ترجمهٔ معانی قرآن کریم - ترجمه‌ى كنادى ـ بشير ميسورى

external-link copy
38 : 7

قَالَ ادْخُلُوْا فِیْۤ اُمَمٍ قَدْ خَلَتْ مِنْ قَبْلِكُمْ مِّنَ الْجِنِّ وَالْاِنْسِ فِی النَّارِ ؕ— كُلَّمَا دَخَلَتْ اُمَّةٌ لَّعَنَتْ اُخْتَهَا ؕ— حَتّٰۤی اِذَا ادَّارَكُوْا فِیْهَا جَمِیْعًا ۙ— قَالَتْ اُخْرٰىهُمْ لِاُوْلٰىهُمْ رَبَّنَا هٰۤؤُلَآءِ اَضَلُّوْنَا فَاٰتِهِمْ عَذَابًا ضِعْفًا مِّنَ النَّارِ ؕ۬— قَالَ لِكُلٍّ ضِعْفٌ وَّلٰكِنْ لَّا تَعْلَمُوْنَ ۟

ಅಲ್ಲಾಹನು ಹೇಳುವನು: ನಿಮಗಿಂತ ಮುಂಚೆ ಗತಿಸಿದ ಯಕ್ಷ ಮತ್ತು ಮನುಷ್ಯ ಸತ್ಯನಿಷೇಧಿ ಸಮುದಾಯದೊಂದಿಗೆ ನೀವು ನರಕವನ್ನು ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವು ನರಕವನ್ನು ಪ್ರವೇಶಿಸುವಾಗ ತನಗಿಂತ ಮುಂಚೆ ಬಂದ ಇನ್ನೊಂದು ಸಮುದಾಯವನ್ನು ಶಪಿಸುವುದು ಅವರೆಲ್ಲರನ್ನು ಅಲ್ಲಿ ಒಟ್ಟು ಸೇರಿಸಲಾದಾಗ ಅವರ ಪೈಕಿ ನಂತರ ಬಂದವರು ತಮಗಿಂತ ಮೊದಲು ಬಂದವರ ಕುರಿತು ಹೇಳುವರು: ಓ ನಮ್ಮ ಪ್ರಭು, ನಮ್ಮನ್ನು ದಾರಿಗೆಡಿಸಿದವರು ಇವರೇ. ಆದ್ದರಿಂದ ನೀನು ಅವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು. ಅಲ್ಲಾಹನು ಹೇಳುವನು: ಪ್ರತಿಯೊಬ್ಬರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ಅರಿವಿಲ್ಲ. info
التفاسير: