আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

পৃষ্ঠা নং: 172:151 close

external-link copy
171 : 7

وَاِذْ نَتَقْنَا الْجَبَلَ فَوْقَهُمْ كَاَنَّهٗ ظُلَّةٌ وَّظَنُّوْۤا اَنَّهٗ وَاقِعٌ بِهِمْ ۚ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟۠

ನಾವು ಪರ್ವತವನ್ನು ಅವರ ಮೇಲೆ ಕೊಡೆಯಂತೆ ಎತ್ತಿ ಹಿಡಿದ ಸಂದರ್ಭ. ಅದು ಅವರ ಮೇಲೆ ಬೀಳಬಹುದೆಂದು ಅವರಿಗೆ ಖಾತ್ರಿಯಾಯಿತು. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿ. ನೀವು ದೇವಭಯವುಳ್ಳವರಾಗುವುದಕ್ಕಾಗಿ.” info
التفاسير:

external-link copy
172 : 7

وَاِذْ اَخَذَ رَبُّكَ مِنْ بَنِیْۤ اٰدَمَ مِنْ ظُهُوْرِهِمْ ذُرِّیَّتَهُمْ وَاَشْهَدَهُمْ عَلٰۤی اَنْفُسِهِمْ ۚ— اَلَسْتُ بِرَبِّكُمْ ؕ— قَالُوْا بَلٰی ۛۚ— شَهِدْنَا ۛۚ— اَنْ تَقُوْلُوْا یَوْمَ الْقِیٰمَةِ اِنَّا كُنَّا عَنْ هٰذَا غٰفِلِیْنَ ۟ۙ

ನಿಮ್ಮ ಪರಿಪಾಲಕನು (ಅಲ್ಲಾಹು) ಆದಮರ ಮಕ್ಕಳಿಂದ—ಅವರ ಬೆನ್ನುಗಳಿಂದ ಅವರ ಸಂತಾನವನ್ನು ಹೊರತೆಗೆದು, ಅವರ ವಿಷಯದಲ್ಲಿ ಅವರನ್ನೇ ಸಾಕ್ಷಿ ನಿಲ್ಲಿಸಿದ ಸಂದರ್ಭ. (ಅಲ್ಲಾಹು ಕೇಳಿದನು): “ನಾನು ನಿಮ್ಮ ಪರಿಪಾಲಕನಲ್ಲವೇ?” ಅವರು ಉತ್ತರಿಸಿದರು: “ಹೌದು, ನಾವು ಸಾಕ್ಷಿಗಳಾಗಿದ್ದೇವೆ.” ನಿಶ್ಚಯವಾಗಿಯೂ ನಮಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಪುನರುತ್ಥಾನ ದಿನ ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ). info
التفاسير:

external-link copy
173 : 7

اَوْ تَقُوْلُوْۤا اِنَّمَاۤ اَشْرَكَ اٰبَآؤُنَا مِنْ قَبْلُ وَكُنَّا ذُرِّیَّةً مِّنْ بَعْدِهِمْ ۚ— اَفَتُهْلِكُنَا بِمَا فَعَلَ الْمُبْطِلُوْنَ ۟

ಅಥವಾ, “ಈ ಹಿಂದೆ ನಮ್ಮ ಪೂರ್ವಜರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಿದ್ದರು. ನಾವು ಅವರ ನಂತರದ ಸಂತಾನವಾಗಿದ್ದೇವೆ. ಆ ಮಿಥ್ಯವಾದಿಗಳು ಮಾಡಿದ ತಪ್ಪಿಗಾಗಿ ನೀನು ನಮ್ಮನ್ನು ನಾಶ ಮಾಡುವೆಯಾ?” ಎಂದು ನೀವು ಹೇಳಬಾರದೆಂದು (ಹೀಗೆ ಮಾಡಲಾಗಿದೆ). info
التفاسير:

external-link copy
174 : 7

وَكَذٰلِكَ نُفَصِّلُ الْاٰیٰتِ وَلَعَلَّهُمْ یَرْجِعُوْنَ ۟

ಈ ರೀತಿ ನಾವು ವಚನಗಳನ್ನು ವಿವರಿಸಿಕೊಡುತ್ತೇವೆ. ಅವರು (ಸತ್ಯಕ್ಕೆ) ಮರಳುವುದಕ್ಕಾಗಿ. info
التفاسير:

external-link copy
175 : 7

وَاتْلُ عَلَیْهِمْ نَبَاَ الَّذِیْۤ اٰتَیْنٰهُ اٰیٰتِنَا فَانْسَلَخَ مِنْهَا فَاَتْبَعَهُ الشَّیْطٰنُ فَكَانَ مِنَ الْغٰوِیْنَ ۟

ಅವರಿಗೆ ಒಬ್ಬ ವ್ಯಕ್ತಿಯ ಸಮಾಚಾರವನ್ನು ತಿಳಿಸಿಕೊಡಿ. ನಾವು ಅವನಿಗೆ ನಮ್ಮ ವಚನಗಳ ಜ್ಞಾನವನ್ನು ನೀಡಿದೆವು. ಆದರೆ ಅವನು ಅದರಿಂದ ನುಣುಚಿಕೊಂಡನು. ಆಗ ಶೈತಾನನು ಅವನನ್ನು ಹಿಂಬಾಲಿಸಿದನು ಮತ್ತು ಅವನು ದುರ್ಮಾರ್ಗಿಗಳಲ್ಲಿ ಸೇರಿಬಿಟ್ಟನು. info
التفاسير:

external-link copy
176 : 7

وَلَوْ شِئْنَا لَرَفَعْنٰهُ بِهَا وَلٰكِنَّهٗۤ اَخْلَدَ اِلَی الْاَرْضِ وَاتَّبَعَ هَوٰىهُ ۚ— فَمَثَلُهٗ كَمَثَلِ الْكَلْبِ ۚ— اِنْ تَحْمِلْ عَلَیْهِ یَلْهَثْ اَوْ تَتْرُكْهُ یَلْهَثْ ؕ— ذٰلِكَ مَثَلُ الْقَوْمِ الَّذِیْنَ كَذَّبُوْا بِاٰیٰتِنَا ۚ— فَاقْصُصِ الْقَصَصَ لَعَلَّهُمْ یَتَفَكَّرُوْنَ ۟

ನಾವು ಇಚ್ಛಿಸುತ್ತಿದ್ದರೆ ಆ ಜ್ಞಾನದ ಮೂಲಕ ನಾವು ಅವನನ್ನು ಉನ್ನತಿಗೇರಿಸುತ್ತಿದ್ದೆವು. ಆದರೆ ಅವನು ಭೂಮಿಗೆ ಅಂಟಿಕೊಂಡು ಸ್ವೇಚ್ಛೆಗಳನ್ನು ಹಿಂಬಾಲಿಸಿದನು. ಅವನ ಉದಾಹರಣೆಯು ಒಂದು ನಾಯಿಯಂತೆ. ನೀವು ಅದನ್ನು ಓಡಿಸಿದರೂ ಅದು ನಾಲಗೆ ಹೊರಚಾಚುತ್ತದೆ. ನೀವು ಅದನ್ನು ಅದರ ಪಾಡಿಗೆ ಬಿಟ್ಟರೂ ಅದು ನಾಲಗೆ ಹೊರಚಾಚುತ್ತದೆ. ಇದು ನಮ್ಮ ವಚನಗಳನ್ನು ನಿಷೇಧಿಸಿದವರ ಉದಾಹರಣೆಯಾಗಿದೆ. ಅವರಿಗೆ ಈ ಕಥೆಗಳನ್ನು ಹೇಳಿಕೊಡಿ. ಅವರು ಆಲೋಚಿಸುವುದಕ್ಕಾಗಿ. info
التفاسير:

external-link copy
177 : 7

سَآءَ مَثَلَا ١لْقَوْمُ الَّذِیْنَ كَذَّبُوْا بِاٰیٰتِنَا وَاَنْفُسَهُمْ كَانُوْا یَظْلِمُوْنَ ۟

ನಮ್ಮ ವಚನಗಳನ್ನು ನಿಷೇಧಿಸಿದ ಮತ್ತು ಸ್ವಯಂ ಅಕ್ರಮವೆಸಗಿದ ಜನರ ಉದಾಹರಣೆಯು ಬಹಳ ನಿಕೃಷ್ಟವಾಗಿದೆ. info
التفاسير:

external-link copy
178 : 7

مَنْ یَّهْدِ اللّٰهُ فَهُوَ الْمُهْتَدِیْ ۚ— وَمَنْ یُّضْلِلْ فَاُولٰٓىِٕكَ هُمُ الْخٰسِرُوْنَ ۟

ಅಲ್ಲಾಹು ಯಾರಿಗೆ ಸನ್ಮಾರ್ಗ ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದಾರಿತಪ್ಪಿಸುತ್ತಾನೋ ಅವರೇ ನಷ್ಟಹೊಂದಿದವರು. info
التفاسير: