Firo maanaaji al-quraan tedduɗo oo - Eggo Kannada ngol - Bashiir Maisoori

Tonngoode hello ngoo:close

external-link copy
28 : 54

وَنَبِّئْهُمْ اَنَّ الْمَآءَ قِسْمَةٌ بَیْنَهُمْ ۚ— كُلُّ شِرْبٍ مُّحْتَضَرٌ ۟

ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ. info
التفاسير:

external-link copy
29 : 54

فَنَادَوْا صَاحِبَهُمْ فَتَعَاطٰی فَعَقَرَ ۟

ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು. info
التفاسير:

external-link copy
30 : 54

فَكَیْفَ كَانَ عَذَابِیْ وَنُذُرِ ۟

ಆಗ ನನ್ನ ಶಿಕ್ಷೆ ಹಾಗು ಎಚ್ಚರಿಕೆಗಳು ಹೇಗಿದ್ದವು ? info
التفاسير:

external-link copy
31 : 54

اِنَّاۤ اَرْسَلْنَا عَلَیْهِمْ صَیْحَةً وَّاحِدَةً فَكَانُوْا كَهَشِیْمِ الْمُحْتَظِرِ ۟

ನಾವು ಅವರ ಮೇಲೆ ಒಂದು ಘೋರ ಆರ್ಭಟವನ್ನು ಕಳುಹಿಸಿದೆವು, ಆಗ ಅವರು ಕೊಟ್ಟಿಗೆಯವರು ತುಳಿದ ಕಸದಂತೆ ಹೊಟ್ಟಾಗಿಬಿಟ್ಟರು. info
التفاسير:

external-link copy
32 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟

ನಿಸ್ಸಂಶಯವಾಗಿಯು ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
33 : 54

كَذَّبَتْ قَوْمُ لُوْطٍۭ بِالنُّذُرِ ۟

ಲೂತರ ಜನಾಂಗವು ಎಚ್ಚರಿಕೆ ನೀಡುವವರನ್ನು ಸುಳ್ಳಾಗಿಸಿತು. info
التفاسير:

external-link copy
34 : 54

اِنَّاۤ اَرْسَلْنَا عَلَیْهِمْ حَاصِبًا اِلَّاۤ اٰلَ لُوْطٍ ؕ— نَجَّیْنٰهُمْ بِسَحَرٍ ۟ۙ

ನಿಸ್ಸಂಶಯವಾಗಿಯು ನಾವು ಅವರ ಮೇಲೆ ಕಲ್ಲುಗಳನ್ನು ವರ್ಷಿಸುವ ಚಂಡಮಾರುತವನ್ನು ಕಳುಹಿಸಿದೆವು, ಆದರೆ ಲೂತರ ಕುಟುಂಬದ ಹೊರತು, ನಾವು ಅವರನ್ನು ನುಸುಕಿನ ವೇಳೆಯಲ್ಲಿ ರಕ್ಷಿಸಿದೆವು. info
التفاسير:

external-link copy
35 : 54

نِّعْمَةً مِّنْ عِنْدِنَا ؕ— كَذٰلِكَ نَجْزِیْ مَنْ شَكَرَ ۟

ನಮ್ಮ ವತಿಯ ಒಂದು ಅನುಗ್ರಹವಾಗಿ ಪ್ರತಿಯೊಬ್ಬ ಕೃತಜ್ಞತೆ ತೋರುವವನಿಗೆ ನಾವು ಇದೇರೀತಿ ಪ್ರತಿಫಲ ನೀಡುತ್ತೇವೆ. info
التفاسير:

external-link copy
36 : 54

وَلَقَدْ اَنْذَرَهُمْ بَطْشَتَنَا فَتَمَارَوْا بِالنُّذُرِ ۟

ನಿಜವಾಗಿಯೂ ಲೂತರು ತಮ್ಮ ಜನಾಂಗವನ್ನು ನಮ್ಮ ಶಿಕ್ಷೆಯ ಕುರಿತು ಎಚ್ಚರಿಸಿದ್ದರು. ಆದರೆ ಅವರು ಎಲ್ಲಾ ಎಚ್ಚರಿಕೆಗಳ ಕುರಿತು ಸಂದೇಹಪಟ್ಟರು. info
التفاسير:

external-link copy
37 : 54

وَلَقَدْ رَاوَدُوْهُ عَنْ ضَیْفِهٖ فَطَمَسْنَاۤ اَعْیُنَهُمْ فَذُوْقُوْا عَذَابِیْ وَنُذُرِ ۟

ನಿಶ್ಚಯವಾಗಿಯೂ ಅವರು ಅವನ (ಲೂತರ) ಅತಿಥಿಗಳ ಕುರಿತು ಅವನನ್ನು ಪುಸಲಾಯಿಸಿದರು. ಆಗ ನಾವು ಅವರ ಕಣ್ಣುಗಳನ್ನು ಅಳಿಸಿಬಿಟ್ಟೆವು. (ಹೇಳಿದೆವು) ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ. info
التفاسير:

external-link copy
38 : 54

وَلَقَدْ صَبَّحَهُمْ بُكْرَةً عَذَابٌ مُّسْتَقِرٌّ ۟ۚ

ಶಾಶ್ವತವಾದ ಶಿಕ್ಷೆಯು ಮುಂಜಾನೆ ವೇಳೆಯಲ್ಲಿ ಅವರನ್ನು ಆವರಿಸಿಬಿಟ್ಟಿತು. info
التفاسير:

external-link copy
39 : 54

فَذُوْقُوْا عَذَابِیْ وَنُذُرِ ۟

ಇನ್ನು ನೀವು ನನ್ನ ಯಾತನೆಯನ್ನು ಮತ್ತು ಎಚ್ಚರಿಕೆಗಳನ್ನು ಸವಿಯಿರಿ (ಎನ್ನಲಾಯಿತು) info
التفاسير:

external-link copy
40 : 54

وَلَقَدْ یَسَّرْنَا الْقُرْاٰنَ لِلذِّكْرِ فَهَلْ مِنْ مُّدَّكِرٍ ۟۠

ನಿಸ್ಸಂಶಯವಾಗಿಯೂ ನಾವು ಕುರ್‌ಆನನ್ನು ಉಪದೇಶ ಪಡೆಯಲು ಸರಳಗೊಳಿಸಿದ್ದೇವೆ. ಇನ್ನು ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ ? info
التفاسير:

external-link copy
41 : 54

وَلَقَدْ جَآءَ اٰلَ فِرْعَوْنَ النُّذُرُ ۟ۚ

ಫಿರ್‌ಔನ್ ಕುಟುಂಬದ ಬಳಿಗೂ ಎಚ್ಚರಿಕೆ ನೀಡುವವರು ಬಂದಿದ್ದರು. info
التفاسير:

external-link copy
42 : 54

كَذَّبُوْا بِاٰیٰتِنَا كُلِّهَا فَاَخَذْنٰهُمْ اَخْذَ عَزِیْزٍ مُّقْتَدِرٍ ۟

ಆದರೆ ಅವರು ನಮ್ಮ ಸಕಲ ದೃಷ್ಟಾಂತಗಳನ್ನು ಸುಳ್ಳಾಗಿಸಿದರು. ಆಗ ನಾವು ಅವರನ್ನು ಒಬ್ಬ ಬಲಿಷ್ಠನೂ, ಸರ್ವಸಮರ್ಥನೂ ಹಿಡಿಯುವಂತೆ ಹಿಡಿದುಬಿಟ್ಟೆವು. info
التفاسير:

external-link copy
43 : 54

اَكُفَّارُكُمْ خَیْرٌ مِّنْ اُولٰٓىِٕكُمْ اَمْ لَكُمْ بَرَآءَةٌ فِی الزُّبُرِ ۟ۚ

(ಓ ಕುರೈಶರೇ) ನಿಮ್ಮ ಸತ್ಯನಿಷೇಧಿಗಳು ಅವರಿಗಿಂತ ಉತ್ತಮರೇ ? ಅಥವಾ ದಿವ್ಯಗ್ರಂಥಗಳಲ್ಲಿ ನಿಮಗೇನಾದರೂ ಕ್ಷಮೆ ಲಿಖಿತಗೊಂಡಿದೆಯೇ? info
التفاسير:

external-link copy
44 : 54

اَمْ یَقُوْلُوْنَ نَحْنُ جَمِیْعٌ مُّنْتَصِرٌ ۟

ಅಥವಾ ನಾವು ಜಯ ಸಾಧಿಸುವ ಪಂಗಡವಾಗಿದ್ದೇವೆAದು ಅವರು ಹೇಳುತ್ತಿದ್ದಾರೆಯೇ ? info
التفاسير:

external-link copy
45 : 54

سَیُهْزَمُ الْجَمْعُ وَیُوَلُّوْنَ الدُّبُرَ ۟

ಸದ್ಯದಲ್ಲೇ ಈ (ಸತ್ಯನಿಷೇಧಿ) ಪಂಗಡವು ಸೋತು ಹೋಗುವುದು. ಹಾಗು ಅವರು ಬೆನ್ನು ತಿರುಗಿಸಿ ಓಡುವರು. info
التفاسير:

external-link copy
46 : 54

بَلِ السَّاعَةُ مَوْعِدُهُمْ وَالسَّاعَةُ اَدْهٰی وَاَمَرُّ ۟

ಮಾತ್ರವಲ್ಲ ಅಂತ್ಯಗಳಿಗೆಯು ಅವರ ವಾಗ್ದತ್ತ ಸಮಯವಾಗಿದೆ ಹಾಗೂ ಆ ಅಂತ್ಯಗಳಿಗೆಯೂ ಅತ್ಯಂತ ಭೀಕರವೂ, ಅತಿ ಕಹಿಯೂ ಆಗಿದೆ, info
التفاسير:

external-link copy
47 : 54

اِنَّ الْمُجْرِمِیْنَ فِیْ ضَلٰلٍ وَّسُعُرٍ ۟ۘ

ನಿಸ್ಸಂದೇಹವಾಗಿಯೂ ಅಪರಾಧಿಗಳು ಮಾರ್ಗಭ್ರಷ್ಟತೆಯಲ್ಲಿ ಮತ್ತು ಹುಚ್ಚುತನದಲ್ಲಿ ಇದ್ದಾರೆ info
التفاسير:

external-link copy
48 : 54

یَوْمَ یُسْحَبُوْنَ فِی النَّارِ عَلٰی وُجُوْهِهِمْ ؕ— ذُوْقُوْا مَسَّ سَقَرَ ۟

ಅವರು ಅಧೋಮುಖಿಗಳಾಗಿ ನರಕಾಗ್ನಿಯಲ್ಲಿ ಎಳೆದೊಯ್ಯಲಾಗುವ ದಿನ ನರಕದ ಜ್ವಾಲೆಯ ಸ್ಪರ್ಶವನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು. info
التفاسير:

external-link copy
49 : 54

اِنَّا كُلَّ شَیْءٍ خَلَقْنٰهُ بِقَدَرٍ ۟

ನಿಸ್ಸಂಶಯವಾಗಿಯೂ ನಾವು ಪ್ರತಿಯೊಂದು ವಸ್ತುವನ್ನು ಒಂದು ಪ್ರಮಾಣದಲ್ಲಿ ಸೃಷ್ಟಿಸಿದ್ದೇವೆ. info
التفاسير: