ترجمهٔ معانی قرآن کریم - ترجمه‌ى كنادى ـ بشير ميسورى

external-link copy
143 : 7

وَلَمَّا جَآءَ مُوْسٰی لِمِیْقَاتِنَا وَكَلَّمَهٗ رَبُّهٗ ۙ— قَالَ رَبِّ اَرِنِیْۤ اَنْظُرْ اِلَیْكَ ؕ— قَالَ لَنْ تَرٰىنِیْ وَلٰكِنِ انْظُرْ اِلَی الْجَبَلِ فَاِنِ اسْتَقَرَّ مَكَانَهٗ فَسَوْفَ تَرٰىنِیْ ۚ— فَلَمَّا تَجَلّٰی رَبُّهٗ لِلْجَبَلِ جَعَلَهٗ دَكًّا وَّخَرَّ مُوْسٰی صَعِقًا ۚ— فَلَمَّاۤ اَفَاقَ قَالَ سُبْحٰنَكَ تُبْتُ اِلَیْكَ وَاَنَا اَوَّلُ الْمُؤْمِنِیْنَ ۟

ಮತ್ತು ನಮ್ಮ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪ್ರಭು ಅವರೊಂದಿಗೆ ಮಾತನಾಡಿದಾಗ ಹೇಳಿದರು: ನನ್ನ ಪ್ರಭೂ, ನನಗೆ ನಿನ್ನ ದರ್ಶನವನ್ನು ನೀಡು, ನಾನು ನಿನ್ನನ್ನೊಮ್ಮೆ ನೋಡಬೇಕು. ಆಗ ಹೇಳಲಾಯಿತು: ನೀನು ನನ್ನನ್ನು ಎಂದಿಗೂ ನೋಡಲಾರೆ. ಆದರೆ ನೀನು ಆ ಪರ್ವತದೆಡೆಗೆ ನೋಡುತ್ತಿರು. ಅದು ಅದರ ಸ್ಥಳದಲ್ಲಿಯೇ ದೃಢವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ. ಹಾಗೆ ಅವರ ಪ್ರಭು ಪರ್ವತಕ್ಕೆ ತನ್ನ ದಿವ್ಯ ಪ್ರಕಾಶವನ್ನು ಬೀರಿದಾಗ ಅದು ಪುಡಿಗಟ್ಟಿ ಬಿಟ್ಟಿತು ಮತ್ತು ಮೂಸಾ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ನಂತರ ಅವರು ಪ್ರಜ್ಞೆಗೆ ಬಂದಾಗ ಹೇಳಿದರು: ನಿಸ್ಸಂಶಯವಾಗಿಯು ನಾನು ನಿನ್ನ ಸನ್ನಿಧಿಯಲ್ಲಿ ಪಶ್ಚಾತ್ತಾಪ ಹೊಂದಿ ಮರಳಿರುವೆನು ಮತ್ತು ಎಲ್ಲರಿಗಿಂತ ಮೊದಲು ನಿನ್ನ ಮೇಲೆ ಸತ್ಯವಿಶ್ವಾಸ ಕೈಗೊಂಡಿರುವೆನು. info
التفاسير: