ترجمهٔ معانی قرآن کریم - ترجمه‌ى كناديى - حمزه بتور

شماره صفحه:close

external-link copy
31 : 29

وَلَمَّا جَآءَتْ رُسُلُنَاۤ اِبْرٰهِیْمَ بِالْبُشْرٰی ۙ— قَالُوْۤا اِنَّا مُهْلِكُوْۤا اَهْلِ هٰذِهِ الْقَرْیَةِ ۚ— اِنَّ اَهْلَهَا كَانُوْا ظٰلِمِیْنَ ۟ۚۖ

ನಮ್ಮ ದೂತರು ಸುವಾರ್ತೆಯೊಂದಿಗೆ ಇಬ್ರಾಹೀಮ‌ರ ಬಳಿಗೆ ಬಂದ ಸಂದರ್ಭ. ಅವರು (ದೂತರು) ಹೇಳಿದರು: “ನಾವು ಈ ಊರಿನ ಜನರನ್ನು ಖಂಡಿತ ನಾಶ ಮಾಡುತ್ತೇವೆ. ಅದರ ನಿವಾಸಿಗಳು ಮಹಾ ದುಷ್ಟರಾಗಿದ್ದಾರೆ.” info
التفاسير:

external-link copy
32 : 29

قَالَ اِنَّ فِیْهَا لُوْطًا ؕ— قَالُوْا نَحْنُ اَعْلَمُ بِمَنْ فِیْهَا ؗ— لَنُنَجِّیَنَّهٗ وَاَهْلَهٗۤ اِلَّا امْرَاَتَهٗ ؗ— كَانَتْ مِنَ الْغٰبِرِیْنَ ۟

ಇಬ್ರಾಹೀಮ್ ಹೇಳಿದರು: “ಆದರೆ ಅಲ್ಲಿ ಲೂತ್ ಇದ್ದಾರೆ!” ದೂತರು ಉತ್ತರಿಸಿದರು: “ಅಲ್ಲಿ ಯಾರೆಲ್ಲಾ ಇದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಅವರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಅವರ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು.” info
التفاسير:

external-link copy
33 : 29

وَلَمَّاۤ اَنْ جَآءَتْ رُسُلُنَا لُوْطًا سِیْٓءَ بِهِمْ وَضَاقَ بِهِمْ ذَرْعًا وَّقَالُوْا لَا تَخَفْ وَلَا تَحْزَنْ ۫— اِنَّا مُنَجُّوْكَ وَاَهْلَكَ اِلَّا امْرَاَتَكَ كَانَتْ مِنَ الْغٰبِرِیْنَ ۟

ನಮ್ಮ ದೂತರು ಲೂತರ ಬಳಿಗೆ ಬಂದ ಸಂದರ್ಭ. ಅವರನ್ನು ನೋಡಿ ಲೂತರಿಗೆ ಬಹಳ ಸಂಕಟವಾಯಿತು ಮತ್ತು ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಭಯಪಡಬೇಡಿ; ಸಂಕಟಪಡಬೇಡಿ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಖಂಡಿತ ರಕ್ಷಿಸುವೆವು. ನಿಮ್ಮ ಪತ್ನಿಯ ಹೊರತು. ಆಕೆ ಹಿಂದೆ ಉಳಿದವರಲ್ಲಿ ಸೇರುವಳು. info
التفاسير:

external-link copy
34 : 29

اِنَّا مُنْزِلُوْنَ عَلٰۤی اَهْلِ هٰذِهِ الْقَرْیَةِ رِجْزًا مِّنَ السَّمَآءِ بِمَا كَانُوْا یَفْسُقُوْنَ ۟

ನಾವು ಈ ಊರಿನವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸುವೆವು. ಅವರು ಮಾಡಿದ ದೃಷ್ಕೃತ್ಯಗಳ ಕಾರಣದಿಂದ.” info
التفاسير:

external-link copy
35 : 29

وَلَقَدْ تَّرَكْنَا مِنْهَاۤ اٰیَةً بَیِّنَةً لِّقَوْمٍ یَّعْقِلُوْنَ ۟

ನಾವು ಆ ಊರನ್ನು ಒಂದು ಸ್ಪಷ್ಟ ಚಿಹ್ನೆಯಾಗಿ ಬಾಕಿಯುಳಿಸಿದ್ದೇವೆ. ಬುದ್ಧಿಶಕ್ತಿಯಿರುವ ಜನರು ಆಲೋಚಿಸುವುದಕ್ಕಾಗಿ. info
التفاسير:

external-link copy
36 : 29

وَاِلٰی مَدْیَنَ اَخَاهُمْ شُعَیْبًا ۙ— فَقَالَ یٰقَوْمِ اعْبُدُوا اللّٰهَ وَارْجُوا الْیَوْمَ الْاٰخِرَ وَلَا تَعْثَوْا فِی الْاَرْضِ مُفْسِدِیْنَ ۟

ನಾವು ಮದ್ಯನರ ಬಳಿಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು. ಅವರು ಹೇಳಿದರು: “ನನ್ನ ಜನರೇ! ನೀವು ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಮತ್ತು ಅಂತ್ಯದಿನವನ್ನು ನಿರೀಕ್ಷಿಸಿರಿ. ನೀವು ಕಿಡಿಗೇಡಿತನ ಮಾಡುತ್ತಾ ಭೂಮಿಯಲ್ಲಿ ವಿಹರಿಸಬೇಡಿ.” info
التفاسير:

external-link copy
37 : 29

فَكَذَّبُوْهُ فَاَخَذَتْهُمُ الرَّجْفَةُ فَاَصْبَحُوْا فِیْ دَارِهِمْ جٰثِمِیْنَ ۟ؗ

ಆದರೆ ಅವರು ಶುಐಬರನ್ನು ನಿಷೇಧಿಸಿದರು. ಆಗ ಭೂಕಂಪವು ಅವರನ್ನು ಹಿಡಿಯಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು. info
التفاسير:

external-link copy
38 : 29

وَعَادًا وَّثَمُوْدَاۡ وَقَدْ تَّبَیَّنَ لَكُمْ مِّنْ مَّسٰكِنِهِمْ ۫— وَزَیَّنَ لَهُمُ الشَّیْطٰنُ اَعْمَالَهُمْ فَصَدَّهُمْ عَنِ السَّبِیْلِ وَكَانُوْا مُسْتَبْصِرِیْنَ ۟ۙ

ನಾವು ಆದ್ ಮತ್ತು ಸಮೂದ್ ಗೋತ್ರಗಳನ್ನೂ ನಾಶ ಮಾಡಿದೆವು. ಅವರ ಕೆಲವು ವಾಸಸ್ಥಳಗಳು ನಿಮಗೆ ಸ್ಪಷ್ಟವಾಗಿ ಕಾಣುತ್ತಿವೆ. ಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದನು ಮತ್ತು ಅವರನ್ನು ನೇರ ಮಾರ್ಗದಿಂದ ತಡೆದನು. (ವಾಸ್ತವವಾಗಿ) ಅವರು ನೋಡಿ ತಿಳಿಯುವ ಸಾಮರ್ಥ್ಯವುಳ್ಳವರಾಗಿದ್ದರು. info
التفاسير: