আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

পৃষ্ঠা নং:close

external-link copy
71 : 28

قُلْ اَرَءَیْتُمْ اِنْ جَعَلَ اللّٰهُ عَلَیْكُمُ الَّیْلَ سَرْمَدًا اِلٰی یَوْمِ الْقِیٰمَةِ مَنْ اِلٰهٌ غَیْرُ اللّٰهِ یَاْتِیْكُمْ بِضِیَآءٍ ؕ— اَفَلَا تَسْمَعُوْنَ ۟

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಅಲ್ಲಾಹು ನಿಮಗೆ ಪುನರುತ್ಥಾನದ ದಿನದವರೆಗೆ ಕೇವಲ ರಾತ್ರಿಯನ್ನು ಮಾತ್ರ ಮುಂದುವರಿಸಿದರೆ ಅಲ್ಲಾಹನ ಹೊರತಾಗಿ ನಿಮಗೆ ಹಗಲಿನ ಬೆಳಕನ್ನು ತಂದುಕೊಡುವ ಬೇರೆ ದೇವರು ಯಾರಾದರೂ ಇದ್ದಾರೆಯೇ? ಏನು ನೀವು ಕಿವಿಗೊಡುವುದಿಲ್ಲವೇ?” info
التفاسير:

external-link copy
72 : 28

قُلْ اَرَءَیْتُمْ اِنْ جَعَلَ اللّٰهُ عَلَیْكُمُ النَّهَارَ سَرْمَدًا اِلٰی یَوْمِ الْقِیٰمَةِ مَنْ اِلٰهٌ غَیْرُ اللّٰهِ یَاْتِیْكُمْ بِلَیْلٍ تَسْكُنُوْنَ فِیْهِ ؕ— اَفَلَا تُبْصِرُوْنَ ۟

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮಗೆ ಪುನರುತ್ಥಾನದ ದಿನದವರೆಗೆ ಕೇವಲ ಹಗಲನ್ನು ಮಾತ್ರ ಮುಂದುವರಿಸಿದರೆ ನಿಮಗೆ ವಿಶ್ರಾಂತಿ ಪಡೆಯುಲು ರಾತ್ರಿಯನ್ನು ತಂದುಕೊಡುವ ದೇವರು ಅಲ್ಲಾಹನ ಹೊರತಾಗಿ ಬೇರೆ ಯಾರಾದರೂ ಇದ್ದಾರೆಯೇ? ಏನು ನೀವು ಕಣ್ತೆರೆದು ನೋಡುವುದಿಲ್ಲವೇ?” info
التفاسير:

external-link copy
73 : 28

وَمِنْ رَّحْمَتِهٖ جَعَلَ لَكُمُ الَّیْلَ وَالنَّهَارَ لِتَسْكُنُوْا فِیْهِ وَلِتَبْتَغُوْا مِنْ فَضْلِهٖ وَلَعَلَّكُمْ تَشْكُرُوْنَ ۟

ರಾತ್ರಿಯಲ್ಲಿ ನೀವು ವಿಶ್ರಾಂತಿ ಪಡೆಯಲು ಮತ್ತು ಹಗಲಲ್ಲಿ ಅವನ ಔದಾರ್ಯದಿಂದ ನಿಮ್ಮ ಉಪಜೀವನವನ್ನು ಹುಡುಕಲು ಹಾಗೂ ನೀವು ಕೃತಜ್ಞರಾಗಿ ಜೀವಿಸಲು ಅವನು ತನ್ನ ದಯೆಯಿಂದ ನಿಮಗೆ ರಾತ್ರಿ ಮತ್ತು ಹಗಲನ್ನು ಮಾಡಿಕೊಟ್ಟಿದ್ದಾನೆ. info
التفاسير:

external-link copy
74 : 28

وَیَوْمَ یُنَادِیْهِمْ فَیَقُوْلُ اَیْنَ شُرَكَآءِیَ الَّذِیْنَ كُنْتُمْ تَزْعُمُوْنَ ۟

ಅಲ್ಲಾಹು ಅವರನ್ನು ಕರೆಯುವ ದಿನ. ಅವನು ಕೇಳುವನು: “ನೀವು ನನ್ನ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ದೇವರುಗಳು ಎಲ್ಲಿದ್ದಾರೆ?” info
التفاسير:

external-link copy
75 : 28

وَنَزَعْنَا مِنْ كُلِّ اُمَّةٍ شَهِیْدًا فَقُلْنَا هَاتُوْا بُرْهَانَكُمْ فَعَلِمُوْۤا اَنَّ الْحَقَّ لِلّٰهِ وَضَلَّ عَنْهُمْ مَّا كَانُوْا یَفْتَرُوْنَ ۟۠

ನಾವು ಎಲ್ಲಾ ಸಮುದಾಯಗಳಿಂದಲೂ ಒಬ್ಬೊಬ್ಬ ಸಾಕ್ಷಿಯನ್ನು ಬೇರ್ಪಡಿಸುವೆವು. ನಂತರ ನಾವು ಹೇಳುವೆವು: “ನಿಮ್ಮ ಸಾಕ್ಷ್ಯವನ್ನು ತನ್ನಿರಿ.” ಆಗ ಸತ್ಯವಿರುವುದು ಅಲ್ಲಾಹನಲ್ಲಿ ಎಂದು ಅವರಿಗೆ ಮನದಟ್ಟಾಗುವುದು. ಅವರು ಸುಳ್ಳು ಆರೋಪಗಳೆಲ್ಲವೂ ಅವರನ್ನು ಬಿಟ್ಟು ಹೋಗುವುವು. info
التفاسير:

external-link copy
76 : 28

اِنَّ قَارُوْنَ كَانَ مِنْ قَوْمِ مُوْسٰی فَبَغٰی عَلَیْهِمْ ۪— وَاٰتَیْنٰهُ مِنَ الْكُنُوْزِ مَاۤ اِنَّ مَفَاتِحَهٗ لَتَنُوْٓاُ بِالْعُصْبَةِ اُولِی الْقُوَّةِ ۗ— اِذْ قَالَ لَهٗ قَوْمُهٗ لَا تَفْرَحْ اِنَّ اللّٰهَ لَا یُحِبُّ الْفَرِحِیْنَ ۟

ನಿಶ್ಚಯವಾಗಿಯೂ ಕಾರೂನ್ ಮೂಸಾರ ಜನರಲ್ಲಿ ಸೇರಿದವನಾಗಿದ್ದನು.[1] ಅವನು ಅವರ ಮೇಲೆ ಅತಿರೇಕವೆಸಗುತ್ತಿದ್ದನು. ನಾವು ಅವನಿಗೆ ಎಷ್ಟು ದೊಡ್ಡ ದೊಡ್ಡ ಖಜಾನೆಗಳನ್ನು ನೀಡಿದ್ದೇವೆಂದರೆ, ಬಲಿಷ್ಠರಾದ ಹಲವಾರು ಜನರು ಕೂಡ ಬಹಳ ಕಷ್ಟದಿಂದಲೇ ಅವುಗಳ ಕೀಲಿಕೈಗಳನ್ನು ಹೊತ್ತು ಸಾಗುತ್ತಿದ್ದರು. ಅವನ ಜನರು ಅವನೊಡನೆ ಹೇಳಿದ ಸಂದರ್ಭ: “ಅಟ್ಟಹಾಸ ಮೆರೆಯಬೇಡ. ಖಂಡಿತನಾಗಿಯೂ ಅಟ್ಟಹಾಸ ಮೆರೆಯುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. info

[1] ಕಾರೂನ್ ಇಸ್ರಾಯೇಲ್ ಜನಾಂಗದಲ್ಲಿ ಸೇರಿದವನು. ಅಲ್ಲಾಹು ಅವನಿಗೆ ಅಪಾರ ಐಶ್ವರ್ಯವನ್ನು ನೀಡಿದಾಗ ಅವನು ಅಲ್ಲಾಹನನ್ನು ಮರೆತು ಜನರ ಮೇಲೆ ಅತಿರೇಕವೆಸಗತೊಡಗಿದನು.

التفاسير:

external-link copy
77 : 28

وَابْتَغِ فِیْمَاۤ اٰتٰىكَ اللّٰهُ الدَّارَ الْاٰخِرَةَ وَلَا تَنْسَ نَصِیْبَكَ مِنَ الدُّنْیَا وَاَحْسِنْ كَمَاۤ اَحْسَنَ اللّٰهُ اِلَیْكَ وَلَا تَبْغِ الْفَسَادَ فِی الْاَرْضِ ؕ— اِنَّ اللّٰهَ لَا یُحِبُّ الْمُفْسِدِیْنَ ۟

ಅಲ್ಲಾಹು ನಿನಗೆ ನೀಡಿದ ಆಸ್ತಿಯಿಂದ ಪರಲೋಕದ ಯಶಸ್ಸನ್ನು ಅರಸು. ನಿನ್ನ ಇಹಲೋಕದ ಪಾಲನ್ನೂ ಮರೆಯಬೇಡ. ಅಲ್ಲಾಹು ನಿನಗೆ ಒಳಿತು ಮಾಡಿದಂತೆ ನೀನು ಜನರಿಗೂ ಒಳಿತು ಮಾಡು. ಭೂಮಿಯಲ್ಲಿ ಕಿಡಿಗೇಡಿತನ ಮಾಡಲು ಮುಂದಾಗಬೇಡ. ನಿಶ್ಚಯವಾಗಿಯೂ ಕಿಡಿಗೇಡಿತನ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.” info
التفاسير: