আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

external-link copy
27 : 8

یٰۤاَیُّهَا الَّذِیْنَ اٰمَنُوْا لَا تَخُوْنُوا اللّٰهَ وَالرَّسُوْلَ وَتَخُوْنُوْۤا اَمٰنٰتِكُمْ وَاَنْتُمْ تَعْلَمُوْنَ ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡಬೇಡಿ.[1] ನಿಮ್ಮ ಮೇಲೆ ವಿಶ್ವಾಸವಿಡಲಾದ ವಿಷಯಗಳಲ್ಲೂ ವಿಶ್ವಾಸದ್ರೋಹ ಮಾಡಬೇಡಿ. (ಅದರ ಫಲಿತಾಂಶವೇನೆಂದು) ನೀವು ತಿಳಿದಿದ್ದೂ ಸಹ. info

[1] ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಶ್ವಾಸದ್ರೋಹ ಮಾಡುವುದು ಎಂದರೆ ಜನರ ಮುಂಭಾಗದಲ್ಲಿ ಅವರ ಆಜ್ಞೆಗಳನ್ನು ಅನುಸರಿಸುವುದು ಮತ್ತು ಏಕಾಂಗಿಯಾಗಿರುವಾಗ ಅಥವಾ ಖಾಸಗಿ ಜೀವನದಲ್ಲಿ ಅವರ ಆಜ್ಞೆಗಳನ್ನು ಧಿಕ್ಕರಿಸುವುದು. ಅದೇ ರೀತಿ ಅಲ್ಲಾಹು ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಡ್ಡಾಯಗೊಳಿಸಿದ ಕಾರ್ಯವನ್ನು ಬಿಟ್ಟುಬಿಡುವುದು ಮತ್ತು ಅವರು ವಿರೋಧಿಸಿದ ಕಾರ್ಯವನ್ನು ಮಾಡುವುದು.

التفاسير: