ترجمهٔ معانی قرآن کریم - ترجمه‌ى كناديى - حمزه بتور

ಅಲ್- ಮಸದ್

external-link copy
1 : 111

تَبَّتْ یَدَاۤ اَبِیْ لَهَبٍ وَّتَبَّ ۟ؕ

ಅಬೂಲಹಬನ[1] ಎರಡೂ ಕೈಗಳು ನಾಶವಾದವು. ಅವನು ಕೂಡ ನಾಶವಾದನು. info

[1] ಅಬೂಲಹಬ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದೆಯ ಸಹೋದರ. ಆತ ಇಸ್ಲಾಮಿನ ಮತ್ತು ಮುಸ್ಲಿಮರ ಕಡು ವೈರಿಯಾಗಿದ್ದ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧರ್ಮಪ್ರಚಾರ ಮಾಡಲು ಹೋದಲ್ಲೆಲ್ಲಾ ಈತ ಅವರನ್ನು ಹಿಂಬಾಲಿಸಿ, ಅವನು ಸುಳ್ಳ ಅವನ ಮಾತನ್ನು ಕೇಳಬೇಡಿ ಎನ್ನುತ್ತಿದ್ದ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಕುಟುಂಬದವನ್ನು ಕರೆದು ಅವರಿಗೆ ಏಕದೇವವಿಶ್ವಾಸವನ್ನು ಬೋಧಿಸಿದಾಗ ಈತ ಕೋಪದಿಂದ ಮಣ್ಣು ಬಾಚಿ ಎಸೆದು “ಓ ಮುಹಮ್ಮದ್, ನೀನು ನಾಶವಾಗಿ ಹೋಗು” ಎಂದಿದ್ದ. ಇದಕ್ಕೆ ಉತ್ತರವಾಗಿ ಈ ಅಧ್ಯಾಯವು ಅವತೀರ್ಣವಾಯಿತು.

التفاسير:

external-link copy
2 : 111

مَاۤ اَغْنٰی عَنْهُ مَالُهٗ وَمَا كَسَبَ ۟ؕ

ಅವನ ಆಸ್ತಿ ಅಥವಾ ಅವನ ಸಂಪಾದನೆ ಅವನ ಪ್ರಯೋಜನಕ್ಕೆ ಬರಲಿಲ್ಲ. info
التفاسير:

external-link copy
3 : 111

سَیَصْلٰی نَارًا ذَاتَ لَهَبٍ ۟ۙ

ಅವನು ಸದ್ಯವೇ ಜ್ವಲಿಸುವ ನರಕವನ್ನು ಪ್ರವೇಶಿಸುವನು. info
التفاسير:

external-link copy
4 : 111

وَّامْرَاَتُهٗ ؕ— حَمَّالَةَ الْحَطَبِ ۟ۚ

ಸೌದೆ ಹೊರುವವಳಾದ ಅವನ ಹೆಂಡತಿಯು ಕೂಡ (ಅವನೊಡನೆ ಪ್ರವೇಶಿಸುವಳು).[1] info

[1] ಅಬೂಲಹಬನ ಹೆಂಡತಿ ಉಮ್ಮು ಜಮೀಲ್ ಇಸ್ಲಾಮನ್ನು ದ್ವೇಷಿಸುವುದರಲ್ಲಿ ಗಂಡನಿಗೆ ಯಾವುದೇ ವಿಧದಲ್ಲೂ ಕಡಿಮೆಯಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡೆಯುವ ದಾರಿಯಲ್ಲಿ ಆಕೆ ಕಸ-ಕಡ್ಡಿಗಳನ್ನು ಮತ್ತು ಮುಳ್ಳುಗಳನ್ನು ಎಸೆಯುತ್ತಿದ್ದಳು. ನರಕದಲ್ಲಿ ಗಂಡ ಉರಿಯುವಾಗ ಈಕೆ ಆ ಬೆಂಕಿಗೆ ಸೌದೆಗಳನ್ನು ತಂದು ಸುರಿದು ಬೆಂಕಿ ಇನ್ನಷ್ಟು ಜ್ವಾಲೆಗಳೊಂದಿಗೆ ಉರಿಯುವಂತೆ ಮಾಡುತ್ತಾಳೆ ಎಂದು ಕೆಲವರು ಇದನ್ನು ವ್ಯಾಖ್ಯಾನಿಸಿದ್ದಾರೆ.

التفاسير:

external-link copy
5 : 111

فِیْ جِیْدِهَا حَبْلٌ مِّنْ مَّسَدٍ ۟۠

ಅವಳ ಕೊರಳಲ್ಲಿ ಖರ್ಜೂರ ಮರದ ನಾರಿನಿಂದ ತಯಾರಿಸಿದ ಹಗ್ಗವಿರುವುದು. info
التفاسير: