আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

পৃষ্ঠা নং:close

external-link copy
135 : 4

یٰۤاَیُّهَا الَّذِیْنَ اٰمَنُوْا كُوْنُوْا قَوّٰمِیْنَ بِالْقِسْطِ شُهَدَآءَ لِلّٰهِ وَلَوْ عَلٰۤی اَنْفُسِكُمْ اَوِ الْوَالِدَیْنِ وَالْاَقْرَبِیْنَ ۚ— اِنْ یَّكُنْ غَنِیًّا اَوْ فَقِیْرًا فَاللّٰهُ اَوْلٰی بِهِمَا ۫— فَلَا تَتَّبِعُوا الْهَوٰۤی اَنْ تَعْدِلُوْا ۚ— وَاِنْ تَلْوٗۤا اَوْ تُعْرِضُوْا فَاِنَّ اللّٰهَ كَانَ بِمَا تَعْمَلُوْنَ خَبِیْرًا ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಾಕ್ಷಿಯಾಗಿದ್ದು, ನ್ಯಾಯ ನಿಷ್ಠೆಯಲ್ಲಿ ಸದಾ ದೃಢವಾಗಿ ನಿಲ್ಲಿರಿ. ಅದು ನಿಮಗೆ, ನಿಮ್ಮ ತಂದೆ-ತಾಯಿಗಳಿಗೆ, ಅಥವಾ ಹತ್ತಿರದ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸಹ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ—ಇಬ್ಬರಿಗೂ ಅಲ್ಲಾಹು ಬಹಳ ಹತ್ತಿರದಲ್ಲಿದ್ದಾನೆ. ಆದ್ದರಿಂದ ನೀವು ಸ್ವೇಚ್ಛೆಗಳನ್ನು ಹಿಂಬಾಲಿಸಿ ನ್ಯಾಯ ತಪ್ಪಿ ನಡೆಯಬೇಡಿ. ನೀವು (ಸಾಕ್ಷ್ಯವನ್ನು) ತಿರುಚಿದರೆ, ಅಥವಾ (ಸಾಕ್ಷಿ ನುಡಿಯದೆ) ಹಿಂದೆ ಸರಿದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ. info
التفاسير:

external-link copy
136 : 4

یٰۤاَیُّهَا الَّذِیْنَ اٰمَنُوْۤا اٰمِنُوْا بِاللّٰهِ وَرَسُوْلِهٖ وَالْكِتٰبِ الَّذِیْ نَزَّلَ عَلٰی رَسُوْلِهٖ وَالْكِتٰبِ الَّذِیْۤ اَنْزَلَ مِنْ قَبْلُ ؕ— وَمَنْ یَّكْفُرْ بِاللّٰهِ وَمَلٰٓىِٕكَتِهٖ وَكُتُبِهٖ وَرُسُلِهٖ وَالْیَوْمِ الْاٰخِرِ فَقَدْ ضَلَّ ضَلٰلًا بَعِیْدًا ۟

ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಸಂದೇಶವಾಹಕರಿಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ಅವರಿಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡಿ. ಯಾರು ಅಲ್ಲಾಹನನ್ನು, ಅವನ ದೇವದೂತರುಗಳನ್ನು, ಅವನ ಗ್ರಂಥಗಳನ್ನು, ಅವನ ಸಂದೇಶವಾಹಕರುಗಳನ್ನು ಮತ್ತು ಅಂತ್ಯದಿನವನ್ನು ನಿಷೇಧಿಸುತ್ತಾನೋ—ಅವನು ವಿದೂರ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾನೆ. info
التفاسير:

external-link copy
137 : 4

اِنَّ الَّذِیْنَ اٰمَنُوْا ثُمَّ كَفَرُوْا ثُمَّ اٰمَنُوْا ثُمَّ كَفَرُوْا ثُمَّ ازْدَادُوْا كُفْرًا لَّمْ یَكُنِ اللّٰهُ لِیَغْفِرَ لَهُمْ وَلَا لِیَهْدِیَهُمْ سَبِیْلًا ۟ؕ

ನಿಶ್ಚಯವಾಗಿಯೂ, ಸತ್ಯವಿಶ್ವಾಸ ಸ್ವೀಕರಿಸಿದ ನಂತರ ಸತ್ಯನಿಷೇಧಿಗಳಾದವರು, ನಂತರ ಪುನಃ ಸತ್ಯವಿಶ್ವಾಸಿಗಳಾಗಿ ಪುನಃ ಸತ್ಯನಿಷೇಧಿಗಳಾದವರು, ನಂತರ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಹೋದವರು ಯಾರೋ—ಅವರಿಗೆ ಅಲ್ಲಾಹು ಕ್ಷಮಿಸುವುದಿಲ್ಲ. ಅವರಿಗೆ ಸರಿದಾರಿಯನ್ನು ತೋರಿಸುವುದೂ ಇಲ್ಲ. info
التفاسير:

external-link copy
138 : 4

بَشِّرِ الْمُنٰفِقِیْنَ بِاَنَّ لَهُمْ عَذَابًا اَلِیْمَا ۟ۙ

ಕಪಟವಿಶ್ವಾಸಿಗಳಿಗೆ ಯಾತನಾಮಯ ಶಿಕ್ಷೆಯಿದೆಯೆಂಬ ಸುವಾರ್ತೆಯನ್ನು ತಿಳಿಸಿರಿ. info
التفاسير:

external-link copy
139 : 4

١لَّذِیْنَ یَتَّخِذُوْنَ الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ؕ— اَیَبْتَغُوْنَ عِنْدَهُمُ الْعِزَّةَ فَاِنَّ الْعِزَّةَ لِلّٰهِ جَمِیْعًا ۟ؕ

ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಿದವರು ಯಾರೋ—ಅವರು ಸತ್ಯನಿಷೇಧಿಗಳ ಬಳಿ ಪ್ರತಿಷ್ಠೆಯನ್ನು ಹುಡುಕುತ್ತಿದ್ದಾರೆಯೇ? ನಿಶ್ಚಯವಾಗಿಯೂ ಪ್ರತಿಷ್ಠೆಯು ಸಂಪೂರ್ಣವಾಗಿ ಅಲ್ಲಾಹನ ವಶದಲ್ಲಿದೆ (ಎಂದು ಅವರು ತಿಳಿದಿರಲಿ). info
التفاسير:

external-link copy
140 : 4

وَقَدْ نَزَّلَ عَلَیْكُمْ فِی الْكِتٰبِ اَنْ اِذَا سَمِعْتُمْ اٰیٰتِ اللّٰهِ یُكْفَرُ بِهَا وَیُسْتَهْزَاُ بِهَا فَلَا تَقْعُدُوْا مَعَهُمْ حَتّٰی یَخُوْضُوْا فِیْ حَدِیْثٍ غَیْرِهٖۤ ۖؗ— اِنَّكُمْ اِذًا مِّثْلُهُمْ ؕ— اِنَّ اللّٰهَ جَامِعُ الْمُنٰفِقِیْنَ وَالْكٰفِرِیْنَ فِیْ جَهَنَّمَ جَمِیْعَا ۟ۙ

ಜನರು ಅಲ್ಲಾಹನ ವಚನಗಳನ್ನು ನಿಷೇಧಿಸುವುದನ್ನು ಮತ್ತು ತಮಾಷೆ ಮಾಡುವುದನ್ನು ಕೇಳಿದರೆ, ಅವರು ಬೇರೆ ವಿಷಯದಲ್ಲಿ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ ಎಂಬ ಆದೇಶವನ್ನು ಗ್ರಂಥದಲ್ಲಿ ಈಗಾಗಲೇ ನಿಮಗೆ ಅವತೀರ್ಣಗೊಳಿಸಲಾಗಿದೆ.[1] ಅವರೊಡನೆ ಕುಳಿತುಕೊಂಡರೆ ನೀವು ಕೂಡ ಅವರಂತೆಯೇ ಆಗುವಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಕಪಟವಿಶ್ವಾಸಿಗಳನ್ನು ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯಲ್ಲಿ ಒಟ್ಟುಗೂಡಿಸುವನು. info

[1] ಈ ವಚನವು ಅವತೀರ್ಣವಾದದ್ದು ಮದೀನದಲ್ಲಿ. ಇದಕ್ಕೆ ಮೊದಲು ಮಕ್ಕಾದಲ್ಲಿ ಇದೇ ವಿಷಯದ ಕುರಿತು ವಚನವು ಅವತೀರ್ಣವಾಗಿತ್ತು. (ನೋಡಿ 6:68)

التفاسير: