আল-কোৰআনুল কাৰীমৰ অৰ্থানুবাদ - কানাড়া অনুবাদ- বশীৰ মিছুৰী

external-link copy
106 : 5

یٰۤاَیُّهَا الَّذِیْنَ اٰمَنُوْا شَهَادَةُ بَیْنِكُمْ اِذَا حَضَرَ اَحَدَكُمُ الْمَوْتُ حِیْنَ الْوَصِیَّةِ اثْنٰنِ ذَوَا عَدْلٍ مِّنْكُمْ اَوْ اٰخَرٰنِ مِنْ غَیْرِكُمْ اِنْ اَنْتُمْ ضَرَبْتُمْ فِی الْاَرْضِ فَاَصَابَتْكُمْ مُّصِیْبَةُ الْمَوْتِ ؕ— تَحْبِسُوْنَهُمَا مِنْ بَعْدِ الصَّلٰوةِ فَیُقْسِمٰنِ بِاللّٰهِ اِنِ ارْتَبْتُمْ لَا نَشْتَرِیْ بِهٖ ثَمَنًا وَّلَوْ كَانَ ذَا قُرْبٰی ۙ— وَلَا نَكْتُمُ شَهَادَةَ ۙ— اللّٰهِ اِنَّاۤ اِذًا لَّمِنَ الْاٰثِمِیْنَ ۟

ಓ ಸತ್ಯವಿಶ್ವಾಸಿಗಳೇ, ನಿಮ್ಮಲ್ಲೊಬ್ಬನು ಮರಣಸನ್ನಾದರೆ ಮತ್ತು ವಸಿಯ್ಯತ್ತಿನ (ಉಯಿಲು) ಮಾಡುವ ಸಂದರ್ಭ ಬಂದರೆ ನಿಮ್ಮ ಧರ್ಮದವರಾದ ಇಬ್ಬರು ನ್ಯಾಯವಂತರು ಸಾಕ್ಷಿ ವಹಿಸಲಿ. ಇನ್ನು ನೀವು ಪ್ರಯಾಣದಲ್ಲಿದ್ದರೆ ಮತ್ತು ನೀವು ಮರಣಾಸನ್ನರಾದರೆ ಅನ್ಯಧರ್ಮೀಯವರಾದರೂ ಇಬ್ಬರು ಸಾಕ್ಷಿವಹಿಸಲಿ. ನಿಮಗೆ ಸಂದೇಹವುAಟಾದರೆ ನಮಾಝ್ ನಿರ್ವಹಿಸಿದ ನಂತರ ಅವರಿಬ್ಬರನ್ನು ತಡೆದುಕೊಳ್ಳಿರಿ. ನಂತರ ಅವರಿಬ್ಬರೂ (ಜನರ ಮುಂದೆ) ಅಲ್ಲಾಹುವಿನ ಮೇಲೆ ಆಣೆಯಿಟ್ಟು ನಾವು ಈ ಆಣೆಗೆ ಪ್ರತಿಯಾಗಿ ಯಾವುದೇ ಲಾಭವನ್ನು ಪಡೆಯಲು ಇಚ್ಛಿಸುವುದಿಲ್ಲ. ಅದು ನಿಕಟ ಸಂಬAಧಿಕನಿಗೆ ಸಂಬAಧಿಸಿದ ವಿಷಯವಾದರೂ ಸರಿಯೇ ಮತ್ತು ನಾವು ಅಲ್ಲಾಹನ ಮಾತನ್ನು ಬಚ್ಚ್ಚಿಡಲಾರೆವು. ಹಾಗೇನಾದರು ಆದರೆ ನಾವು ಪಾಪವೆಸಗಿದವರಲ್ಲಾಗುವೆವು ಎಂದು ಹೇಳಬೇಕು. info
التفاسير: