ترجمهٔ معانی قرآن کریم - ترجمه‌ى كنادى ـ بشير ميسورى

شماره صفحه:close

external-link copy
90 : 23

بَلْ اَتَیْنٰهُمْ بِالْحَقِّ وَاِنَّهُمْ لَكٰذِبُوْنَ ۟

ಹಾಗಲ್ಲ! ನಾವು ಅವರ ಬಳಿಗೆ ಸತ್ಯವನ್ನು ತಂದಿದ್ದೇವೆ ಮತ್ತು ನಿಸ್ಸಂದೇಹವಾಗಿಯೂ ಅವರು ಸುಳ್ಳರಾಗಿದ್ದಾರೆ. info
التفاسير:

external-link copy
91 : 23

مَا اتَّخَذَ اللّٰهُ مِنْ وَّلَدٍ وَّمَا كَانَ مَعَهٗ مِنْ اِلٰهٍ اِذًا لَّذَهَبَ كُلُّ اِلٰهٍ بِمَا خَلَقَ وَلَعَلَا بَعْضُهُمْ عَلٰی بَعْضٍ ؕ— سُبْحٰنَ اللّٰهِ عَمَّا یَصِفُوْنَ ۟ۙ

ಅಲ್ಲಾಹನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ, ಅವನೊಂದಿಗೆ ಬೇರೆ ದೇವನೂ ಇಲ್ಲ. ಅನ್ಯಥಾ ಪ್ರತಿಯೊಬ್ಬ ದೇವನೂ ತನ್ನ ಸೃಷ್ಟಿಯನ್ನು ತೆಗೆದುಕೊಂಡು ಬೇರ್ಪಡುತ್ತಿದ್ದನು. ಮತ್ತು ಪ್ರತಿಯೊಬ್ಬನೂ ಇನ್ನೊಬ್ಬನ ಮೇಲೆ ದಂಡೆತ್ತಿ ಹೋಗುತ್ತಿದ್ದನು. ಅವರು ಹೇಳುತ್ತಿರುವ ಮಾತುಗಳಿಂದ ಅಲ್ಲಾಹನು ಪರಮಪಾವನನು. info
التفاسير:

external-link copy
92 : 23

عٰلِمِ الْغَیْبِ وَالشَّهَادَةِ فَتَعٰلٰی عَمَّا یُشْرِكُوْنَ ۟۠

ಗೋಚರ ಹಾಗೂ ಅಗೋಚರಗಳ ಜ್ಞಾನಿಯವನು ಮತ್ತು ಅವರು ಕಲ್ಪಿಸುತ್ತಿರುವ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು. info
التفاسير:

external-link copy
93 : 23

قُلْ رَّبِّ اِمَّا تُرِیَنِّیْ مَا یُوْعَدُوْنَ ۟ۙ

(ಓ ಪೈಗಂಬರರೇ) ಹೀಗೆ ಪ್ರಾರ್ಥಿಸಿರಿ: ಓ ನನ್ನ ಪ್ರಭುವೇ, ಅವರಿಗೆ ಎಚ್ಚರಿಕೆ ನೀಡಲಾಗುತ್ತಿರುವುದನ್ನು ನೀನು ನನ್ನ ಉಪಸ್ಥಿತಿಯಲ್ಲಿ ತರುವುದಾದರೆ. info
التفاسير:

external-link copy
94 : 23

رَبِّ فَلَا تَجْعَلْنِیْ فِی الْقَوْمِ الظّٰلِمِیْنَ ۟

ನೀನು ನನ್ನನ್ನು ಅಕ್ರಮಿ ಜನರಲ್ಲಿ ಸೇರಿಸದಿರು. ಪ್ರಭುವೇ. info
التفاسير:

external-link copy
95 : 23

وَاِنَّا عَلٰۤی اَنْ نُّرِیَكَ مَا نَعِدُهُمْ لَقٰدِرُوْنَ ۟

ಖಂಡಿತ ನಾವು ಅವರಿಗೆ ಎಚ್ಚರಿಕೆ ನೀಡುತ್ತಿರುವುದನ್ನು ನಿಮಗೆ ತೋರಿಸಿ ಕೊಡಲು ಶಕ್ತರಿದ್ದೇವೆ. info
التفاسير:

external-link copy
96 : 23

اِدْفَعْ بِالَّتِیْ هِیَ اَحْسَنُ السَّیِّئَةَ ؕ— نَحْنُ اَعْلَمُ بِمَا یَصِفُوْنَ ۟

(ಓ ಪೈಗಂಬರರೇ) ಕೆಡುಕನ್ನು ಅತ್ಯುತ್ತಮ ರೀತಿಯಲ್ಲಿ ನೀಗಿಸಿರಿ. ಅವರು ವರ್ಣಿಸಿ ಹೇಳುತ್ತಿರುವುದನ್ನು ನಾವು ಚೆನ್ನಾಗಿ ಬಲ್ಲೆವು. info
التفاسير:

external-link copy
97 : 23

وَقُلْ رَّبِّ اَعُوْذُ بِكَ مِنْ هَمَزٰتِ الشَّیٰطِیْنِ ۟ۙ

ಮತ್ತು ಹೀಗೆ ಪ್ರಾರ್ಥಿಸಿರಿ: ನನ್ನ ಪ್ರಭುವೇ, ನಾನು ಶೈತಾನರ ದುಷ್ಪೆçÃರಣೆಗಳಿಂದ ನಿನ್ನ ಅಭಯ ಯಾಚಿಸುತ್ತೇನೆ. info
التفاسير:

external-link copy
98 : 23

وَاَعُوْذُ بِكَ رَبِّ اَنْ یَّحْضُرُوْنِ ۟

ನನ್ನ ಪ್ರಭುವೇ, ಅವರು ನನ್ನ ಬಳಿಗೆ ಹಾಜರಾಗುವುದರಿಂದಲೂ ನಿನ್ನ ಅಭಯ ಯಾಚಿಸುತ್ತೇನೆ. info
التفاسير:

external-link copy
99 : 23

حَتّٰۤی اِذَا جَآءَ اَحَدَهُمُ الْمَوْتُ قَالَ رَبِّ ارْجِعُوْنِ ۟ۙ

ಕೊನೆಗೆ ಅವರಲ್ಲಿ ಯಾರಿಗಾದರೂ ಮರಣವು ಬಂದು ಬಿಟ್ಟರೆ ಹೇಳುತ್ತಾನೆ: ನನ್ನ ಪ್ರಭುವೇ, ನನ್ನನ್ನು ಮರಳಿಸಿ ಬಿಡು. info
التفاسير:

external-link copy
100 : 23

لَعَلِّیْۤ اَعْمَلُ صَالِحًا فِیْمَا تَرَكْتُ كَلَّا ؕ— اِنَّهَا كَلِمَةٌ هُوَ قَآىِٕلُهَا ؕ— وَمِنْ وَّرَآىِٕهِمْ بَرْزَخٌ اِلٰی یَوْمِ یُبْعَثُوْنَ ۟

ನಾನು ತೊರೆದಿರುವ ಸತ್ಕರ್ಮಗಳನ್ನು ಮಾಡಬಹುದಲ್ಲ, ಖಂಡಿತ ಇಲ್ಲ, ಇದು ಕೇವಲ ಅವನಾಡುವ ಮಾತು ಮಾತ್ರ. ಅವರು ಪುನಃ ಜೀವಂತಗೊಳಿಸಿ ಎಬ್ಬಿಸಲಾಗುವ ದಿನದವರೆಗೆ ಅವರ ಹಿಂದೆ ಒಂದು ತಡೆಯಿದೆ. info
التفاسير:

external-link copy
101 : 23

فَاِذَا نُفِخَ فِی الصُّوْرِ فَلَاۤ اَنْسَابَ بَیْنَهُمْ یَوْمَىِٕذٍ وَّلَا یَتَسَآءَلُوْنَ ۟

ಹಾಗೆಯೇ ಕಹಳೆಯು ಊದಲಾಗುವ ದಿನ ಅವರ ನಡುವೆ ಯಾವುದೇ ಸಂಬAಧವಿರದು. ಅವರು ಪರಸ್ಪರ ವಿಚಾರಿಸಿಕೊಳ್ಳುವುದೂ ಇಲ್ಲ. info
التفاسير:

external-link copy
102 : 23

فَمَنْ ثَقُلَتْ مَوَازِیْنُهٗ فَاُولٰٓىِٕكَ هُمُ الْمُفْلِحُوْنَ ۟

ಇನ್ನು ಯಾರ ತುಲ ಭಾರವಾಗಿರುವುದೋ ಅವರು ವಿಜಯಶಾಲಿಗಳಾಗುವರು. info
التفاسير:

external-link copy
103 : 23

وَمَنْ خَفَّتْ مَوَازِیْنُهٗ فَاُولٰٓىِٕكَ الَّذِیْنَ خَسِرُوْۤا اَنْفُسَهُمْ فِیْ جَهَنَّمَ خٰلِدُوْنَ ۟ۚ

ಮತ್ತು ಯಾರ ತುಲ ಹಗುರವಾಗಿರುವುದೋ ಅವರೇ ತಮ್ಮನ್ನು ತಾವೇ ನಷ್ಟ ಮಾಡಿಕೊಂಡವರು. ಅವರು ನರಕದಲ್ಲಿ ಶಾಶ್ವತವಾಗಿರುವವರು. info
التفاسير:

external-link copy
104 : 23

تَلْفَحُ وُجُوْهَهُمُ النَّارُ وَهُمْ فِیْهَا كٰلِحُوْنَ ۟

ಅವರ ಮುಖಗಳನ್ನು ಅಗ್ನಿಯು ಸುಡುತ್ತಿರುವುದು ಮತ್ತು ಅವರು ಅದರಲ್ಲಿ ವಿಕಾರ ರೂಪಿಗಳಾಗಿರುವರು. info
التفاسير: