Firo maanaaji al-quraan tedduɗo oo - Eggo (nantino) ngo e haala Kannada - Hamza Batur

external-link copy
52 : 22

وَمَاۤ اَرْسَلْنَا مِنْ قَبْلِكَ مِنْ رَّسُوْلٍ وَّلَا نَبِیٍّ اِلَّاۤ اِذَا تَمَنّٰۤی اَلْقَی الشَّیْطٰنُ فِیْۤ اُمْنِیَّتِهٖ ۚ— فَیَنْسَخُ اللّٰهُ مَا یُلْقِی الشَّیْطٰنُ ثُمَّ یُحْكِمُ اللّٰهُ اٰیٰتِهٖ ؕ— وَاللّٰهُ عَلِیْمٌ حَكِیْمٌ ۟ۙ

ನಾವು ನಿಮಗಿಂತ ಮೊದಲು ಕಳುಹಿಸಿದ ಯಾವುದೇ ಸಂದೇಶವಾಹಕರು ಮತ್ತು ಪ್ರವಾದಿಗಳು ಮಾತನಾಡುವಾಗ (ಅಲ್ಲಾಹನ ಗ್ರಂಥವನ್ನು ಓದಿಕೊಡುವಾಗ), ಶೈತಾನನು ಅದಕ್ಕೆ ಕೆಲವು ದುರ್ವಿಚಾರಗಳನ್ನು ಸೇರಿಸುತ್ತಿದ್ದನು. ಆದರೆ ಶೈತಾನನು ಸೇರಿಸಿದ್ದನ್ನು ಅಲ್ಲಾಹು ಅಳಿಸಿ ಹಾಕುತ್ತಿದ್ದನು. ನಂತರ ಅಲ್ಲಾಹು ತನ್ನ ವಚನಗಳನ್ನು ಪ್ರಬಲಗೊಳಿಸುತ್ತಿದ್ದನು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.[1] info

[1] ಅಂದರೆ ಪ್ರವಾದಿಗಳು (ಅವರ ಮೇಲೆ ಶಾಂತಿಯಿರಲಿ) ದೇವವಾಣಿಯ ಆಧಾರದಲ್ಲಿ ಮಾತನಾಡುವಾಗ, ಅಥವಾ ಅಲ್ಲಾಹನ ಗ್ರಂಥದ ವಚನಗಳನ್ನು ಓದಿಕೊಡುವಾಗ, ಶೈತಾನನು ಅವರ ಮಾತಿನಲ್ಲಿ ತನ್ನ ಮಾತನ್ನು ಸೇರಿಸಲು, ಅಥವಾ ಅಲ್ಲಾಹನ ವಚನಕ್ಕೆ ತನ್ನ ವಚನಗಳನ್ನು ಸೇರಿಸಲು, ಅಥವಾ ಅದನ್ನು ಓದಿಕೊಡುವಾಗ ಜನರ ಮನದಲ್ಲಿ ದುರ್ವಿಚಾರಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದನು. ಆದರೆ ಅಲ್ಲಾಹು ಶೈತಾನನ ಈ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿ ತನ್ನ ವಚನಗಳನ್ನು ಬಲಿಷ್ಠಗೊಳಿಸುತ್ತಿದ್ದನು.

التفاسير: