىِٕكَ هُمُ الصّٰدِقُوْنَ ۟

ಅಲ್ಲಾಹನಲ್ಲೂ ಅವನ ಸಂದೇಶವಾಹಕರಲ್ಲೂ ವಿಶ್ವಾಸವಿರಿಸಿ, ಆ ಬಳಿಕ ಸಂದೇಹಕ್ಕೊಳಗಾಗದವರು ಮತ್ತು ತಮ್ಮ ತನುಮನ ಧನಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡುವವರೇ ಸತ್ಯವಿಶ್ವಾಸಿಗಳು ಮತ್ತು ಅವರೇ ಸತ್ಯವಂತರು. info
التفاسير:

external-link copy
16 : 49

قُلْ اَتُعَلِّمُوْنَ اللّٰهَ بِدِیْنِكُمْ ؕ— وَاللّٰهُ یَعْلَمُ مَا فِی السَّمٰوٰتِ وَمَا فِی الْاَرْضِ ؕ— وَاللّٰهُ بِكُلِّ شَیْءٍ عَلِیْمٌ ۟

ಹೇಳಿರಿ; ನೀವು ನಿಮ್ಮ ಧರ್ಮದ ಬಗ್ಗೆ ಅಲ್ಲಾಹನಿಗೇ ತಿಳಿಸಿಕೊಡುತ್ತಿರುವಿರಾ ? ಅಲ್ಲಾಹನಂತು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅರಿಯುವವನು ಮತ್ತು ಅಲ್ಲಾಹನು ಸಕಲ ಸಂಗತಿಗಳನ್ನು ಚೆನ್ನಾಗಿ ಬಲ್ಲನು. info
التفاسير:

external-link copy
17 : 49

یَمُنُّوْنَ عَلَیْكَ اَنْ اَسْلَمُوْا ؕ— قُلْ لَّا تَمُنُّوْا عَلَیَّ اِسْلَامَكُمْ ۚ— بَلِ اللّٰهُ یَمُنُّ عَلَیْكُمْ اَنْ هَدٰىكُمْ لِلْاِیْمَانِ اِنْ كُنْتُمْ صٰدِقِیْنَ ۟

ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದನ್ನು ನಿಮ್ಮ ಮೇಲೆ ಮಾಡಿದ ಉಪಕಾರವೆಂಬAತೆ ತೋರಿಸುತ್ತಿದ್ದಾರೆ, ಹೇಳಿರಿ; ನೀವು ಇಸ್ಲಾಮ್ ಸ್ವೀಕರಿಸಿದ್ದನ್ನು ನನ್ನ ಮೇಲೆ ಮಾಡಿದ ಉಪಕಾರವಾಗಿ ತೋರಿಸಬೇಡಿರಿ, ವಾಸ್ತವದಲ್ಲಿ ನೀವು ಸತ್ಯವಂತರಾಗಿದ್ದರೆ ನಿಮ್ಮನ್ನು ಸತ್ಯವಿಶ್ವಾಸದಕಡೆಗೆ ಮಾರ್ಗದರ್ಶನ ಮಾಡುವ ಮೂಲಕ ಅಲ್ಲಾಹನು ನಿಮ್ಮ ಮೇಲೆ ಉಪಕಾರ ಮಾಡಿದ್ದಾನೆ. info
التفاسير:

external-link copy
18 : 49

اِنَّ اللّٰهَ یَعْلَمُ غَیْبَ السَّمٰوٰتِ وَالْاَرْضِ ؕ— وَاللّٰهُ بَصِیْرٌ بِمَا تَعْمَلُوْنَ ۟۠

ನಿಸ್ಸಂಶಯವಾಗಿಯು ಆಕಾಶಗಳ ಹಾಗು ಭೂಮಿಯ ಅಗೋಚರ ಜ್ಞಾನವನ್ನು ಅಲ್ಲಾಹನು ಚೆನ್ನಾಗಿ ಬಲ್ಲನು ಮತ್ತು ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷö್ಮವಾಗಿ ನೋಡುತ್ತಿದ್ದಾನೆ. info
التفاسير: