আল-কোৰআনুল কাৰীমৰ অৰ্থানুবাদ - কানাড়া অনুবাদ- হামঝাহ বাতৌৰ

external-link copy
22 : 14

وَقَالَ الشَّیْطٰنُ لَمَّا قُضِیَ الْاَمْرُ اِنَّ اللّٰهَ وَعَدَكُمْ وَعْدَ الْحَقِّ وَوَعَدْتُّكُمْ فَاَخْلَفْتُكُمْ ؕ— وَمَا كَانَ لِیَ عَلَیْكُمْ مِّنْ سُلْطٰنٍ اِلَّاۤ اَنْ دَعَوْتُكُمْ فَاسْتَجَبْتُمْ لِیْ ۚ— فَلَا تَلُوْمُوْنِیْ وَلُوْمُوْۤا اَنْفُسَكُمْ ؕ— مَاۤ اَنَا بِمُصْرِخِكُمْ وَمَاۤ اَنْتُمْ بِمُصْرِخِیَّ ؕ— اِنِّیْ كَفَرْتُ بِمَاۤ اَشْرَكْتُمُوْنِ مِنْ قَبْلُ ؕ— اِنَّ الظّٰلِمِیْنَ لَهُمْ عَذَابٌ اَلِیْمٌ ۟

ವಿಷಯವನ್ನು ತೀರ್ಮಾನಿಸಲಾದಾಗ ಶೈತಾನನು ಹೇಳುವನು: “ನಿಜಕ್ಕೂ ಅಲ್ಲಾಹು ನಿಮಗೆ ಮಾಡಿದ ವಾಗ್ದಾನವು ಸತ್ಯವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆ. ಆದರೆ ನಾನು ನನ್ನ ವಾಗ್ದಾನವನ್ನು ಉಲ್ಲಂಘಿಸಿದ್ದೇನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ನಾನು ನಿಮ್ಮನ್ನು ಕರೆದಾಗ ನೀವು ನನ್ನ ಹಿಂದೆ ಓಡಿ ಬಂದಿರಿ. ಆದ್ದರಿಂದ ನನ್ನ ಮೇಲೆ ಅಪವಾದ ಹೊರಿಸಬೇಡಿ. ನಿಮ್ಮ ಮೇಲೆಯೇ ಅಪವಾದ ಹೊರಿಸಿರಿ. ನನ್ನನ್ನು ಸಹಾಯಕ್ಕಾಗಿ ಕೂಗಬೇಡಿ. ನಾನು ನಿಮ್ಮನ್ನು ಸಹಾಯಕ್ಕಾಗಿ ಕೂಗುವುದಿಲ್ಲ. ನೀವು ಇದಕ್ಕೆ ಮೊದಲು ನನ್ನನ್ನು ಅಲ್ಲಾಹನೊಂದಿಗೆ ಸಹಭಾಗಿಯನ್ನಾಗಿ ಮಾಡಿದ್ದನ್ನು ನಾನು ನಿಷೇಧಿಸಿದ್ದೇನೆ. ನಿಶ್ಚಯವಾಗಿಯೂ, ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿದೆ.” info
التفاسير: