ترجمهٔ معانی قرآن کریم - ترجمه‌ى كناديى - حمزه بتور

شماره صفحه:close

external-link copy
197 : 2

اَلْحَجُّ اَشْهُرٌ مَّعْلُوْمٰتٌ ۚ— فَمَنْ فَرَضَ فِیْهِنَّ الْحَجَّ فَلَا رَفَثَ وَلَا فُسُوْقَ وَلَا جِدَالَ فِی الْحَجِّ ؕ— وَمَا تَفْعَلُوْا مِنْ خَیْرٍ یَّعْلَمْهُ اللّٰهُ ؔؕ— وَتَزَوَّدُوْا فَاِنَّ خَیْرَ الزَّادِ التَّقْوٰی ؗ— وَاتَّقُوْنِ یٰۤاُولِی الْاَلْبَابِ ۟

ಹಜ್ಜ್‌ ಪರಿಚಿತ ತಿಂಗಳುಗಳಲ್ಲಾಗಿದೆ.[1] ಆದ್ದರಿಂದ ಯಾರಾದರೂ ಆ ತಿಂಗಳುಗಳಲ್ಲಿ (ಇಹ್ರಾಮ್ ಧರಿಸಿ) ಹಜ್ಜ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿದರೆ, ಅವನು ಹಜ್ಜ್‌ನ ಸಮಯದಲ್ಲಿ ಲೈಂಗಿಕ ಸಂಪರ್ಕ, ದುಷ್ಕರ್ಮ ಮತ್ತು ತರ್ಕ ಮಾಡಬಾರದು. ನೀವು ಏನೇ ಸತ್ಕರ್ಮ ಮಾಡಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ನೀವು (ಹಜ್ಜ್‌ ಯಾತ್ರೆಗಾಗಿ) ಸಿದ್ಧತೆ ಮಾಡಿಕೊಳ್ಳಿರಿ. ನಿಶ್ಚಯವಾಗಿಯೂ ನೀವು ಮಾಡಿಕೊಳ್ಳುವ ಸಿದ್ಧತೆಗಳಲ್ಲಿ ದೇವಭಯವು ಅತಿಶ್ರೇಷ್ಠವಾಗಿದೆ. ಓ ಬುದ್ಧಿವಂತರೇ! ನೀವು ನನ್ನನ್ನು ಭಯಪಡಿರಿ. info

[1] ಪರಿಚಿತ ತಿಂಗಳುಗಳು ಎಂದರೆ ಶವ್ವಾಲ್ ಮತ್ತು ದುಲ್-ಕಅದ ತಿಂಗಳುಗಳು ಮತ್ತು ದುಲ್-ಹಿಜ್ಜ ತಿಂಗಳ ಮೊದಲ ಹತ್ತು ದಿನಗಳು.

التفاسير:

external-link copy
198 : 2

لَیْسَ عَلَیْكُمْ جُنَاحٌ اَنْ تَبْتَغُوْا فَضْلًا مِّنْ رَّبِّكُمْ ؕ— فَاِذَاۤ اَفَضْتُمْ مِّنْ عَرَفٰتٍ فَاذْكُرُوا اللّٰهَ عِنْدَ الْمَشْعَرِ الْحَرَامِ ۪— وَاذْكُرُوْهُ كَمَا هَدٰىكُمْ ۚ— وَاِنْ كُنْتُمْ مِّنْ قَبْلِهٖ لَمِنَ الضَّآلِّیْنَ ۟

ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಯಾವುದೇ ಔದಾರ್ಯವನ್ನು ಅರಸುವುದರಲ್ಲಿ ನಿಮಗೆ ದೋಷವಿಲ್ಲ. ನೀವು ಅರಫಾತ್‍ನಿಂದ ತೆರಳಿದರೆ ಮಶ್‍ಅರುಲ್ ಹರಾಮ್‍ನ ಬಳಿ ಅಲ್ಲಾಹನನ್ನು ಸ್ಮರಿಸಿರಿ. ಅವನು ನಿಮಗೆ ಸನ್ಮಾರ್ಗ ತೋರಿಸಿದಂತೆಯೇ ನೀವು ಅವನನ್ನು ಸ್ಮರಿಸಿರಿ. ವಾಸ್ತವವಾಗಿ, ಇದಕ್ಕೆ ಮುಂಚೆ ನೀವು ದಾರಿ ತಪ್ಪಿದವರಾಗಿದ್ದಿರಿ. info
التفاسير:

external-link copy
199 : 2

ثُمَّ اَفِیْضُوْا مِنْ حَیْثُ اَفَاضَ النَّاسُ وَاسْتَغْفِرُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟

ನಂತರ ಜನರು ಎಲ್ಲಿಂದ ಹೊರಡುತ್ತಾರೋ ಅಲ್ಲಿಂದ ನೀವೂ ಹೊರಡಿರಿ. ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ. info
التفاسير:

external-link copy
200 : 2

فَاِذَا قَضَیْتُمْ مَّنَاسِكَكُمْ فَاذْكُرُوا اللّٰهَ كَذِكْرِكُمْ اٰبَآءَكُمْ اَوْ اَشَدَّ ذِكْرًا ؕ— فَمِنَ النَّاسِ مَنْ یَّقُوْلُ رَبَّنَاۤ اٰتِنَا فِی الدُّنْیَا وَمَا لَهٗ فِی الْاٰخِرَةِ مِنْ خَلَاقٍ ۟

ನೀವು ಹಜ್ಜ್ ಕರ್ಮಗಳನ್ನು ಪೂರೈಸಿದರೆ, ನಿಮ್ಮ ಪೂರ್ವಜರನ್ನು ಸ್ಮರಿಸುವಂತೆಯೇ ಅಥವಾ ಅದಕ್ಕಿಂತಲೂ ತೀವ್ರವಾಗಿ ಅಲ್ಲಾಹನನ್ನು ಸ್ಮರಿಸಿರಿ. ಜನರಲ್ಲಿ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ದಯಪಾಲಿಸು.” ಅಂತಹವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. info
التفاسير:

external-link copy
201 : 2

وَمِنْهُمْ مَّنْ یَّقُوْلُ رَبَّنَاۤ اٰتِنَا فِی الدُّنْیَا حَسَنَةً وَّفِی الْاٰخِرَةِ حَسَنَةً وَّقِنَا عَذَابَ النَّارِ ۟

ಇತರ ಕೆಲವರು ಹೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು.” info
التفاسير:

external-link copy
202 : 2

اُولٰٓىِٕكَ لَهُمْ نَصِیْبٌ مِّمَّا كَسَبُوْا ؕ— وَاللّٰهُ سَرِیْعُ الْحِسَابِ ۟

ಅವರಿಗೆ ಅವರು ಮಾಡಿದ ಕರ್ಮಗಳ ಪಾಲಿದೆ. ಅಲ್ಲಾಹು ಶೀಘ್ರವಾಗಿ ವಿಚಾರಣೆ ಮಾಡುವವನಾಗಿದ್ದಾನೆ. info
التفاسير: