કુરઆન મજીદના શબ્દોનું ભાષાંતર - કન્નડ ભાષામાં અનુવાદ - બશીર મૈસૂરી

પેજ નંબર:close

external-link copy
46 : 11

قَالَ یٰنُوْحُ اِنَّهٗ لَیْسَ مِنْ اَهْلِكَ ۚ— اِنَّهٗ عَمَلٌ غَیْرُ صَالِحٍ ۗ— فَلَا تَسْـَٔلْنِ مَا لَیْسَ لَكَ بِهٖ عِلْمٌ ؕ— اِنِّیْۤ اَعِظُكَ اَنْ تَكُوْنَ مِنَ الْجٰهِلِیْنَ ۟

ಅಲ್ಲಾಹನು ಉತ್ತರಿಸಿದನು : ಓ ನೂಹ್ ನಿಶ್ಚಯವಾಗಿಯೂ ಅವನು ನಿಮ್ಮ ಕುಟುಂಬದವನಲ್ಲ. ಏಕೆಂದರೆ ಅವನ ಕೃತ್ಯವು ಅತ್ಯಂತ ಅಯೋಗ್ಯವಾಗಿದೆ. ಆದ್ದರಿಂದ ನಿಮಗೆ ಅರಿವಿಲ್ಲದಂತಹ ವಿಷಯದಲ್ಲಿ ನೀವು ನನ್ನಲ್ಲಿ ಬೇಡಬಾರದು. ನೀವು ಅವಿವೇಕಿಗಳಾಗಬಾರದು ಎಂದು ನಾನು ನಿಮಗೆ ಉಪದೇಶ ಮಾಡುತ್ತಿದ್ದೇನೆ. info
التفاسير:

external-link copy
47 : 11

قَالَ رَبِّ اِنِّیْۤ اَعُوْذُ بِكَ اَنْ اَسْـَٔلَكَ مَا لَیْسَ لِیْ بِهٖ عِلْمٌ ؕ— وَاِلَّا تَغْفِرْ لِیْ وَتَرْحَمْنِیْۤ اَكُنْ مِّنَ الْخٰسِرِیْنَ ۟

ನೂಹ್‌ರವರು ಹೇಳಿದರು ನನ್ನ ಪ್ರಭುವೇ ನನಗೆ ಅರಿವಿಲ್ಲದಂತಹ ವಿಷಯದಲ್ಲಿ ನಿನ್ನಲ್ಲಿ ಬೇಡುವುದರಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ ಮತ್ತು ನೀನು ನನಗೆ ಕ್ಷಮಿಸದಿದ್ದರೆ ಹಾಗೂ ನನ್ನ ಮೇಲೆ ಕರುಣೆ ತೋರದಿದ್ದರೆ ನಾನು ನಷ್ಟ ಹೊಂದಿದವರಲ್ಲಾಗುವೆನು. info
التفاسير:

external-link copy
48 : 11

قِیْلَ یٰنُوْحُ اهْبِطْ بِسَلٰمٍ مِّنَّا وَبَرَكٰتٍ عَلَیْكَ وَعَلٰۤی اُمَمٍ مِّمَّنْ مَّعَكَ ؕ— وَاُمَمٌ سَنُمَتِّعُهُمْ ثُمَّ یَمَسُّهُمْ مِّنَّا عَذَابٌ اَلِیْمٌ ۟

ಹೇಳಲಾಯಿತು ಓ ನೂಹ್ ನಿಮ್ಮ ಮೇಲೆ ಮತ್ತು ನಿಮ್ಮೊಂದಿಗೆ ಇರುವ ಸಮುದಾಯಗಳ ಮೇಲೆ ನನ್ನ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಇಳಿದು ಬಿಡಿ. ಮತ್ತು ಕೆಲವು ಸಮುದಾಯಗಳಿಗೆ ನಾವು ಸುಖಭೋಗಗಳನ್ನು ನೀಡುವೆವು. ಅನಂತರ(ಅವರ ಸತ್ಯ ನಿಷೇಧದ ಹಾಗೂ ಪಾಪಗಳ ನಿಮಿತ್ತ) ನಮ್ಮ ಕಡೆಯಿಂದ ಅವರಿಗೆ ವೇದನಾಜನಕ ಯಾತನೆಯು ತಟ್ಟುವುದು. info
التفاسير:

external-link copy
49 : 11

تِلْكَ مِنْ اَنْۢبَآءِ الْغَیْبِ نُوْحِیْهَاۤ اِلَیْكَ ۚ— مَا كُنْتَ تَعْلَمُهَاۤ اَنْتَ وَلَا قَوْمُكَ مِنْ قَبْلِ هٰذَا ۛؕ— فَاصْبِرْ ۛؕ— اِنَّ الْعَاقِبَةَ لِلْمُتَّقِیْنَ ۟۠

ಓ ಮುಹಮ್ಮದರೇ ಇವು ನಿಮಗೆ ದಿವ್ಯ ವಾಣಿಯ ಮೂಲಕ ತಿಳಿಸಿಕೊಡುತ್ತಿರುವ ಅಗೋಚರ ಸುದ್ದಿಗಳಾಗಿವೆ ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ತಿಳಿದಿರಲಿಲ್ಲ. ಆದ್ದರಿಂದ ನೀವು ಸಹನೆ ವಹಿಸಿರಿ. ಏಕೆಂದರೆ ಉತ್ತಮ ಪರಿಣಾಮವು ಭಯ-ಭಕ್ತಿ ಉಳ್ಳವರಿಗಾಗಿದೆ. info
التفاسير:

external-link copy
50 : 11

وَاِلٰی عَادٍ اَخَاهُمْ هُوْدًا ؕ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— اِنْ اَنْتُمْ اِلَّا مُفْتَرُوْنَ ۟

ಆದ್ ಜನಾಂಗದವರೆಡೆಗೆ ನಾವು ಅವರ ಸಹೋದರ ಹೂದ್‌ರವರನ್ನು ಕಳುಹಿಸಿದೆವು ಅವರು ಹೇಳಿದರು: ಓ ನನ್ನ ಜನಾಂಗದವರೇ ನೀವು ಅಲ್ಲಾಹನನ್ನು ಆರಾಧಿಸಿರಿ ಅವನ ಹೊರತು ಇನ್ಯಾವ ಆರಾಧ್ಯನೂ ನಿಮಗಿಲ್ಲ. ನೀವು (ಉಪದೇವರುಗಳನ್ನು ಸೇರಿಸಿ) ಕೇವಲ ಸುಳ್ಳು ಸೃಷ್ಟಿಸುತ್ತಿರುವಿರಿ. info
التفاسير:

external-link copy
51 : 11

یٰقَوْمِ لَاۤ اَسْـَٔلُكُمْ عَلَیْهِ اَجْرًا ؕ— اِنْ اَجْرِیَ اِلَّا عَلَی الَّذِیْ فَطَرَنِیْ ؕ— اَفَلَا تَعْقِلُوْنَ ۟

ಓ ನನ್ನ ಜನಾಂಗದವರೇ ನಾನು ನಿಮ್ಮಲ್ಲಿ ಇದಕ್ಕಾಗಿ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ನನ್ನ ಪ್ರತಿಫಲವಂತೂ ನನ್ನನ್ನು ಸೃಷ್ಟಿಸಿದವನ ಹೊಣೆಯಲ್ಲಿದೆ. ಹಾಗಿದ್ದು ನೀವು ಬುದ್ಧಿ ಪ್ರಯೋಗಿಸುವುದಿಲ್ಲವೇ ?. info
التفاسير:

external-link copy
52 : 11

وَیٰقَوْمِ اسْتَغْفِرُوْا رَبَّكُمْ ثُمَّ تُوْبُوْۤا اِلَیْهِ یُرْسِلِ السَّمَآءَ عَلَیْكُمْ مِّدْرَارًا وَّیَزِدْكُمْ قُوَّةً اِلٰی قُوَّتِكُمْ وَلَا تَتَوَلَّوْا مُجْرِمِیْنَ ۟

ಓ ನನ್ನ ಜನಾಂಗದವರೇ ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ಅವನು ನಿಮ್ಮ ಮೇಲೆ ಆಕಾಶದಿಂದ ಧಾರಾಕಾರವಾಗಿ ಮಳೆ ಸುರಿಸುವನು ಮತ್ತು ನಿಮ್ಮ ಶಕ್ತಿಯೊಂದಿಗೆ ಇನ್ನಷ್ಟು ಶಕ್ತಿಯನ್ನು ಹೆಚ್ಚಿಸುವನು ಮತ್ತು ನೀವು ಅಪರಾಧವೆಸಗುತ್ತಾ ವಿಮುಖರಾಗಬೇಡಿರಿ. info
التفاسير:

external-link copy
53 : 11

قَالُوْا یٰهُوْدُ مَا جِئْتَنَا بِبَیِّنَةٍ وَّمَا نَحْنُ بِتَارِكِیْۤ اٰلِهَتِنَا عَنْ قَوْلِكَ وَمَا نَحْنُ لَكَ بِمُؤْمِنِیْنَ ۟

ಅವರು ಹೇಳಿದರು ಓ ಹೂದ್! ನೀವು ನಮ್ಮ ಬಳಿಗೆ ಯಾವುದೇ ಸುಸ್ಪಷ್ಟ ದೃಷ್ಟಾಂತವನ್ನು ತಂದಿರುವುದಿಲ್ಲ, ಮತ್ತು ಕೇವಲ ನಿಮ್ಮ ಮಾತಿಗೆ ನಾವು ನಮ್ಮ ಆರಾಧ್ಯ ದೇವರುಗಳನ್ನು ಬಿಡುವವರಲ್ಲ, ಹಾಗೂ ನಾವು ನಿಮ್ಮ ಮೇಲೆ ವಿಶ್ವಾಸವಿರಿಸುವವರೂ ಅಲ್ಲ. info
التفاسير: