আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

পৃষ্ঠা নং:close

external-link copy
46 : 8

وَاَطِیْعُوا اللّٰهَ وَرَسُوْلَهٗ وَلَا تَنَازَعُوْا فَتَفْشَلُوْا وَتَذْهَبَ رِیْحُكُمْ وَاصْبِرُوْا ؕ— اِنَّ اللّٰهَ مَعَ الصّٰبِرِیْنَ ۟ۚ

ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ಭಿನ್ನರಾಗಬೇಡಿ. ಹಾಗೇನಾದರೂ ಆದರೆ ನೀವು ಧೈರ್ಯಗೆಡುವಿರಿ ಮತ್ತು ನಿಮ್ಮ ಶಕ್ತಿ ಕುಸಿಯಬಹುದು. ಸ್ಥೈರ್ಯದಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ. info
التفاسير:

external-link copy
47 : 8

وَلَا تَكُوْنُوْا كَالَّذِیْنَ خَرَجُوْا مِنْ دِیَارِهِمْ بَطَرًا وَّرِئَآءَ النَّاسِ وَیَصُدُّوْنَ عَنْ سَبِیْلِ اللّٰهِ ؕ— وَاللّٰهُ بِمَا یَعْمَلُوْنَ مُحِیْطٌ ۟

ದರ್ಪದಿಂದ ಜನರ ಮುಂದೆ ಪ್ರದರ್ಶನ ಮಾಡುತ್ತಾ ಮತ್ತು ಅಲ್ಲಾಹನ ಮಾರ್ಗದಿಂದ (ಜನರನ್ನು) ತಡೆಯುವುದಕ್ಕಾಗಿ ತಮ್ಮ ಮನೆಗಳಿಂದ ಹೊರಟವರಂತೆ ನೀವಾಗಬೇಡಿ.[1] ಅವರು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ. info

[1] ಮಕ್ಕಾದ ಸತ್ಯನಿಷೇಧಿಗಳು ತಮ್ಮ ವ್ಯಾಪಾರ ತಂಡವನ್ನು ಕಾಪಾಡುವುದಕ್ಕಾಗಿ ಮತ್ತು ಮುಸಲ್ಮಾನರನ್ನು ನಿರ್ನಾಮ ಮಾಡುವುದಕ್ಕಾಗಿ ಮಕ್ಕಾದಿಂದ ಹೊರಟ ಸ್ಥಿತಿಯನ್ನು ಇಲ್ಲಿ ವಿವರಿಸಲಾಗಿದೆ.

التفاسير:

external-link copy
48 : 8

وَاِذْ زَیَّنَ لَهُمُ الشَّیْطٰنُ اَعْمَالَهُمْ وَقَالَ لَا غَالِبَ لَكُمُ الْیَوْمَ مِنَ النَّاسِ وَاِنِّیْ جَارٌ لَّكُمْ ۚ— فَلَمَّا تَرَآءَتِ الْفِئَتٰنِ نَكَصَ عَلٰی عَقِبَیْهِ وَقَالَ اِنِّیْ بَرِیْٓءٌ مِّنْكُمْ اِنِّیْۤ اَرٰی مَا لَا تَرَوْنَ اِنِّیْۤ اَخَافُ اللّٰهَ ؕ— وَاللّٰهُ شَدِیْدُ الْعِقَابِ ۟۠

ಶೈತಾನನು ಅವರಿಗೆ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ ಸಂದರ್ಭ. ಅವನು (ಶೈತಾನನು) ಹೇಳಿದನು: “ಇಂದು ಜನರಲ್ಲಿ ಯಾರಿಗೂ ನಿಮ್ಮನ್ನು ಸದೆಬಡಿಯಲು ಸಾಧ್ಯವಿಲ್ಲ. ನಿಶ್ಚಯವಾಗಿಯೂ ನಾನು ನಿಮ್ಮ ರಕ್ಷಣೆಗಿದ್ದೇನೆ.” ಆದರೆ ಎರಡು ಬಣಗಳು ಪರಸ್ಪರ ಮುಖಾಮುಖಿಯಾದಾಗ ಅವನು ಬೆನ್ನು ತಿರುಗಿಸಿ ಓಡುತ್ತಾ ಹೇಳಿದನು: “ನಾನು ನಿಮ್ಮಿಂದ ಸಂಪೂರ್ಣ ಮುಕ್ತನಾಗಿದ್ದೇನೆ. ನಿಮಗೆ ನೋಡಲು ಸಾಧ್ಯವಾಗದ ದೃಶ್ಯಗಳು ನನಗೆ ಕಾಣುತ್ತಿವೆ. ನಿಶ್ಚಯವಾಗಿಯೂ ನಾನು ಅಲ್ಲಾಹನನ್ನು ಭಯಪಡುತ್ತೇನೆ. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.” info
التفاسير:

external-link copy
49 : 8

اِذْ یَقُوْلُ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ غَرَّ هٰۤؤُلَآءِ دِیْنُهُمْ ؕ— وَمَنْ یَّتَوَكَّلْ عَلَی اللّٰهِ فَاِنَّ اللّٰهَ عَزِیْزٌ حَكِیْمٌ ۟

“ಇವರನ್ನು ಇವರ ಧರ್ಮವು ಮೋಸಗೊಳಿಸಿದೆ” ಎಂದು ಕಪಟವಿಶ್ವಾಸಿಗಳು ಮತ್ತು ಹೃದಯದಲ್ಲಿ ರೋಗವಿರುವವರು ಹೇಳುತ್ತಿದ್ದ ಸಂದರ್ಭ. ಯಾರು ಅಲ್ಲಾಹನಲ್ಲಿ ಭರವಸೆಯಿಡುತ್ತಾರೋ (ಅವರಿಗೆ ಅಲ್ಲಾಹು ಸಾಕು). ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
50 : 8

وَلَوْ تَرٰۤی اِذْ یَتَوَفَّی الَّذِیْنَ كَفَرُوا الْمَلٰٓىِٕكَةُ یَضْرِبُوْنَ وُجُوْهَهُمْ وَاَدْبَارَهُمْ ۚ— وَذُوْقُوْا عَذَابَ الْحَرِیْقِ ۟

ದೇವದೂತರುಗಳು ಸತ್ಯನಿಷೇಧಿಗಳ ಆತ್ಮಗಳನ್ನು ವಶಪಡಿಸುವ ಸಂದರ್ಭವನ್ನು ನೀವು ನೋಡಿರುತ್ತಿದ್ದರೆ! ಅವರು ಅವರ ಮುಖಗಳಿಗೆ ಮತ್ತು ಬೆನ್ನುಗಳಿಗೆ ಥಳಿಸುತ್ತಾ (ಹೇಳುತ್ತಾರೆ): “ಜ್ವಲಿಸುವ ಅಗ್ನಿಯ ಶಿಕ್ಷೆಯ ರುಚಿಯನ್ನು ನೋಡಿ. info
التفاسير:

external-link copy
51 : 8

ذٰلِكَ بِمَا قَدَّمَتْ اَیْدِیْكُمْ وَاَنَّ اللّٰهَ لَیْسَ بِظَلَّامٍ لِّلْعَبِیْدِ ۟ۙ

ನಿಮ್ಮ ಕೈಗಳು ಮುಂದಕ್ಕೆ ಕಳುಹಿಸಿದ (ದುಷ್ಕರ್ಮಗಳೇ) ಇದಕ್ಕೆ ಕಾರಣ. ನಿಶ್ಚಯವಾಗಿಯೂ ಅಲ್ಲಾಹು ದಾಸರೊಡನೆ ಸ್ವಲ್ಪವೂ ಅನ್ಯಾಯ ಮಾಡುವುದಿಲ್ಲ.” info
التفاسير:

external-link copy
52 : 8

كَدَاْبِ اٰلِ فِرْعَوْنَ ۙ— وَالَّذِیْنَ مِنْ قَبْلِهِمْ ؕ— كَفَرُوْا بِاٰیٰتِ اللّٰهِ فَاَخَذَهُمُ اللّٰهُ بِذُنُوْبِهِمْ ؕ— اِنَّ اللّٰهَ قَوِیٌّ شَدِیْدُ الْعِقَابِ ۟

ಫರೋಹನ ಜನರು ಮತ್ತು ಅವರಿಗಿಂತ ಮೊದಲಿನವರ ಸ್ಥಿತಿಯಂತೆ. ಅವರು ಅಲ್ಲಾಹನ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರನ್ನು ಅವರ ಪಾಪಗಳಿಗಾಗಿ ಹಿಡಿದನು. ನಿಶ್ಚಯವಾಗಿಯೂ ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. info
التفاسير: