Firo maanaaji al-quraan tedduɗo oo - Eggo (nantino) ngo e haala Kannada - Hamza Batur

external-link copy
158 : 2

اِنَّ الصَّفَا وَالْمَرْوَةَ مِنْ شَعَآىِٕرِ اللّٰهِ ۚ— فَمَنْ حَجَّ الْبَیْتَ اَوِ اعْتَمَرَ فَلَا جُنَاحَ عَلَیْهِ اَنْ یَّطَّوَّفَ بِهِمَا ؕ— وَمَنْ تَطَوَّعَ خَیْرًا ۙ— فَاِنَّ اللّٰهَ شَاكِرٌ عَلِیْمٌ ۟

ನಿಶ್ಚಯವಾಗಿಯೂ ಸಫಾ ಮತ್ತು ಮರ್ವಾ ಅಲ್ಲಾಹನ ಚಿಹ್ನೆಗಳಲ್ಲಿ ಒಳಪಟ್ಟದ್ದಾಗಿವೆ. ಆದ್ದರಿಂದ ಅಲ್ಲಾಹನ ಭವನಕ್ಕೆ ಹಜ್ ಅಥವಾ ಉಮ್ರಾ ಮಾಡುವವರು ಇವುಗಳಿಗೆ ಪ್ರದಕ್ಷಿಣೆ ಮಾಡುವುದರಲ್ಲಿ ಯಾವುದೇ ದೋಷವಿಲ್ಲ.[1] ಸ್ವಯಂಪ್ರೇರಿತವಾಗಿ ಒಳಿತು ಮಾಡುವವರನ್ನು ಅಲ್ಲಾಹು ಮೆಚ್ಚುತ್ತಾನೆ ಮತ್ತು ಅವರ ಬಗ್ಗೆ ಅವನು ಚೆನ್ನಾಗಿ ತಿಳಿದಿದ್ದಾನೆ. info

[1] ಇಸ್ಲಾಂ ಸ್ವೀಕರಿಸುವ ಮೊದಲು ಮದೀನದ ಅನ್ಸಾರಿಗಳು ಮನಾತ್ ಎಂಬ ವಿಗ್ರಹದ ಹೆಸರಲ್ಲಿ ತಲ್ಬಿಯತ್ ಹೇಳುತ್ತಿದ್ದರು. ಅವರು ಪರ್ವತಗಳ ಮೇಲೆ ಅದನ್ನು ಪೂಜಿಸುತ್ತಿದ್ದರು. ಅವರು ಹಜ್ ನಿರ್ವಹಿಸಲು ಮಕ್ಕಾಗೆ ಬಂದರೆ ಸಫಾ ಮತ್ತು ಮರ್ವಾದ ನಡುವೆ ಸಈ ಮಾಡುವುದನ್ನು ಪಾಪವೆಂದು ಪರಿಗಣಿಸುತ್ತಿದ್ದರು. ಮುಸ್ಲಿಮರಾದ ಬಳಿಕ ಅವರು ಇದರ ಬಗ್ಗೆ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಚಾರಿಸಿದಾಗ ಈ ವಚನವು ಅವತೀರ್ಣವಾಯಿತು.

التفاسير: