আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

ಅತ್ತಲಾಕ್

external-link copy
1 : 65

یٰۤاَیُّهَا النَّبِیُّ اِذَا طَلَّقْتُمُ النِّسَآءَ فَطَلِّقُوْهُنَّ لِعِدَّتِهِنَّ وَاَحْصُوا الْعِدَّةَ ۚ— وَاتَّقُوا اللّٰهَ رَبَّكُمْ ۚ— لَا تُخْرِجُوْهُنَّ مِنْ بُیُوْتِهِنَّ وَلَا یَخْرُجْنَ اِلَّاۤ اَنْ یَّاْتِیْنَ بِفَاحِشَةٍ مُّبَیِّنَةٍ ؕ— وَتِلْكَ حُدُوْدُ اللّٰهِ ؕ— وَمَنْ یَّتَعَدَّ حُدُوْدَ اللّٰهِ فَقَدْ ظَلَمَ نَفْسَهٗ ؕ— لَا تَدْرِیْ لَعَلَّ اللّٰهَ یُحْدِثُ بَعْدَ ذٰلِكَ اَمْرًا ۟

ಓ ಪ್ರವಾದಿಯವರೇ! (ನಿಮ್ಮ ಅನುಯಾಯಿಗಳೊಡನೆ ಹೇಳಿರಿ): “ನೀವು ನಿಮ್ಮ ಪತ್ನಿಯರಿಗೆ ವಿಚ್ಛೇದನ (ತಲಾಕ್) ನೀಡುವುದಾದರೆ, ಅವರ ಇದ್ದತ್‌ನ (ದೀಕ್ಷಾಕಾಲದ) ಆರಂಭವನ್ನು ಲೆಕ್ಕಹಾಕಿ ವಿಚ್ಛೇದಿಸಿರಿ[1] ಮತ್ತು ಇದ್ದತ್‌ನ ಲೆಕ್ಕವನ್ನು ಇಟ್ಟುಕೊಳ್ಳಿ. ನಿಮ್ಮ ಪರಿಪಾಲಕನಾದ ಅಲ್ಲಾಹನನ್ನು ಭಯಪಡಿರಿ. ಅವರನ್ನು ಅವರ ಮನೆಗಳಿಂದ ಹೊರಹಾಕಬೇಡಿ ಮತ್ತು ಅವರು ಕೂಡ (ಸ್ವತಃ) ಮನೆಯಿಂದ ಹೊರಹೋಗದಿರಲಿ. ಅವರು ಸ್ಪಷ್ಟ ನೀಚಕೃತ್ಯವನ್ನು ಮಾಡಿದರೆ ಹೊರತು. ಇವು ಅಲ್ಲಾಹನ ಎಲ್ಲೆಗಳಾಗಿವೆ. ಯಾರು ಅಲ್ಲಾಹನ ಎಲ್ಲೆಗಳನ್ನು ಮೀರುತ್ತಾನೋ ಅವನು ಸ್ವಯಂ ಅವನ ಮೇಲೆಯೇ ಅಕ್ರಮವೆಸಗಿದ್ದಾನೆ. ಅಲ್ಲಾಹು ಇದರ ನಂತರ ಏನಾದರೂ ಹೊಸದನ್ನು ತರುವನೋ ಎಂದು ನಿಮಗೆ ತಿಳಿದಿಲ್ಲ. info

[1] ಅಂದರೆ ಪತ್ನಿ ಋತುಸ್ರಾವದಿಂದ ಶುದ್ಧಿಯಾಗಿ ಆಕೆಯೊಡನೆ ಸಂಭೋಗ ನಡೆಸುವ ಮುನ್ನ ತಲಾಕ್ (ವಿಚ್ಛೇದನ) ನೀಡಿರಿ. ಮಹಿಳೆಯ ಶುದ್ಧಾವಸ್ಥೆಯು ಇದ್ದತ್‌ನ ಆರಂಭವಾಗಿದೆ. ಋತುಸ್ರಾವದ ಅವಧಿಯಲ್ಲಿ ಅಥವಾ ಶುದ್ಧಿಯಾಗಿ ಸಂಭೋಗ ನಡೆಸಿದ ನಂತರ ತಲಾಕ್ ನೀಡಬಾರದು.

التفاسير: