আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
31 : 74

وَمَا جَعَلْنَاۤ اَصْحٰبَ النَّارِ اِلَّا مَلٰٓىِٕكَةً ۪— وَّمَا جَعَلْنَا عِدَّتَهُمْ اِلَّا فِتْنَةً لِّلَّذِیْنَ كَفَرُوْا ۙ— لِیَسْتَیْقِنَ الَّذِیْنَ اُوْتُوا الْكِتٰبَ وَیَزْدَادَ الَّذِیْنَ اٰمَنُوْۤا اِیْمَانًا وَّلَا یَرْتَابَ الَّذِیْنَ اُوْتُوا الْكِتٰبَ وَالْمُؤْمِنُوْنَ ۙ— وَلِیَقُوْلَ الَّذِیْنَ فِیْ قُلُوْبِهِمْ مَّرَضٌ وَّالْكٰفِرُوْنَ مَاذَاۤ اَرَادَ اللّٰهُ بِهٰذَا مَثَلًا ؕ— كَذٰلِكَ یُضِلُّ اللّٰهُ مَنْ یَّشَآءُ وَیَهْدِیْ مَنْ یَّشَآءُ ؕ— وَمَا یَعْلَمُ جُنُوْدَ رَبِّكَ اِلَّا هُوَ ؕ— وَمَا هِیَ اِلَّا ذِكْرٰی لِلْبَشَرِ ۟۠

ನರಕದ ಕಾವಲುಗಾರರನ್ನಾಗಿ ನಾವು ಕೇವಲ ಮಲಕ್ಗಳನ್ನು ನಿಯೋಗಿಸುತ್ತೇವೆ ಮತ್ತು ಅವರ ಸಂಖ್ಯೆಯನ್ನು ಸತ್ಯನಿಷೇಧಿಗಳ ಪಾಲಿಗೆ ಪರೀಕ್ಷಾ ಸಾಧನವನ್ನಾಗಿ ನಿಶ್ಚಯಿಸಿದ್ದೇವೆ, ಇದು ಗ್ರಂಥ ನೀಡಲಾದವರು ನಂಬಲೆಂದೂ (ಅವರ ಗ್ರಂಥದಲ್ಲೂ ಇದೇ ಸಂಖ್ಯೆ ಇದೆ) ಸತ್ಯವಿಶ್ವಾಸಿಗಳ ವಿಶ್ವಾಸವು ವೃದ್ಧಿಸಲೆಂದೂ, ಗ್ರಂಥ ನೀಡಲಾದವರು ಮತ್ತು ಸತ್ಯವಿಶ್ವಾಸಿಗಳು ಕುರ್ಆನಿನಲ್ಲಿ ಸಂದೇಹ ಪಡದಿರಲೆಂದು ಮತ್ತು ಹೃದಯದಲ್ಲಿ (ಕಾಪಟ್ಯದ) ರೋಗವಿದ್ದವರು ಮತ್ತು ಸತ್ಯನಿಷೇಧಿಗಳು “ಈ ಮಾತಿನ ಮೂಲಕ ಅಲ್ಲಾಹನ ಉದ್ದೇಶವೇನು?” ಎಂದು ಹೇಳಲೆಂದಾಗಿದೆ, ಇದೇ ಪ್ರಕಾರ ಅಲ್ಲಾಹನು (ಒಂದೇ ಮಾತಿನಿಂದ) ತಾನಿಚ್ಛಿಸುವವರನ್ನು ದಾರಿಗೆಡಿಸುತ್ತಾನೆ ಮತ್ತು ತಾನಿಚ್ಛಿಸುವವರನ್ನು ಸನ್ಮರ‍್ಗದಲ್ಲಿ ಮುನ್ನಡೆಸುತ್ತಾನೆ. ನಿನ್ನ ಪ್ರಭುವಿನ ಸೈನ್ಯಗಳನ್ನು ಅವನ ಹೊರತು ಇನ್ನಾರೂ ಅರಿಯಲಾರರು, ಇದು ಸಕಲ ಮಾನವರಿಗೆ ಸ್ಪಷ್ಟ ಉಪದೇಶವಲ್ಲದೇ ಇನ್ನೇನೂ ಅಲ್ಲ. info
التفاسير: