ترجمهٔ معانی قرآن کریم - ترجمه‌ى كنادى ـ بشير ميسورى

شماره صفحه:close

external-link copy
61 : 43

وَاِنَّهٗ لَعِلْمٌ لِّلسَّاعَةِ فَلَا تَمْتَرُنَّ بِهَا وَاتَّبِعُوْنِ ؕ— هٰذَا صِرَاطٌ مُّسْتَقِیْمٌ ۟

ನಿಶ್ಚಯವಾಗಿಯು ಈಸಾ ಲೋಕಾಂತ್ಯದ ಒಂದು ಕುರುಹು ಆಗಿದ್ದಾರೆ. ಆದ್ದರಿಂದ ನೀವು ಅದರ ಕುರಿತು ಸಂದೇಹಕ್ಕೊಳಗಾಗಬೇಡಿರಿ ಮತ್ತು ನನ್ನನ್ನು ಅನುಸರಿಸಿರಿ. ಇದು ಋಜುವಾದ ಮಾರ್ಗವಾಗಿದೆ. info
التفاسير:

external-link copy
62 : 43

وَلَا یَصُدَّنَّكُمُ الشَّیْطٰنُ ۚ— اِنَّهٗ لَكُمْ عَدُوٌّ مُّبِیْنٌ ۟

ಶೈತಾನನು ನಿಮ್ಮನ್ನು ಈ ಮಾರ್ಗದಿಂದ ತಡೆಯದಿರಲಿ. ನಿಜವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ. info
التفاسير:

external-link copy
63 : 43

وَلَمَّا جَآءَ عِیْسٰی بِالْبَیِّنٰتِ قَالَ قَدْ جِئْتُكُمْ بِالْحِكْمَةِ وَلِاُبَیِّنَ لَكُمْ بَعْضَ الَّذِیْ تَخْتَلِفُوْنَ فِیْهِ ۚ— فَاتَّقُوا اللّٰهَ وَاَطِیْعُوْنِ ۟

ಈಸಾ ಸುಸ್ಪಷ್ಟ ದೃಷ್ಟಾಂತಗಳನ್ನು ತಂದು ಹೇಳಿದರು: ನಾನು ನಿಮ್ಮ ಬಳಿಗೆ ಸುಜ್ಞಾನವನ್ನು ತಂದಿರುವೆನು ಮತ್ತು ನೀವು ಭಿನ್ನತೆ ತೋರುತ್ತಿರುವ ಕೆಲವು ವಿಷಯಗಳನ್ನು ನಿಮಗೆ ಸ್ಪಷ್ಟ ಪಡಿಸಲೆಂದು ಬಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಹಾಗೂ ನನ್ನನ್ನು ಅನುಸರಿಸಿರಿ. info
التفاسير:

external-link copy
64 : 43

اِنَّ اللّٰهَ هُوَ رَبِّیْ وَرَبُّكُمْ فَاعْبُدُوْهُ ؕ— هٰذَا صِرَاطٌ مُّسْتَقِیْمٌ ۟

ಖಂಡಿತವಾಗಿಯೂ ನನ್ನ ಮತ್ತು ನಿಮ್ಮ ಪ್ರಭುವು ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವು ಅವನನ್ನು ಆರಾಧಿಸಿರಿ. ಇದು ಋಜುವಾದ ಮಾರ್ಗವಾಗಿದೆ. info
التفاسير:

external-link copy
65 : 43

فَاخْتَلَفَ الْاَحْزَابُ مِنْ بَیْنِهِمْ ۚ— فَوَیْلٌ لِّلَّذِیْنَ ظَلَمُوْا مِنْ عَذَابِ یَوْمٍ اَلِیْمٍ ۟

ಅನಂತರ ಅನೇಕ ಸಮೂಹಗಳು ಪರಸ್ಪರ ಭಿನ್ನಾಭಿಪ್ರಾಯ ತಾಳಿದವು. ಆದ್ದರಿಂದ ಆ ಅಕ್ರಮಿಗಳಿಗೆ ಒಂದು ವೇದನಾಜನಕ ದಿನದ ಯಾತನೆಯ ವಿನಾಶವಿದೆ. info
التفاسير:

external-link copy
66 : 43

هَلْ یَنْظُرُوْنَ اِلَّا السَّاعَةَ اَنْ تَاْتِیَهُمْ بَغْتَةً وَّهُمْ لَا یَشْعُرُوْنَ ۟

ಅವರಿಗೆ ಸುದ್ಧಿಯೇ ಇಲ್ಲದಂತೆ ಹಠಾತ್ತನೆ ಅವರ ಮೇಲೆ ಪುನರುತ್ಥಾನದ ದಿನವು ಬಂದೆರಗುವುದನ್ನು ಅವರು ಕಾಯುತ್ತಿದ್ದಾರೆಯೇ? info
التفاسير:

external-link copy
67 : 43

اَلْاَخِلَّآءُ یَوْمَىِٕذٍ بَعْضُهُمْ لِبَعْضٍ عَدُوٌّ اِلَّا الْمُتَّقِیْنَ ۟ؕ۠

ಆ ದಿನ ಭಯಭಕ್ತಿಯುಳ್ಳವರ ಹೊರತು ಆಪ್ತ ಮಿತ್ರರಾಗಿದ್ದವರು ಸಹ ಪರಸ್ಪರ ಶತ್ರುಗಳಾಗಿ ಬಿಡುವರು. info
التفاسير:

external-link copy
68 : 43

یٰعِبَادِ لَا خَوْفٌ عَلَیْكُمُ الْیَوْمَ وَلَاۤ اَنْتُمْ تَحْزَنُوْنَ ۟ۚ

ಓ ನನ್ನ ದಾಸರೇ, ಇಂದು ನಿಮಗೆ ಯಾವ ಭಯವು ಇಲ್ಲ. ವ್ಯಥೆಪಡುವ ಅವಶ್ಯಕತೆಯು ಇಲ್ಲ. info
التفاسير:

external-link copy
69 : 43

اَلَّذِیْنَ اٰمَنُوْا بِاٰیٰتِنَا وَكَانُوْا مُسْلِمِیْنَ ۟ۚ

ಅವರು ನಮ್ಮ ದೃಷ್ಟಾಂತಗಳ ಮೇಲೆ ವಿಶ್ವಾಸವಿರಿಸಿದವರು ಮತ್ತು ವಿಧೇಯರೂ ಆಗಿದ್ದರು. info
التفاسير:

external-link copy
70 : 43

اُدْخُلُوا الْجَنَّةَ اَنْتُمْ وَاَزْوَاجُكُمْ تُحْبَرُوْنَ ۟

ನೀವೂ ಮತ್ತು ನಿಮ್ಮ ಪತ್ನಿಯರು ಸ್ವರ್ಗವನ್ನು ಪ್ರವೇಶಿಸಿರಿ. ನಿಮ್ಮನ್ನು ಸಂತೋಷಪಡಿಸಲಾಗುವುದು. info
التفاسير:

external-link copy
71 : 43

یُطَافُ عَلَیْهِمْ بِصِحَافٍ مِّنْ ذَهَبٍ وَّاَكْوَابٍ ۚ— وَفِیْهَا مَا تَشْتَهِیْهِ الْاَنْفُسُ وَتَلَذُّ الْاَعْیُنُ ۚ— وَاَنْتُمْ فِیْهَا خٰلِدُوْنَ ۟ۚ

ಬಂಗಾರದ ತಟ್ಟೆಗಳು ಹಾಗೂ ಲೋಟಗಳನ್ನು ಅವರ ಸುತ್ತ ತರಲಾಗುವುದು ಮತ್ತು ಅವರು ಮನ ಬಯಸುವ ಹಾಗೂ ಕಣ್ಣುಗಳು ಆನಂದಿಸುವ ವಸ್ತುಗಳೂ ಅಲ್ಲಿರುವುವು ಮತ್ತು ನೀವು ಅದರಲ್ಲಿ ಶಾಶ್ವತವಾಗಿರುವಿರಿ. info
التفاسير:

external-link copy
72 : 43

وَتِلْكَ الْجَنَّةُ الَّتِیْۤ اُوْرِثْتُمُوْهَا بِمَا كُنْتُمْ تَعْمَلُوْنَ ۟

ನೀವು ಮಾಡುತ್ತಿದ್ದಂತಹ ಕರ್ಮಗಳ ನಿಮಿತ್ತ ನೀವು ವಾರೀಸು ಪಡೆದಿರುವ ಸ್ವರ್ಗ ಇದುವೇ ಆಗಿದೆ. info
التفاسير:

external-link copy
73 : 43

لَكُمْ فِیْهَا فَاكِهَةٌ كَثِیْرَةٌ مِّنْهَا تَاْكُلُوْنَ ۟

ಅಲ್ಲಿ ನಿಮಗೆ ಧಾರಾಳ ಹಣ್ಣು ಹಂಪಲುಗಳಿವೆ. ಅವುಗಳನ್ನು ನೀವು ತಿನ್ನುವಿರಿ. info
التفاسير: